ಹೆಂಡತಿ ಹೆಸರನ್ನು ಮೆಹೇಂದಿ ಹಾಕಿಸಿಕೊಂಡ ಸಿದ್ಧಾರ್ಥ್; ಮ್ಯಾಚಿಂಗ್‌ ಔಟ್‌ಫಿಟ್‌ನಲ್ಲಿ ಸ್ವೀಟ್‌ ಹಂಚಿದ ಕಿಯಾ-ಸಿದ್ಧ್

First Published Feb 9, 2023, 10:32 AM IST

ಮದುವೆ ನಂತರ ಮೊದಲ ಬಾರಿ ಕಾಣಿಸಿಕೊಂಡ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾನಿ. ಮಾಧ್ಯಮ ಮಿತ್ರರಿಗೆ ಸ್ವೀಟ್ ಹಂಚಿದ ಜೋಡಿ...

ಫೆಬ್ರವರಿ 7ರಂದು ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಕಿಯಾರಾ ಅಡ್ವಾನಿ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ಒಂದು ವಾರಗಳ ಕಾಲ ಮದುವೆ ಅದ್ಧೂರಿಯಾಗಿ ನಡೆಯಿತ್ತು. ಮದುವೆಯಲ್ಲಿ ಫೋನ್‌ ನಿಷೇಧ ಮಾಡಿರುವ ಕಾರಣ ಎಲ್ಲಿಯೂ ಫೋಟೋ ಮತ್ತು ವಿಡಿಯೋ ಲೀಕ್ ಆಗಿಲ್ಲ.
 

ಮದುವೆ ಸಂಭ್ರಮ ಮುಗಿದ ನಂತರ ಕಿಯಾರಾ ಮತ್ತು ಸಿದ್ಧಾರ್ಥ್‌ ಜೈಸಲ್ಮೇರ್‌ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ಮುಂಬೈಗೆ ವಿಮಾನ ಏರಿದ್ದಾರೆ. 
 

ಮುಂಬೈಗೆ ಬಂದು ಇಳಿಯುತ್ತಿದ್ದಂತೆ ಕಿಯಾರಾ ಮತ್ತು ಸಿದ್ಧಾರ್ಥ್‌ ಔಟ್‌ಫಿಟ್‌ ಬದಲಾಯಿಸಿಕೊಂಡಿದ್ದಾರೆ. ಮಾಡ್ರೆನ್‌ ಡ್ರೆಸ್‌ನಲ್ಲಿ ಬಂದ ಜೋಡಿ ಟ್ರೆಡಿಷನಲ್‌ ಲುಕ್‌ಗೆ ಬದಲಾಗಿ ಮಾಧ್ಯಮ ಸ್ನೇಹಿತರಿಗೆ ಸಿಹಿ ಹಂಚಿದ್ದಾರೆ. 

ಕೆಂಪು ಬಣ್ಣದ ಸೆಲ್ವಾರ್‌ನಲ್ಲಿ ಕಿಯಾರಾ ಮತ್ತು ಕೆಂಪು ಬಣ್ಣದ ಶೆರ್ವಾನಿಯಲ್ಲಿ ಸಿದ್ಧಾರ್ಥ್‌ ಕಾಣಿಸಿಕೊಂಡಿದ್ದಾರೆ. ಹ್ಯಾಂಡ್‌ಮೇಡ್‌ ದುಪಟಾವನ್ನು ಸಿದ್ಧು ಧರಿಸಿದ್ದಾರೆ. 
 

ಮಾಧ್ಯಮಗಳಿಗೆ ಹಾಯ್‌ ಹೇಳುತ್ತಿರುವ ಸಿದ್ಧಾರ್ಥ್‌ ಫೋಟೋದಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ಕೈಗೆ ಹಾಕಿಸಿಕೊಂಡಿರುವ ಮೆಹೇಂದಿ. ಕೈ ಮೇಲೆ Ki ಎಂದು ಬರೆಸಿಕೊಂಡಿದ್ದಾರೆ. 

click me!