Salman Khan: ಸಲ್ಮಾನ್ ಒಬ್ಬ ಕಾಮುಕ ಮೃಗ: ಎಕ್ಸ್ ಗರ್ಲ್‌ಫ್ರೆಂಡ್‌ ಕಿಡಿ

ಸಲ್ಮಾನ್ ಖಾನ್ ಕಾಮುಕ ಮೃಗ ಎಂದು ಆತನ ಎಕ್ಸ್ ಗರ್ಲ್ ಫ್ರೆಂಡ್ ಸೋಮಿ ಅಲಿ ವಾಕ್‌ ಪ್ರಹಾರ ಮಾಡಿದ್ದಾರೆ. ಪಾಕಿಸ್ತಾನಿ ಅಮೆರಿಕನ್ ಆಗಿರುವ ಈ ಬಾಲಿವುಡ್ ನಟಿ ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದಳು. ಈಗ ಸಲ್ಮಾನ್ ವಿರುದ್ಧ ಕೆಂಡ ಕಾರುತ್ತಿದ್ದಾಳೆ.

Bollywood actress Somy ali calls Salman Khan as Sexual predator

ಸೋಮಿ ಅಲಿ ಪಾಕಿಸ್ತಾನ ಹಾಗೂ ಅಮೆರಿಕಾ ಮೂಲದ ಬಾಲಿವುಡ್ ನಟಿ. ಈಕೆ ಬರಹಗಾರ್ತಿಯಾಗಿ, ಫಿಲಂ ಮೇಕರ್‌ ಆಗಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾಳೆ. 'ನೋ ಮೋರ್ ಟಿಯರ್ಸ್' ಅನ್ನೋದು ಎನ್‌ಜಿಓ ನಡೆಸುತ್ತಿರುವ ಸೋಮಿಗೆ ಈಗ ೪೬ ವರ್ಷ ವಯಸ್ಸು. ಇನ್ನು ಸಿಂಪಲ್ ಆಗಿ ಹೇಳಬೇಕಂದರೆ ಬಾಲಿವುಡ್ ನಟಿ ಹ್ಯೂಮಾ ಖುರೇಷಿಯ ಅಕ್ಕ. ಈಕೆ ೧೯೯೩ ರಿಂದ ೧೯೯೯ರವರೆಗೆ ಸಲ್ಮಾನ್‌ಖಾನ್ ಜೊತೆಗೆ ರಿಲೇಶಿಪ್‌ನಲ್ಲಿದ್ದಳು. ಕರಾಚಿಯ ಸಿಂಧ್ ಪ್ರಾಂತ್ಯದಲ್ಲಿ ಹುಟ್ಟಿದ ಈ ನಟಿಯ ತಾಯಿ ಇರಾಕಿ, ತಂದೆ ಪಾಕಿಸ್ತಾನಿ. ಈಕೆ ಮುಂದೆ ಅಮೆರಿಕಾದಲ್ಲಿ ಬೆಳೆಯುತ್ತಾಳೆ. ಫ್ಲೋರಿಡಾದಲ್ಲಿ ಓದುತ್ತಿದ್ದಾಗ ಈಕೆಯ ಮೇಲೆ ಪಕ್ಕದ ಮನೆಯ ಹುಡುಗನೊಬ್ಬ ಅಟ್ಯಾಕ್ ಮಾಡುತ್ತಾನೆ. ಇನ್ನೂ ಹದಿನಾಲ್ಕು ವರ್ಷದವಳಿರುವಾಗಲೇ ಈಕೆಯನ್ನು ಅತ್ಯಾಚಾರ ಮಾಡುತ್ತಾನೆ. ಅಷ್ಟೇ ಅಲ್ಲ ಈಕೆಯ ತಾಯಿಯೂ ಪಾಕಿಸ್ತಾನದಲ್ಲಿ ಮನೆಯೊಳಗಿನ ಹಿಂಸೆಗೆ ಬಲಿಯಾಗುತ್ತಾಳೆ. 

