Khushbu Sundar ರೀತಿ ಅವ್ರ ಹೆಣ್ಣು ಮಕ್ಕಳು ನೋಡೋಕೆ ಚೆನ್ನಾಗಿಲ್ಲ ಎಂದವ್ರಿಗೆ ಚಳಿ ಬಿಡಿಸಿದ 'ರಣಧೀರ' ನಟಿ

Published : Jul 12, 2026, 01:17 PM IST

Actress Khushboo Sundar: ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಸುಂದರ್‌ ಅವರು ಇತ್ತೀಚೆಗೆ ಹಿರಿಯ ಮಗಳ ಮದುವೆ ಮಾಡಿದರು. ಅವರ ಎರಡನೇ ಮಗಳು ಕೂಡ ಸಿನಿಮಾ ಮಾಡುತ್ತಿದ್ದಾರೆ. ಮಕ್ಕಳ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿದವರಿಗೆ ಖುಷ್ಬೂ ತರಾಟೆ ತಗೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

PREV
15
ಮಕ್ಕಳನ್ನು ಟ್ರೋಲ್‌ ಮಾಡ್ತಾರೆ

ಸ್ಟಾರ್‌ಗಳು ಇದ್ದಂತೆ ಅವರ ಮಕ್ಕಳು ಕೂಡ ಸುಂದರವಾಗಿರಬೇಕು, ಟಾಲೆಂಟೆಡ್‌ ಆಗಿರಬೇಕು ಎಂದು ಕೆಲವರು ಅಂದುಕೊಳ್ತಾರೆ. ಆದರೆ ಪ್ರತಿ ಜೀವಿ ಕೂಡ ವೈಯಕ್ತಿಕ ಎನ್ನೋದು ಮರೆತು ಕಾಮೆಂಟ್‌ ಮಾಡ್ತಾರೆ. ಈಗ ಖುಷ್ಬೂ ಅವರು ಮಕ್ಕಳ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡಿದವರಿಗೆ ತರಾಟೆ ತೆಗೆದುಕೊಂಡಿದ್ದಾರೆ.

25
ಖುಷ್ಬೂ ಸುಂದರ್ ತರಾಟೆ

“ಇದೇ ನನ್ನ ಕುಟುಂಬ. ಪ್ರೀತಿ, ನಂಬಿಕೆ, ಪರಸ್ಪರ ಅರ್ಥಮಾಡಿಕೊಳ್ಳುವುದರ ಮೇಲೆ ಈ ಕುಟುಂಬ ನಿರ್ಮಾಣ ಆಗಿದೆ. ಇಂದು ನಾವು ರಕ್ತ-ಬೆವರು ಹರಿಸಿ, ಹಗಲಿರುಳು ಕಷ್ಟಪಟ್ಟು ದುಡಿದು ಈ ಹಂತಕ್ಕೆ ಬಂದಿದ್ದೇವೆ. ನಾವು ಕೆಲವು ಬಾರಿ ಒದ್ದಾಡಿರಬಹುದು, ಸೋತಿರಬಹುದು, ಎಡವಿ ಬಿದ್ದಿರಬಹುದು, ಆದರೆ ಎಂದಿಗೂ ಅಷ್ಟೇ ಫಾಸ್ಟ್‌ ಆಗಿ ಹೋರಾಡಿ ಗೆಲ್ಲೋದನ್ನು ಬಿಟ್ಟಿಲ್ಲ. ನಮ್ಮ ಮಕ್ಕಳನ್ನು ನಾವು ನಿಜಕ್ಕೂ ಕೇರ್‌ ಮಾಡಿ ಬೆಳೆಸಿದ್ದೇವೆ, ಅವರಿಗೆ ಎಂದೂ ಕೂಡ ಸೆಲೆಬ್ರಿಟಿ ಮಕ್ಕಳು ಎಂಬ ಅಹಂನಿಂದ ತೇಲಾಡದಂತೆ ಬೆಳೆಸಿದ್ದೇವೆ. ಇದನ್ನು ಅವರು ದುರುಪಯೋಗ ಮಾಡಿಕೊಂಡಿಲ್ಲ. ನಮ್ಮ ಮಕ್ಕಳ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಖುಷ್ಬೂ ಸುಂದರ್‌ ಕಿಡಿ ಕಾರಿದ್ದಾರೆ.

