Ranbir Kapoor ಜೊತೆ ಮದುವೆಗೆ ಮೊದಲೇ ಮದುಮಗಳ ಗೆಟಪ್‌ನಲ್ಲಿ Alia Bhatt

Published : Apr 09, 2022, 07:26 PM IST

ಸಾಂಪ್ರದಾಯಿಕವಾಗಿರಲಿ ಅಥವಾ ಪಾಶ್ಚಿಮಾತ್ಯವಾಗಿರಲಿ ಆಲಿಯಾ ಭಟ್ (Alia Bhatt) ಪ್ರತಿ ನೋಟದಲ್ಲೂ ಸುಂದರವಾಗಿ ಕಾಣುತ್ತಾರೆ. ಸದ್ಯದಲ್ಲೇ ನಟಿ ರಣಬೀರ್ ಕಪೂರ್‌ (Ranbir Kapoor) ಅವರ ವಧು ಆಗಲಿದ್ದಾರೆ. ಆದರೆ ಮೊದಲ ಬಾರಿಗೆ ವಧುವಿನ ಡ್ರೆಸ್‌ನಲ್ಲಿ ಆಲಿಯಾ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆಯೂ ಹಲವು ಬಾರಿ ಮದುಮಗಳ ಗೆಟ್‌ಪ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ರೀಲ್ ಲೈಫ್‌ನಲ್ಲಿ ಆಲಿಯಾರ ಮದುಮಗಳ ಲುಕ್‌ ಈ ನಡುವೆ ಸಖತ್‌ ವೈರಲ್‌ ಆಗಿದೆ

PREV
17
Ranbir Kapoor ಜೊತೆ ಮದುವೆಗೆ ಮೊದಲೇ ಮದುಮಗಳ ಗೆಟಪ್‌ನಲ್ಲಿ Alia Bhatt

ಆಲಿಯಾ ಭಟ್-ರಣಬೀರ್ ಕಪೂರ್ ಏಪ್ರಿಲ್ 14 ಮತ್ತು 17 ರ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ಆದರೆ, ದಂಪತಿಗಳು ಇಲ್ಲಿ ವರೆಗೂ ತಮ್ಮ ಮದುವೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

 

 


 

 

27

‘ಕಳಂಕ್’ ಸಿನಿಮಾದಲ್ಲಿ ವಧುವಿನ ಗೆಟಪ್‌ನಲ್ಲಿ  ಕಾಣಿಸಿಕೊಂಡಿದ್ದರು. ಅವರು ಕೆಂಪು ಲೆಹೆಂಗಾದೊಂದಿಗೆ ಭಾರೀ ಆಭರಣಗಳನ್ನು ಧರಿಸಿದ್ದರು. ಇದರಲ್ಲಿ ರಾಣಿ ನೆಕ್ಲೇಸ್, ಚಂದಬಾಲಿ ಚೋಕರ್, ಹೆವಿ ಮಾಂಗ್ ಟಿಕಾ, ಕಿವಿಯೋಲೆಗಳು, ನೆಕ್ಲೇಸ್ ಧರಿಸಿದ್ದ   ಆಲಿಯಾ ಸಿನಿಮಾದಲ್ಲಿ  ಬ್ರೈಡಲ್ ಲುಕ್ ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದರು

37

ಟಿವಿ ಜಾಹೀರಾತಿಗಾಗಿ ಆಲಿಯಾ ಭಟ್ ವಧುವಿನ ಉಡುಗೆಯನ್ನು ಧರಿಸಿದ್ದರು. ಅವರು ಪಿಂಕ್ ಮೆರೂನ್ ಫ್ಲೋರಲ್ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು. ಕೈಗಳಿಗೆ ಮೆಹಂದಿ ಹಚ್ಚಿ, ಆಲಿಯಾ ಮದುಮಗಳ ಸಂಪೂರ್ಣ ಲುಕ್‌ ಅವನ್ನು ಪೂರ್ಣಗೊಳಿಸಿದರು.


