ಇನ್ನಷ್ಟೂ ಸಲ್ಮಾನ್‌ ಖಾನ್‌ ಕರಾಳ ಮುಖ ಬಹಿರಂಗ ಪಡಿಸಿದ ಮಾಜಿ ಗೆಳತಿ ಸೋಮಿ ಆಲಿ

Published : Jan 06, 2023, 05:22 PM IST

ನಟಿ ಸೋಮಿ ಅಲಿ (Somy Ali) ಮತ್ತೊಮ್ಮೆ ಸಲ್ಮಾನ್ ಖಾನ್ (Salman Khan) ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಸಲ್ಮಾನ್‌ನ ಹೀನಕೃತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಈ ಬಾರಿ ಅವರು ಬಹಿರಂಗಪಡಿಸಿದ ಸಂಗತಿಗಳನ್ನು ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ. ಸೋಮಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು,, ಅದರಲ್ಲಿ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ, ಅವರು ಬಾಲ್ಯದಲ್ಲಿ ಎದುರಿಸಿದ ದೌರ್ಜನ್ಯ ಮತ್ತು ಸಲ್ಮಾನ್‌ನಿಂದ ಅನೇಕ ಹೊಡೆತಗಳು ಮತ್ತು ನಿಂದನೆ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದೆ, ಸೋಮಿ ಇನ್ಸ್ಟಾಗ್ರಾಮ್ ಮೂಲಕ ಸಲ್ಮಾನ್ ವರ್ತನೆಗಳನ್ನು ತೆರೆದಿಟ್ಟಿದ್ದರು. ಆದರೆ  ನಂತರ ಅವರು ಈ ಪೋಸ್ಟ್ ಅನ್ನು ಡಿಲಿಟ್‌ ಮಾಡಿದ್ದರು. ಆದರೆ ಈ ಬಾರಿ ಅವರು ಹಾಗೆ ಮಾಡಲಿಲ್ಲ. ಈ ಬಾರಿ ಸಲ್ಮಾನ್ ಖಾನ್ ಬಗ್ಗೆ ಸೋಮಿ ಅಲಿ ಏನು ಹೇಳಿದ್ದಾರೆ ಮತ್ತು ಅವರ ಅಕ್ರಮಗಳು ಬಗ್ಗೆ ನಟಿ  ಬಹಿರಂಗಪಡಿಸಿದ್ದೇನು?

PREV
17
ಇನ್ನಷ್ಟೂ ಸಲ್ಮಾನ್‌ ಖಾನ್‌ ಕರಾಳ ಮುಖ ಬಹಿರಂಗ ಪಡಿಸಿದ ಮಾಜಿ ಗೆಳತಿ ಸೋಮಿ ಆಲಿ

ಸೋಮಿ ಅಲಿ Instagram ನಲ್ಲಿ ಎರಡು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ, ಮೊದಲ ಪೋಸ್ಟ್‌ನಲ್ಲಿ ಅವರು ತಮ್ಮ NGO ನೋ ಮೋರ್ ಟಿಯರ್ಸ್ ಕುರಿತು ಮಾತನಾಡಿದ್ದಾರೆ.

27

'ನನ್ನ ಎನ್‌ಜಿಒ ನೋ ಮೋರ್ ಟಿಯರ್ಸ್ ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ಹಿಂಸಾಚಾರದ ಬಲಿಪಶುಗಳಾದವರಿಗೆ ರಕ್ಷಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಇದನ್ನು ಡಿಸ್ಕವರಿ ಪ್ಲಸ್‌ನಲ್ಲಿ ಡಾಕ್ಯು-ಸರಣಿಯಾಗಿ ತೋರಿಸಲಾಗಿದೆ. ಸಂತ್ರಸ್ತರ ರಕ್ಷಣೆಗಾಗಿ ಕಳೆದ 15 ವರ್ಷಗಳಿಂದ ನನ್ನ ರಕ್ತ, ಬೆವರು ಸುರಿಸಿ ಸಂಬಳವಿಲ್ಲದೆ ದುಡಿದಿದ್ದೇನೆ' ಎಂದು ಸೋಮಿ ಆಲಿ ಬರೆದು ಕೊಂಡಿದ್ದಾರೆ

