ಸೈಫ್ ಅಲಿ ಖಾನ್ ತನ್ನ ಇಬ್ಬರು ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಜೊತೆಗೆ ಮಧ್ಯಾಹ್ನ ಊಟಕ್ಕೆ ಬಾಸ್ಟಿನ್ ರೆಸ್ಟೋರೆಂಟ್‌ಗೆ ಬಂದಿದ್ದರು. ಊಟ ಮುಗಿಸಿ ಮೂವರೂ ಹೊರಗೆ ಬಂದಾಗ ಅವರುಗಳು ತುಂಬಾ ಖುಷಿಯಾಗಿ ಕಾಣುತ್ತಿದ್ದರು.
ಸೈಫ್ ಅಲಿ ಖಾನ್ ಕೆಂಪು ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮ ಧರಿಸಿದ್ದರು. ಇದರೊಂದಿಗೆ, ಅವರು ಸನ್ಗ್ಲಾಸ್ ಮತ್ತುಮಾಸ್ಕ್ ಸಹ ಧರಿಸಿದ್ದರು. ಅದೇ ಸಮಯದಲ್ಲಿ, ಸಾರಾ ಅಲಿ ಖಾನ್ ಪೀಚ್ ಮತ್ತು ಸ್ಟ್ರೈಪ್ ಉಡುಪನ್ನು ಧರಿಸಿದ್ದರು. ಮಿನಿಮಲ್ ಮೇಕಪ್ ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಸಾರಾ ಆಲಿ ಖಾನ್ ಅವರು ತನ್ನ ತಂದೆಯ ಜೊತೆ ಮಾತನಾಡುತ್ತಾ ರೆಸ್ಟೋರೆಂಟ್‌ನಿಂದ ಹೊರಬಂದ ಸಮಯದಲ್ಲಿ ಪಾಪಾರಾಜಿ ಕ್ಯಾಮಾರದಲ್ಲಿ ಸೆರೆಯಾದರು.
ಅದೇ ಸಮಯದಲ್ಲಿ, ಬಿಳಿ ಶರ್ಟ್ ಜೊತೆಗೆ ಡೆನಿಮ್ ಜೀನ್ಸ್ ಧರಿಸಿದ್ದ ಇಬ್ರಾಹಿಂ ಅಲಿ ಖಾನ್ ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡರು. ಇಬ್ರಾಹಿಂ ನಟನೆಯಲ್ಲಿ ವೃತ್ತಿಜೀವನವನ್ನು ಮಾಡಲು ಹೊರಟಿದ್ದಾರೆ. ರೆಸ್ಟೋರೆಂಟ್‌ನಿಂದ ಹೊರಬಂದ ನಂತರ, ತಂದೆ ಮತ್ತು ಮಗ ಇಬ್ಬರೂ ಕೈ ಹಿಡಿದುಕೊಂಡು ಏನೇನೋ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.
ಇದಾದ ನಂತರ ಇಬ್ರಾಹಿಂ ಸಾರಾ ಅಲಿ ಖಾನ್ ಜೊತೆ ಕಾರಿನಲ್ಲಿ ಹೋದರು. ಸೈಫ್ ಅಲಿ ಖಾನ್ ತಮ್ಮ ಕಾರಿನಲ್ಲಿ ಹೊರಟರು. ಸೈಫ್ ಮತ್ತು ಅವರ ಮಕ್ಕಳ ಲಂಚ್ ಪಾರ್ಟಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಕೆಲವರು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಕೆಲವು ಜನರಿಗೆ ರಂಜಾನ್‌ನಲ್ಲಿ ಈ ರೀತಿ ಅಪ್ಪ ಮಕ್ಕಳು ಊಟ ಮಾಡಿದ್ದು ಇಷ್ಟವಾಗಿಲ್ಲ. ಹಲವು ಬಳಕೆದಾರರು ರಂಜಾನ್‌ನಲ್ಲಿ ಲಂಚ್ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸೈಫ್ ಮತ್ತು ಅವರ ಮಕ್ಕಳು ಉಪವಾಸ ಮಾಡಿಲ್ಲ ಎಂದು ಟ್ರೋಲರ್ ಮಾಡುತ್ತಿದ್ದಾರೆ
ಒಬ್ಬ ಬಳಕೆದಾರ, 'ರಂಜಾನ್‌ನಲ್ಲಿ ಲಂಚ್' ಎಂದು ಕೇಳಿದರು. ಅದೇ ಸಮಯದಲ್ಲಿ, ಇನ್ನೊಬ್ಬರು, 'ಹೆಸರಿಗೆ ಮಾತ್ರ ಮುಸ್ಲಿಂ' ಎಂದು ಬರೆದರು. ಒಬ್ಬ ಬಳಕೆದಾರ, 'ನಾಚಿಕೆಯಾಗಬೇಕು ರಂಜಾನ್‌ನಲ್ಲಿ ಆದರೂ ಉಪವಾಸವಿರಿ' ಎಂದು ಬರೆದಿದ್ದಾರೆ. ಇದೇ ವೇಳೆ ಕೆಲವರು ಸೈಫ್‌ಗೆ ಸಪೋರ್ಟ್ ಮಾಡಿದ್ದಾರೆ ಮತ್ತು ಎಲ್ಲರೂ ಉಪವಾಸ ಮಾಡಬೇಕೆನ್ನುವ ಅಗತ್ಯವಿಲ್ಲ ಎಂದಿದ್ದಾರೆ.