AR Rahman ಧರ್ಮ ತೊರೆದು, ಇಸ್ಲಾಂ ಸ್ವೀಕರಿಸಿದ್ದೇಕೆ?

Published : Jan 06, 2023, 05:02 PM IST

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rehman) ಇಂದು ಅಂದರೆ ಜನವರಿ 6 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನವರಿ 6, 1966 ರಂದು ಚೆನ್ನೈನಲ್ಲಿ ಮಧ್ಯಮ ವರ್ಗದ ಹಿಂದೂ ಕುಟುಂಬದಲ್ಲಿ ಜನಿಸಿದ ದಿಲೀಪ್ ಚಂದ್ರಶೇಖರ್ ಅಕಾ ಆರ್ ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಅವರು ಸೌತ್ ಇಂಡಸ್ಟ್ರಿಯಲ್ಲಿ (ಮಲಯಾಳಂ ಚಲನಚಿತ್ರಗಳು) ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ಅವರು ಸಂಗೀತ ಉಪಕರಣಗಳನ್ನು ಒದಗಿಸುತ್ತಿದ್ದರು, ಅದರಿಂದ  ಎಲ್ಲಾ ರೀತಿಯ ಸಂಗೀತ ಉಪಕರಣಗಳು ಅವರ ಮನೆಯಲ್ಲಿ ಇದ್ದವು. ಈ ರೀತಿಯಾಗಿ ರೆಹಮಾನ್ ಸಂಗೀತ ಶಿಕ್ಷಣ  ಪಡೆದರು. ಅಷ್ಟಕ್ಕೂ ದಿಲೀಪ್ ಚಂದ್ರಶೇಖರ್ ಎಆರ್ ರೆಹಮಾನ್ ಆದದ್ದೇಕೆ ಗೊತ್ತಾ?

PREV
19
 AR Rahman  ಧರ್ಮ  ತೊರೆದು, ಇಸ್ಲಾಂ ಸ್ವೀಕರಿಸಿದ್ದೇಕೆ?

ಎ.ಆರ್. ರೆಹಮಾನ್ ಧರ್ಮ ಬದಲಾಯಿಸುವ ಮುನ್ನ ಅವರ ಹೆಸರು ದಿಲೀಪ್ ಶೇಖರ್ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅವರು ಈ ಹೆಸರನ್ನು ತುಂಬಾ ದ್ವೇಷಿಸುತ್ತಿದ್ದರು. ಬಾಲ್ಯದಿಂದಲೂ, ಅವರು ಈ ಹೆಸರನ್ನು ವಿಚಿತ್ರ ಎಂದು ಭಾವಿಸುತ್ತಿದ್ದರು ಮತ್ತು ಅವರ ಹೆಸರೇ ಸರಿಯಿಲ್ಲ ಅನ್ನಿಸಿತು.
 

29
AR Rahman

ರೆಹಮಾನ್ ಓದುವ ವಿಷಯದಲ್ಲಿ ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ. ಅಧ್ಯಾಪಕರ ಬೈಗುಳ ಮತ್ತು ಸಹ ವಿದ್ಯಾರ್ಥಿಗಳ ಮುಂದೆ ಕಡಿಮೆ ಅಂಕಗಳಿಸಿದ ಕಾರಣ, ಅವರು ತುಂಬಾ ಮುಜುಗರಕ್ಕೊಳಗಾದರು, ಒಮ್ಮೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯೋಚಿಸುತ್ತಿದ್ದರಂತೆ. .

39

ಅವರು ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ತಂದೆಯೊಂದಿಗೆ ಸಂಗೀತ ಸ್ಟುಡಿಯೋದಲ್ಲಿ ಗಂಟೆಗಳ ಕಾಲ ಕಳೆಯುತ್ತಿದ್ದರು. ಈ ಸಮಯದಲ್ಲಿ, ಅವರು ಅನೇಕ ಸಂಗೀತ ವಾದ್ಯಗಳನ್ನು ನುಡಿಸಲು ಕಲಿತರು.

49

ರೆಹಮಾನ್ ಅವರ ಚಿಕ್ಕ ವಯಸ್ಸಿನಲ್ಲಿರುವಾಗಲೇ ಅವರ ತಂದೆಯನ್ನು ಕಳೆದು ಕೊಂಡರು . ಇದಾದ ನಂತರ ಅವರ ಮನೆಯ ಸ್ಥಿತಿ ಹದಗೆಡತೊಡಗಿತು. ಬಡತನದ ಸಮಯದಲ್ಲಿ, ಅವರ ಸಹೋದರಿ ಯಾವುದೋ ಕಾಯಿಲೆಯಿಂದ ನರಳುತ್ತಿದ್ದರು.