ಈ ನಟಿಯ ಬದುಕೇ ದುರಂತ ಕಥೆಯ ಹಾಗಿದೆ. ಈಕೆ ಶಾಲೆಯಿಂದ ಡ್ರಾಪ್ ಔಟ್ ಆಗ್ತಾಳೆ. ಆಸಿಡ್ ದಾಳಿಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಾಳೆ. ಈ ನಡುವೆ ನೋವಿಂದ ಹೊರಬರಲು ಡ್ರಗ್ ತೆಗೆದುಕೊಳ್ಳಲು ಶುರು ಮಾಡಿ ಅದಕ್ಕೆ ದಾಸಳಾಗುತ್ತಾಳೆ. ಈ ನಡುವೆ ಅವಳಿಗೆ ಹಿಂದಿ ಚಿತ್ರರಂಗದ ಬಗ್ಗೆ ಆಕರ್ಷಣೆ ಬೆಳೆಯುತ್ತದೆ. ತಾಯಿ ಬೇಡ ಅಂದರೂ ಕೇಳದೇ ಹೇಗೋ ತಂದೆಯನ್ನು ಒಪ್ಪಿಸಿ ಬಾಲಿವುಡ್ ಪ್ರವೇಶಿಸುತ್ತಾಳೆ. ಆಗ ಅವಳಿಗೆ ಕೇವಲ ಹದಿನಾರು ವರ್ಷ.  ಆ ಕಾಲದ ಬಾಲಿವುಡ್ ನ ಸಕ್ಸಸ್‌ಫುಲ್ ನಟ ಸಲ್ಮಾನ್ ಕಂಡರೆ ಈ ಟೀನೇಜ್ ಹುಡುಗಿಗೆ ಕ್ರಶ್. ಸಲ್ಮಾನ್ ಬಗೆಗೆ ಆಕರ್ಷಣೆಯಲ್ಲೇ ಮಾಡೆಲಿಂಗ್ ಮಾಡ್ತಾಳೆ, ಹಿಂದಿ ಚಿತ್ರರಂಗದಲ್ಲಿ ನೆಲೆಯೂರಲೂ ಪ್ರಯತ್ನಿಸುತ್ತಾಳೆ.

1991 ರಿಂದ 1998ರ ನಡುವೆ ಈಕೆ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸುತ್ತಾಳೆ. ಸಕ್ಸಸ್‌ಫುಲ್ ಹೀರೋಯಿನ್ ಅನಿಸಿಕೊಳ್ಳುತ್ತಾಳೆ. ಈ ನಡುವೆ ತನ್ನ ಕ್ರಶ್ ಸಲ್ಮಾನ್ ಖಾನ್ ಜೊತೆಗೆ ಲವ್ವಲ್ಲಿ ಬೀಳ್ತಾಳೆ. ಆತನ ಜೊತೆಗೆ ರಿಲೇಶನ್‌ಶಿಪ್‌ನಲ್ಲಿರುತ್ತಾಳೆ. ಈ ಜೋಡಿ ಸುಮಾರು ಎಂಟು ವರ್ಷಗಳ ಕಾಲ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿರುತ್ತಾರೆ. ಆಮೇಲೆ ಈಕೆ ಈ ಸಂಬಂಧದಿಂದ ಆಚೆ ಬರುತ್ತಾಳೆ. 