35
ಆ ರೀತಿ ಮಾತಾಡೋರು ವಿಕೃತ ಮನಸ್ಸುಳ್ಳವರು

“ನನ್ನ ಮಕ್ಕಳನ್ನು ಅಗೌರವದಿಂದ ನಡೆಸಿಕೊಂಡರೆ, ಅವಮಾನಿಸಿದರೆ ತಾಯಿಯಾಗಿ ನಾನು ಅದನ್ನು ಸಹಿಸೋದಿಲ್ಲ. ಆ ರೀತಿ ಮಾಡುವವರ ಮಾನಸಿಕತೆ ಎಷ್ಟು ಕ್ರೂರವಾಗಿದೆ, ಮಾನವೀಯತೆ ಕೂಡ ಇಲ್ಲ, ವಿಕೃತಿ ಹೌದು. ಎಂಥ ಸಂಸ್ಕಾರದಿಂದ ಅವರು ಬೆಳೆದು ಬಂದಿದ್ದಾರೆ ಎಂದು ಕೂಡ ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.

45
ತಾಯಿ ತಂಟೆಗೆ ಬರಬೇಡಿ

“ನನಗೂ ಕೂಡ ಅವರ ಭಾಷೆಯಲ್ಲಿ ತಿರುಗೇಟು ಕೊಡೋಕೆ ಗೊತ್ತಿದೆ. ಆದರೆ ನಾನು ಹಾಗೆ ಮಾಡೋದಿಲ್ಲ. ನನ್ನ ತಾಯಿ ನನಗೆ ಆ ರೀತಿ ಸಂಸ್ಕಾರ ಕೊಟ್ಟಿಲ್ಲ. ನಿಮ್ಮ ಕೊಳಕು ಮೈಂಡ್‌ಸೆಟ್‌ ನಾನು ಒಪ್ಪಿದ್ದೀನಿ ಅಂತ ಮಾತ್ರ ಅಂದುಕೊಳ್ಳಬೇಡಿ. ಓರ್ವ ತಾಯಿಯ ತಂಟೆಗೆ ಬರಬೇಡಿ. ನೆನಪಿರಲಿ, ತಾಯಿ ಅಂದರೆ ಗಾಯ ಆಗಿರೋ ಹೆಣ್ಣುಹುಲಿ ಇದ್ದಂತೆ. ತನ್ನ ಮಕ್ಕಳನ್ನು ಕಾಪಾಡಲು ಅವಳು ಜೀವನನ್ನೇ ತೆಗೆಯುತ್ತಾಳೆ. ಕ್ಯಾಮರಾ ಕುಂದೆ ಕುಳಿತು, ನಾಲ್ಕು ನೋಟುಗಳಿಗಾಗಿ ನಮ್ಮ ಬಗ್ಗೆ ಮಾತನಾಡಿ, ಕುಟುಂಬಕ್ಕೆ ಅನ್ನ ಹಾಕುವವರಿಗೆ ಅನ್ವಯ ಆಗುತ್ತದೆ” ಎಂದು ಅವರು ಹೇಳಿದ್ದಾರೆ.

55
ದುಡ್ಡಿನಿಂದ ಈ ಶಕ್ತಿ ಬಂದಿಲ್ಲ

“ಇಂದು ನಮ್ಮ ಪರವಾಗಿ ನಾವು ಧ್ವನಿ ಎತ್ತದಿದ್ದರೆ, ಇಂಥವರು ನಮ್ಮ ಮೇಲೆ ಸವಾರಿ ಮಾಡ್ತಾರೆ. ನಮ್ಮೊಳಗಿರುವ ಶಕ್ತಿ ಹಣ ಕೊಟ್ಟು ಖರೀದಿ ಮಾಡಿದ್ದಲ್ಲ, ನಾವೇ ಕಷ್ಟಪಟ್ಟು ಗಳಿಸಿದ್ದಾಗಿದೆ. ನಿಮಗೋಸ್ಕರ ನೀವು ಎದ್ದು ನಿಲ್ಲಿ. ನಿಮಗೆ ಗೌರವ ಕೊಟ್ಟಿಲ್ಲ ಅಂದರೆ ಅವರಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡಬೇಡಿ. ನಿಮ್ಮನ್ನು ಫಸ್ಟ್‌ ನೀವು ಗೌರವಿಸಿ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories