S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!

Published : Jul 13, 2026, 01:32 PM IST

2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.

PREV
16

ಮೊನ್ನೆ, ಅಂದರೆ 11 ಜುಲೈ 2026ರಂದು ಭಾರತದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ (S Janaki) ನಿಧರಾಗಿದ್ದು ಗೊತ್ತೇ ಇದೆ. ಈ ಗಂಧರ್ವ ಗಾಯಕಿಯ ಬಗ್ಗೆ ಭಾರತೀಯರಿಗೆ ಹೆಚ್ಚಾಗಿ ಹೇಳುವ ಅಗತ್ಯವೇನಿಲ್ಲ. 4 ರಾಷ್ಟ್ರೀಯ ಪ್ರಶಸ್ತಿ, 30 ರಾಜ್ಯ ಪ್ರಶಸ್ತಿ, ಹಲವಾರು ನಂದಿ ಪ್ರಶಸ್ತಿ ಜೊತೆಗೆ ಬಹಳಷ್ಟು ಸಂಘ-ಸಂಸ್ಥೆಗಳಿಂದ ಲೆಕ್ಕವಿಡಲಾಗದಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಎಸ್ ಜಾನಕಿಯವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಇಂಥ ಮೇರು ಗಾಯಕಿ ಎಸ್‌ ಜಾನಕಿಯವರು, ಚಿತ್ರರಂಗದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಿನ್ನೆಲೆ ಗಾಯಕ-ಗಾಯಕಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಮಾತನ್ನಾಡಿದ್ದರು. ಈ ವಿಷಯ ಹಲವರಿಗೆ ಗೊತ್ತಿಲ್ಲ.

26

2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. '50 ವರ್ಷಗಳ ನನ್ನ ಸಂಗೀತದ ಸೇವೆಗೆ ಈಗ ಪ್ರಶಸ್ತಿ ಕೋಡುವುದು ತುಂಬಾ ತಡವಾಯ್ತು. ಅದಕ್ಕೆ ಕಾರಣ ನಾವು ಹಿಂದಿಯಲ್ಲಿ ಹಾಡಿಲ್ಲ, ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡಿರೋದು' ಎಂದು ಎಸ್ ಜಾನಕಿಯವರು ಆ ಬಗ್ಗೆ ಅವರು ನೀಡಿದ್ದ ಹೇಳಿಕೆ ಹಲವರ ಮೆಚ್ಚುಗೆ ಗಳಿಸಿತ್ತು. ಜೊತೆಗೆ, ಎಸ್ ಜಾನಕಿಯವರು ಕೊಟ್ಟ ಕಾರಣ ಹಾಗೂ ಮಾಡಿದ್ದ ನಿರಾಕರಣೆಗೆ ಬಹಳಷ್ಟು ಜನರು ಸಮ್ಮತಿ ಸೂಚಿಸಿದ್ದು ಮಾತ್ರವಲ್ಲ, ಅವರ ದೃಢ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

36

ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಸಹಮತ ಸೂಚಿಸಿದ್ದರು. ಜೊತೆಗೆ, ಆ ದಕ್ಷಿಣ ಭಾರತ-ಉತ್ತರ ಭಾರತದ ಕಲಾವಿದರ ನಡುವಿನ ತಾರತಮ್ಯದ ನೋವು ತಾವೂ ಸೇರಿದಂತೆ, ದಕ್ಷಿಣ ಭಾರತದ ಎಲ್ಲ ಕಲಾವಿದರೂ ಅನುಭವಿಸುತ್ತಿದ್ದಾರೆ ಎಂದಿದ್ದರು. ಜೊತೆಗೆ, ಎಸ್ ಜಾನಕಿಯವರ ದಿಟ್ಟ ನಿರ್ಧಾರ ಹಾಗೂ ಪ್ರಶಸ್ತಿಯನ್ನು ನಿರಾಕರಿಸಿದ್ದನ್ನು ಶ್ಲಾಘಿಸುವ ಅರ್ಥದಲ್ಲಿ ಮಾತನ್ನಾಡಿದ್ದರು.