37

'ನೋ ಮೋರ್ ಟಿಯರ್ಸ್ ಅನ್ನು ಏಕೆ ಪ್ರಾರಂಭಿಸಲಾಯಿತು ಎಂದು ಹೇಳುವುದು ಅಗತ್ಯವಾಗಿತ್ತು ಮತ್ತು ಈ ಸರಣಿಯಲ್ಲಿ ನಾನು ತುಂಬಾ ಪ್ರಾಮಾಣಿಕನಾಗಿದ್ದೆ. ನಾನು ಕೌಟುಂಬಿಕ ಹಿಂಸೆಯ ಮನೆಯಲ್ಲಿ ಬೆಳೆದಿದ್ದೇನೆ ಎಂದು ನಾನು ಸ್ಪಷ್ಟಪಡಿಸಿದ್ದೇನೆ. ಐದನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ಹಂಚಿಕೊಂಡಿದ್ದೆ' ಎಂದು ನಟಿ ಮತ್ತಷ್ಟು ಹೇಳಿಕೊಂಡಿದ್ದಾರೆ.

47

'ನಂತರ 9 ನೇ ವಯಸ್ಸಿನಲ್ಲಿ, ಪಾಕಿಸ್ತಾನದ ಮನೆಯ ಸಹಾಯಕರಿಂದ ನನ್ನನ್ನು ಲೈಂಗಿಕವಾಗಿ ನಿಂದಿಸಲಾಯಿತು. 14ನೇ ವಯಸ್ಸಿನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿದ್ದು, ಅದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದೇನೆ. ಅಲ್ಲದೆ ನಾನು 8 ವರ್ಷಗಳಿಂದ ಡೇಟಿಂಗ್ ಮಾಡಿದ ಭಾರತದ  ವ್ಯಕ್ತಿಯಿಂದ ನಾನು ಕೌಟುಂಬಿಕ ಹಿಂಸೆಗೆ ಒಳಗಾಗಿದ್ದೆ. ಆ ವ್ಯಕ್ತಿಯ ಹೆಸರನ್ನು ಹೇಳದೆ ನಾನು ಅದರ ಬಗ್ಗೆ ಮಾತನಾಡಿದ್ದೇನೆ ಎಂದು ಸೋಮಿ ಆಲಿ ಬರೆದಿದ್ದಾರೆ.

57

ಅದೇ ಸಮಯದಲ್ಲಿ ಸೋಮಿ ಅಲಿ ಮತ್ತೊಂದು ಪೋಸ್ಟ್‌ನಲ್ಲಿ  ಹೀಗೆ ಬರೆದಿದ್ದಾರೆ - 'ನನ್ನ ಎನ್‌ಜಿಒದ ಹೆಚ್ಚಿನ ದಾನಿಗಳು ಅಮೆರಿಕದಲ್ಲಿ ಮತ್ತು ಅವರ ತಾಯ್ನಾಡಿನಲ್ಲಿ ವಾಸಿಸುವ ಭಾರತೀಯರು ಎಂಬುದು ನನಗೆ ಬೇಸರ ತಂದಿದೆ. ಭಾರತದಿಂದ ಅಮೆರಿಕಕ್ಕೆ ಕರೆತಂದ ಅಸಂಖ್ಯಾತ ಸಂತ್ರಸ್ತರನ್ನು ನಾವು ರಕ್ಷಿಸಿದ್ದೇವೆ.  ಭಾರತದಲ್ಲಿ, ಫೈಟ್ ಆಂಡ್‌  ಫ್ಲೈಟ್ ಎಂಬ ಡಿಸ್ಕವರಿ ಸರಣಿ ನಿಷೇಧಿಸಲು ಸಲ್ಮಾನ್  ತನ್ನ ಎಲ್ಲ ಶಕ್ತಿಯನ್ನು ಹಾಕಿದ್ದಾರೆ ಎಂದು ಹೇಳಿದರು.
 