59

ವೈದ್ಯರು ಸಾಕಷ್ಟು ಪ್ರಯತ್ನಿಸಿದರು. ಆಗ  ದಿಲೀಪ್ ಶೇಖರ್ ಅವರ ತಾಯಿ ಮುಸ್ಲಿಂ ಫಕೀರನ್ನು ಬೇಟಿಯಾದರು. ರೆಹಮಾನ್ ಅವರ ಸಹೋದರಿ ಫಕೀರನ ಪ್ರಾರ್ಥನೆಯಿಂದ ಗುಣಮುಖರಾದರು. ನಂತರ ರೆಹಮಾನ್ ಅವರ ಫಕೀರ್, ದರ್ಗಾ ಮತ್ತು ಇಸ್ಲಾಂನಲ್ಲಿ ನಂಬಿಕೆ ಹೆಚ್ಚಾಯಿತು.

69

ದಿಲೀಪ್ ಶೇಖರ್‌ ಈಗ ತಾನು ಅಲ್ಲಾನನ್ನು ಮಾತ್ರ ಆರಾಧಿಸುತ್ತೇನೆ ಎಂದು ನಿರ್ಧರಿಸಿದ್ದರು ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ರೆಹಮಾನ್ ಎಂಬ ಹೆಸರು ಅವರ ಮನಸ್ಸಿಗೆ ತುಂಬಾ ಹಿಡಿಸಿತ್ತು, ಆದ್ದರಿಂದ ಅವರು ತನ್ನನ್ನು ರೆಹಮಾನ್ ಎಂದು ಕರೆದರು.

79

ಅದೇ ಸಮಯದಲ್ಲಿ, ಅವರ ತಾಯಿ ಕೂಡ ಇಸ್ಲಾಂ ಧರ್ಮದಿಂದ  ಪ್ರಭಾವಿತರಾಗಿದ್ದರು. ಅವರು ರೆಹಮಾನ್ ಅವರ ಹೆಸರಿಗೆ ಅಲ್ಲಾವನ್ನು ಸೇರಿಸಲು ಬಯಸಿದ್ದರು.

89

ಇದಾದ ನಂತರ, ರಹಮಾನ್ ತನ್ನ ತಾಯಿಯ ಮಾತನ್ನು ಗಮನದಲ್ಲಿಟ್ಟುಕೊಂಡು ತನ್ನ ಹೆಸರಿಗೆ ಅಲ್ಲಾ ಎಂದು  ಸೇರಿಸಿಕೊಂಡರು  ಹೀಗಾಗಿ ಅವರು ಅಲ್ಲಾ ರಕ್ಖಾ ರೆಹಮಾನ್ ಆದರು. ದಿಲೀಪ್ ಶೇಖರ್ 1989 ರಲ್ಲಿ 23 ನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.


 

99

ಎಆರ್ ರೆಹಮಾನ್ ಅವರು 1991 ರಲ್ಲಿ ಸಂಗೀತ ಧ್ವನಿಮುದ್ರಣವನ್ನು ಪ್ರಾರಂಭಿಸಿದರು, ಅವರ ಸಂಗೀತದಿಂದ ಪ್ರಭಾವಿತರಾದ ಮಣಿರತ್ನಂ ಅವರು ತಮ್ಮ ರೋಜಾ ಚಿತ್ರಕ್ಕಾಗಿ ಎಆರ್ ರೆಹಮಾನ್ ಅವರನ್ನು ಆಯ್ಕೆ ಮಾಡಿದರು, ಈ ಚಿತ್ರದಲ್ಲಿ ರೆಹಮಾನ್ ಫಿಲ್ಮ್ ಫೇರ್ ಆವಾರ್ಡ್‌ ಗೆದ್ದರು. ಇದರ ನಂತರ ಅವರು ಆಸ್ಕರ್ ಪ್ರಶಸ್ತಿ ಗೆಲ್ಲುವವರೆಗೂ ಹಲವು  ಮೈಲಿಗಲ್ಲಗಳನ್ನು ಸಾಧಿಸಿದ್ದಾರೆ.

Read more Photos on
click me!

Recommended Stories