46

ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೀಗೆ ಹೇಳಿದ್ದರು-

'ಭಾರತದ ಸರ್ಕಾರ ಎಸ್ ಜಾನಕಿಯವರ ಪ್ರತಿಭೆಗೆ ತಕ್ಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಿಲ್ಲ. ನಮ್ಮವರಿಗೆ ಅಂದರೆ ದಕ್ಷಿಣ ಭಾರತದ ಸಂಸದರಿಗೆ ಲಾಬಿ ಮಾಡಲು ಬರುವುದಿಲ್ಲ' ಎಂದು ನೇರವಾಗಿಯೇ ಹೇಳಿದ್ದರು.

56

ಸುಮಾರು 48000 ಕ್ಕೂ ಹೆಚ್ಚು ಹಾಡುಗಳನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿ ಹಾಡಿದ್ದರೂ ಇವರು "ಭಾರತದ ನೈಟಿಂಗೆಲ್" ಆಗಲಿಲ್ಲ. ಏಕೆಂದರೆ ಭಾರತದ ಸರ್ಕಾರದ ಪ್ರಕಾರ ಇವರು ಹಿಂದಿಯಲ್ಲಿ ಅಷ್ಟಾಗಿ ಹಾಡಲಿಲ್ಲ. ಇದೂ ಒಂದು ಕಾರಣ ಎಂಬುದೇ ದುರಂತ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತಕ್ಕೆ, ಕಲೆಗೆ ಯಾವುದೇ ಬೇಧಭಾವ ಇರುವುದಿಲ್ಲ, ಇರಬಾರದು. ಭಾರತದ ಸರ್ಕಾರವು ಇಂತಹ ಮಲತಾಯಿಯ ಧೋರಣೆಯನ್ನು ಬಿಡುವವರೆಗೂ ಕಲೆಯಲ್ಲಿ ಸಾಧಿಸಿದವರಿಗೆ ಸಮನಾದ ಪ್ರಾಮುಖ್ಯತೆ ಸಿಗುವುದಿಲ್ಲ' ಎಂದಿದ್ದರು.

66

ಇದು 'ನ್ಯಾಷನಲ್ ಅವಾರ್ಡ್' ಅಂದರೆ 'ಪದ್ಮ' ಕೆಟಗರಿಯ ಹಾಗೂ ಭಾರತ ರತ್ನ, ದಾದಾ ಸಾಹೇಬ್ ಪ್ರಶಸ್ತಿಗಳು ಮುಂತಾದವುಗಳ ವಿಷಯಕ್ಕೆ ಎಸ್ ಜಾನಕಿಯವರು ಹೇಳಿದ್ದ ಮಾತು ಹಾಗೂ ಮಾಡಿದ್ದ ಗಟ್ಟಿ ನಿರ್ಧಾರ. ಪ್ರಶಸ್ತಿ ಬಂದಿದ್ದರೂ ಅದನ್ನೂ ಸ್ವೀಕರಿಸದೇ ಅದಕ್ಕೆ ಸೂಕ್ತ ಕಾರಣ ಕೊಟ್ಟು ನಿರಾಕರಿಸಿದ್ದು ಎಸ್ ಜಾನಕಿಯವರ ಬಗ್ಗೆ 'ದಕ್ಷಿಣ ಭಾರತೀಯರ' ಪ್ರೀತಿ ಆದರ ಹೆಚ್ಚಾಗಲು ಕಾರಣವಾಯಿತು, ಜೊತೆಗೆ, ಹಿಂದಿ ಭಾಷಿಗರು ಹಾಗೂ ದಕ್ಷಿಣ ಭಾರತೀಯರ ಕಲಾವಿದರ ನಡುವೆ ಭಾರತದ ಸರ್ಕಾರ ತೋರುತ್ತಿದ್ದ ತಾರತಮ್ಮು ಇಡೀ ಜಗತ್ತಿಗೆ ಅರ್ಥವಾಗಲು ಕಾರಣವಾಯಿತು. ಎಸ್ ಜಾನಕಿಯವರ ಕಾರಣಕ್ಕೆ ಈ ಸಂಗತಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ದಾಖಲಾಗಿದೆ.

ಇಂದು ಎಸ್ ಜಾನಕಿಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ಸ್ವರ ಮಾಧುರ್ಯ ಹಾಗೂ ಹಾಡಿರುವ ಗೀತೆಗಳು ಈ ಜಗತ್ತು ಇರುವವರೆಗೂ ಅಜರಾಮರ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories