ರಾಮ್ ಚರಣ್ ಪತ್ನಿ ಉಪಾಸನಾ ಕಿಯಾರಾ ಅಡ್ವಾನಿ ಕೇಳಿದ್ದೇಕೆ?

Published : Feb 09, 2023, 05:43 PM ISTUpdated : Feb 09, 2023, 06:40 PM IST

ಬಾಲಿವುಡ್‌ನ ಫೇಮಸ್‌ ಜೋಡಿ  ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಫೆಬ್ರವರಿ 7 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಂಗಳವಾರ, ಕಿಯಾರಾ ಮತ್ತು ಸಿದ್ಧಾರ್ಥ್ ಜೈಸಲ್ಮೇರ್‌ನ ಸೂರ್ಯಘರ್‌ ಅರಮನೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ  ವಿವಾಹವಾದರು. ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಜೋಡಿಯ ಮದುವೆಗೆ ಜನರು ಶುಭಾಶಯ ಕೋರುತ್ತಿದ್ದಾರೆ. ಈ ನಡುವೆ RRR ನಟ ರಾಮಚರಣ್ (Ram Charan) ಅವರ ಪತ್ನಿ ಉಪಾಸನಾ ಕಾಮಿನೇನಿ (Upasana Kamineni) ಅವರು ಕಿಯಾರಾ ಅಡ್ವಾಣಿಯವರಲ್ಲಿ ಕ್ಷಮೆಯಾಚಿಸಿದ್ದಾರೆ. ಕಾರಣವೇನು ಗೊತ್ತಾ?  

PREV
15
 ರಾಮ್ ಚರಣ್ ಪತ್ನಿ ಉಪಾಸನಾ ಕಿಯಾರಾ ಅಡ್ವಾನಿ ಕೇಳಿದ್ದೇಕೆ?

ಸೌತ್‌ ಸ್ಟಾರ್‌ ಚಿರಂಜೀವಿ ಅವರ ಸೊಸೆ ಮತ್ತು ರಾಮ್ ಚರಣ್ ತೇಜಾ ಅವರ ಪತ್ನಿ ಉಪಾಸನಾ ಕಾಮಿನೇನಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಗೆ ಶುಭಹಾರೈಸಿದ್ದಾರೆ. ಆದರೆ ಇದರ ಜೊತೆ ಉಪಾಸನಾ ಕಿಯಾರಾ ಅವರ ಮದುವೆಗೆ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು. 

25

ಕಿಯಾರಾ ಅವರ ಫೋಟೋಗಳಿಗೆ ಪ್ರತಿಕ್ರಿಯಿಸಿದ ಉಪಾಸನಾ ಅಭಿನಂದನೆಗಳು, ಇದು ತುಂಬಾ ಸುಂದರವಾಗಿದೆ. ಆದರೆ ಕ್ಷಮಿಸಿ! ಈ ಮದುವೆಗೆ ಬರಲು ನಮಗೆ ಸಾಧ್ಯವಾಗಲಿಲ್ಲ. ನಿಮ್ಮಿಬ್ಬರಿಗೂ ಬಹಳಷ್ಟು ಪ್ರೀತಿ ಎಂದು  ಬರೆದಿದ್ದಾರೆ.

35

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮದುವೆಯ ಫೋಟೋಗಳನ್ನು ಹಂಚಿಕೊಂಡ ಕಿಯಾರಾ ಅಡ್ವಾಣಿ  ಮತ್ತು ಸಿದ್ಧಾರ್ಥ್‌ ಮಲ್ಹೋತ್ರ  'ಈಗ  ನಮ್ಮ ಶಾಶ್ವತ ಬುಕಿಂಗ್ ಮುಗಿದಿದೆ. ನಮಗೆ ಮುಂದಿನ ಪ್ರಯಾಣಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

45

ವರದಿಗಳ ಪ್ರಕಾರ, ದಂಪತಿಗಳು ಮುಂಬೈನಲ್ಲಿ ಚಿತ್ರರಂಗದ ಸ್ನೇಹಿತರು ಮತ್ತು ಆಪ್ತರಿಗಾಗಿ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಕಿಯಾರಾ-ಸಿದ್ದಾರ್ಥ್ ಮದುವೆಯ ಆರತಕ್ಷತೆ ಫೆಬ್ರವರಿ 12 ರಂದು ನಡೆಯಲಿದೆ.

55

ಕಿಯಾರಾ-ಸಿದ್ಧಾರ್ಥ್ ಅವರ ಮೊದಲ ಭೇಟಿಯು 'ಲಸ್ಟ್ ಸ್ಟೋರಿ' ಚಿತ್ರದ ಪ್ರದರ್ಶನದ ಸಮಯದಲ್ಲಿ ನಡೆದಿದೆ  ಆದರೆ, ‘ಶೇರ್ ಶಾ’ ಚಿತ್ರದ ಶೂಟಿಂಗ್ ವೇಳೆ ಇಬ್ಬರ ಆಪ್ತತೆ ಹೆಚ್ಚಾಯಿತು. ನಂತರ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಈಗ ಮದುವೆಯ ಬಂದನದಲ್ಲಿ ಸಿಲುಕಿದ್ದಾರೆ.

Read more Photos on
click me!

Recommended Stories