 

67

'ನ್ಯೂಯಾರ್ಕ್‌ನಲ್ಲಿರುವ ಅವರ ವಕೀಲರು,  ನನಗೆ ನಾಚಿಕೆಗೇಡು ಮತ್ತು ಸುಳ್ಳು ಎಂದು ಬೆದರಿಕೆ ಹಾಕುವ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಮತ್ತು ಸಲ್ಮಾನ್ ನನ್ನನ್ನು ಹೊಡೆದಿದ್ದಾರೆ ಮತ್ತು ನಾನು ಇದನ್ನು ಹೇಳುವುದನ್ನು ನಿಲ್ಲಿಸದಿದ್ದರೆ, ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಇದು ತುಂಬಾ ಅಸಹ್ಯಕರವಾಗಿತ್ತು ಅವನ ಸುತ್ತಲಿರುವ ಎಲ್ಲರಿಗೂ ಮತ್ತು ಮನೆಯ ಸಹಾಯದವರಿಗೂ ಸಲ್ಮಾನ್‌  ನನ್ನನ್ನು ದೈಹಿಕವಾಗಿ ನಿಂದಿಸಿದ್ದಾನೆ ಎಂದು ತಿಳಿದಿತ್ತು. ನನ್ನ ಸೇವಕಿ ನಜ್ಮಾ ಕೂಡ ನನ್ನ ಮಲಗುವ ಕೋಣೆಯ ಹೊರಗೆ ನಿಂತು ನನ್ನನ್ನು ಕೊಲ್ಲಬೇಡಿ ಎಂದು ಬೇಡಿಕೊಳ್ಳುತ್ತಿದ್ದಳು. ನನ್ನ ಕಿರುಚಾಟ ಕೇಳಿ ಹೀಗೆ ಮಾಡಬೇಡ ಎಂದು ಅಳುತ್ತಿದ್ದಳು' ಎಂದು ಸೋಮಿ ಆಲಿ ತಮ್ಮ ಮಾಜಿ ಬಾಯ್‌ಫ್ರೆಂಡ್‌ ಸಲ್ಮಾನ್‌ ಖಾನ್‌ ವಿರುದ್ಧ ಆರೋಪ ಮಾಡಿದ್ದಾರೆ.

77

'ಆ ಸಮಯದಲ್ಲಿ ನನ್ನ ಮೇಕಪ್ ಕಲಾವಿದ ಅಜಯ್ ಶೆಲಾರ್ ನನ್ನ ಕುತ್ತಿಗೆ ಮತ್ತು ಅನೇಕ ಸ್ಥಳಗಳಲ್ಲಿ ಫೌಂಡೇಶನ್‌ ಕ್ರೀಮ್‌ ಹಚ್ಚುವ ಮೂಲಕ ಮೂಗೇಟುಗಳನ್ನು ಮರೆಮಾಡಬೇಕಾಗಿತ್ತು. ನಾನು ಸ್ಟುಡಿಯೋಗೆ ಹೋಗುವಾಗ, ನಿರ್ಮಾಪಕರು ನನ್ನ ಗಾಯಗಳನ್ನು ಗಮನಿಸಿ ಅವುಗಳನ್ನು ಸರಿಪಡಿಸಲು ಅಜಯ್ ಅವರನ್ನು ಕೇಳುತ್ತಿದ್ದರು. ಇದು ಬ್ರೇಕಿಂಗ್ ನ್ಯೂಸ್ ಅಲ್ಲ, ಸಲ್ಮಾನ್ ಇಷ್ಟೆಲ್ಲಾ ಮಾಡಿದ್ದು ನನ್ನೊಬ್ಬಳಿಗೆ ಮಾತ್ರವಲ್ಲ. ಆದರೆ ಉಳಿದವುಗಳನ್ನು ನಾನು ಇದರಲ್ಲಿ ಸೇರಿಸುವುದಿಲ್ಲ. ಕೆಲವರು ಎಫ್‌ಐಆರ್ ಕೂಡ ದಾಖಲಿಸಿದ್ದರು. 90ರ ದಶಕದಲ್ಲಿ ಈ ಸುದ್ದಿ ಮುಖ್ಯಾಂಶಗಳ ಭಾಗವಾಗಿತ್ತು' ಎಂದು ಸೋಮಿ ಆಲಿ ತಮ್ಮ ಪೋಸ್ಟ್‌ನಲ್ಲಿ ಬಹಿರಂಗ ಪಡಿಸಿದ್ದಾರೆ.

Read more Photos on
click me!

Recommended Stories