 

47

ಆಲಿಯಾ ಭಟ್ ದಕ್ಷಿಣ ಭಾರತದ ವಧುವಾಗಿಯೂ ಕಾಣಿಸಿಕೊಂಡಿದ್ದಾರೆ. ‘2 ಸ್ಟೇಟ್ಸ್’ ಚಿತ್ರದಲ್ಲಿ ಅವರು ಕೆಂಪು ಕಿತ್ತಳೆ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಮದುವೆ ಸೀನ್‌ನಲ್ಲಿ ಸೊಂಟದ ಪಟ್ಟಿ ಮತ್ತು ಚಿನ್ನದ ಚೋಕರ್ ಧರಿಸಿ ವಧುವಿನ ನೋಟವನ್ನು ಪೂರ್ಣಗೊಳಿಸಲಾಯಿತು.  ಸರಳವಾದ ಬೈತಲೆ ಬೊಟ್ಟು ಮತ್ತು  ಅವಳು ಮಲ್ಲಿಗೆ ಮುಡಿದು ತುಂಬಾ ಮುದ್ದಾಗಿ ಕಾಣುತ್ತಿದ್ದರು.

57

ಆಲಿಯಾ ಭಟ್ ಅವರ ಬ್ಲಾಕ್‌ಬಸ್ಟರ್ ಚಿತ್ರ 'ರಾಝಿ'ಯಲ್ಲಿ ವಧುವಿನ ಉಡುಪಿನಲ್ಲಿ ಕಾಣಿಸಿಕೊಂಡರು. ಮುಸ್ಲಿಂ ವಧುವಿನಂತೆ ಕಾಣಿಸಿಕೊಂಡಿರುವ ನಟಿ ಮೆರೂನ್ ಕುರ್ತಾ ಶರಾರಾ ಸೆಟ್ ಧರಿಸಿದ್ದರು. ಇದರೊಂದಿಗೆ ಆಕಾಶ ನೀಲಿ ಬಣ್ಣದ ದುಪಟ್ಟಾ ಧರಿಸಿ ಭಾರವಾದ ಆಭರಣಗಳನ್ನು ಮ್ಯಾಚ್‌ ಮಾಡಿಕೊಂಡಿದ್ದರು.
 

67

ಬ್ರ್ಯಾಂಡ್ ಜಾಹೀರಾತಿನಲ್ಲೂ ಆಲಿಯಾ ವಧುವಿನ  ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಗೋಲ್ಡನ್ ಜರ್ದೋಜಿ ವರ್ಕ್ ಇರುವ ಮೆರೂನ್ ಬಣ್ಣದ ಲೆಹೆಂಗಾ ಧರಿಸಿದ್ದರು ಹಾಗೂ ಇದರೊಂದಿಗೆ ಕೊರಳಲ್ಲಿ ಮಾಂಗಲ್ಯವನ್ನು ಧರಿಸಿದ್ದರು. ಅವರು ಮೂಗುಬೊಟ್ಟು  ಮತ್ತು ಅವಳ ಹಣೆಯ ಮೇಲೆ ಬಿಂದಿಯೊಂದಿಗೆ ತುಂಬಾ ಸುಂದರವಾಗಿ ಕಾಣುತ್ತಿದ್ದರು.

77

ಆಲಿಯಾ 'ಹಂಪ್ಟಿ ಶರ್ಮಾ ಕಿ ದುಲ್ಹನಿಯಾ' ಚಿತ್ರದಲ್ಲಿ ಬಿಂದಾಸ್ ವಧುವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಪಿಂಕ್ ಗೋಲ್ಡನ್ ಲೆಹೆಂಗಾ ಧರಿಸಿ ಕಪ್ಪು ಕನ್ನಡಕವನ್ನು ಧರಿಸಿ ಹಾಡಿಗೆ ಹೆಜ್ಜೆಗೆ ಹಾಕಿದ್ದರು.

click me!

Recommended Stories