Dirty Picture ರಾಣಿ ಸಿಲ್ಕ್ ಸ್ಮಿತಾ ಮೊದಲು ಹಿರೋಯಿನ್ಸ್ ಮುಖಕ್ಕೆ ಟಚಪ್ ಮಾಡುತ್ತಿದ್ದರು

ಅಂದು ಟೀನೇಜರ್ ಆಗಿದ್ದ ಸೋಮಿಗೆ ಈಗ ನಲವತ್ತಾರು. ತನ್ನನ್ನು ಹಿಂಸಿಸಿದ ಸಲ್ಮಾನ್ ಖಾನ್ ಬಗ್ಗೆ ಈಕೆ ಕಿಡಿ ಕಾರಿದ್ದಾಳೆ. ಹಾಗೆ ನೋಡಿದರೆ ಸಲ್ಮಾನ್ ಖಾನ್ ಜೊತೆಗೆ ರಿಲೇಶನ್‌(Relation) ನಲ್ಲಿದ್ದು ಆತನ ಹಿಂಸೆಯಿಂದ ಹೊರಬಂದ ಬಹಳ ನಟಿಯರು ಬಾಲಿವುಡ್‌ನಲ್ಲಿದ್ದಾರೆ. ಸಂಗೀತ ಬಿಜಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್, ಇತ್ತೀಚೆಗೆ ಇಲುಲ್ಯಾ ಸೇರಿದಂತೆ ಹಲವರು ಈತನ ಆಕರ್ಷಣೆಯಿಂದ ಹತ್ತಿರವಾದರೂ ಈತನ ಮೃಗೀಯ ಲೈಂಗಿಕ ಹಿಂಸೆ ತಡೆಯಲಾರದೇ ದೂರಾಗಿದ್ದಾರೆ. ಈತನ ಹಿಂಸೆಯಿಂದ ದೂರಬಂದರೂ ಈತನ ಬಗ್ಗೆ ಮಾತನಾಡಿದವರು ಕಡಿಮೆ. ಆದರೆ ಸೋಮಿ ಮೊದಲಿಂದಲೂ ಸಲ್ಮಾನ್‌ನಿಂದ ತನಗಾದ ಅನ್ಯಾಯದ ವಿರುದ್ಧ(Against) ತಿರುಗಿ ಬೀಳುತ್ತಲೇ ಇದ್ದಾರೆ.

ಇದೀಗ ಮತ್ತೆ ಸಲ್ಮಾನ್ ಹಾಗೂ ತನ್ನ ನಡುವಿನ ರಿಲೇಶಿನ್‌ಶಿಪ್‌(Relationship) ನಲ್ಲಿ ಆತನ ತನ್ನ ಮೇಲೆ ನಡೆಸಿದ ಕ್ರೌರ್ಯದ ಬಗ್ಗೆ ನೋವು, ಆಕ್ರೋಶ ಹೊರಹಾಕಿದ್ದಾಳೆ. ಆತನೊಬ್ಬ ಕಾಮುಕ ಮೃಗ, ದುರಹಂಕಾರಿ ಹಂದಿ ಎಂದೆಲ್ಲ ಕಮೆಂಟ್ ಮಾಡಿದ್ದಾಳೆ. ಆತ ತನ್ನನ್ನು ಸಿಗರೇಟಿನಿಂದ ಸುಟ್ಟಿದ್ದಾನೆ. ಸಾಕಷ್ಟು ಲೈಂಗಿಕ (Sexual)ಹಿಂಸೆ ಮಾಡಿದ್ದಾನೆ. ಈತ ಇಷ್ಟೆಲ್ಲ ನಟಿಯರಿಗೆ ಹಿಂಸೆ ಮಾಡಿದ್ದರೂ ಬಾಲಿವುಡ್(Bollywood) ಮಂದಿ ಬಾಯ್ಮಚ್ಚಿ ಕೂತಿದ್ದಾರೆ. ಬಹಳ ನಾಚಿಕೆಗೇಡಿನ ಸಂಗತಿ ಇದು' ಎಂದು ಸೋಮಿ ಕಿಡಿ ಕಾರಿದ್ದಾರೆ. 

ಅಯ್ಯೋ ಈ ನಟಿಗೆ ಏನಾಯ್ತು..! ಮೆಹ್ರೀನ್ ಕೌರ್ ಮುಖದ ತುಂಬಾ ಸೂಜಿಗಳನ್ನು ನೋಡಿ ಫ್ಯಾನ್ಸ್‌ ಶಾಕ್

Latest Videos
Follow Us:
Download App:
  • android
  • ios