Siddharth-Kiara Wedding: ರೂಮರ್‌ಗಳಿಗೆ ಬಿತ್ತು ಕೊನೆ, ಸಿದ್ಧಾರ್ಥನ ಮನದನ್ನೆಯಾದ ಕಿಯಾರಾ!

Published : Feb 07, 2023, 10:38 PM ISTUpdated : Feb 07, 2023, 10:56 PM IST

ರೂಮರ್‌ಗಳಿಗೆ ಕೊನೆಗೂ ಅಂತ್ಯ ಬಿದ್ದಂತಾಗಿದೆ. ಬಾಲಿವುಡ್‌ನ ಕ್ಯೂಟ್‌ ಕಪಲ್‌ಗಳಲ್ಲಿ ಒಂದಾಗಿದ್ದ ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ಕಿಯಾರಾ ಆಡ್ವಾಣಿ ಮಂಗಳವಾರ ರಾಜಸ್ಥಾನದ ಜೈಸೆಲ್ಮೇರ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

PREV
19
 Siddharth-Kiara Wedding: ರೂಮರ್‌ಗಳಿಗೆ ಬಿತ್ತು ಕೊನೆ,  ಸಿದ್ಧಾರ್ಥನ ಮನದನ್ನೆಯಾದ ಕಿಯಾರಾ!

ಬಾಲಿವುಡ್ ನ ಮುದ್ದಾದ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಇವರಿಬ್ಬರ ವಿವಾಹ ಕಾರ್ಯಕ್ರಮಗಳು ರಾಜಮನೆತನದ ಶೈಲಿಯಲ್ಲಿ ನಡೆದಿವೆ. ಸಿದ್ಧಾರ್ಥ್-ಕಿಯಾರಾ ಅವರ ಸಂಗೀತ ಸಮಾರಂಭ ನಿನ್ನೆ ರಾತ್ರಿ ನಡೆಯಿತು. ಅದರ ಕೆಲವೊಂದು ಫೋಟೋಗಳೂ ಬಹಿರಂಗವಾಗಿವೆ. 

29

ಈ ಫೋಟೋಗಳಲ್ಲಿ, ಸೂರ್ಯಗಢ ಅರಮನೆಯು ಭವ್ಯವಾದ ಶೈಲಿಯಲ್ಲಿ ಅಲಂಕರಿಸಲಾಗಿರುವುದನ್ನು ಕಾಣಬಹುದಾಗಿದೆ. ಸಿದ್ಧಾರ್ಥ್ ಮತ್ತು ಕಿಯಾರಾ ಕೆಲ ಸಮಯದ ಹಿಂದೆಯಷ್ಟೇ ಅಧಿಕೃತವಾಗಿ ವಿವಾಹವಾಗಿದ್ದಾರೆ. ಅದರೊಂದಿಗೆ ಮತ್ತೊಂದು ಹೈವೋಲ್ಟೇಜ್‌ ಬಾಲಿವುಡ್‌ ಮದುವೆಯೂ ಅಂತ್ಯಗೊಂಡಂತಾಗಿದೆ. 
 

39

ಇಬ್ಬರೂ ಸಪ್ತಪದಿ ತುಳಿದಿದ್ದು, ಮದುವೆಯೂ ಸಂಭ್ರಮದಿಂದ ಮುಗಿದಿದೆ ಎಂಬ ವರದಿಗಳಿವೆ. ಈಗ ಶೀಘ್ರದಲ್ಲೇ ಈ ಜೋಡಿ ಮಾಧ್ಯಮದ ಮುಂದೆ ಬರುವ ಸಾಧ್ಯತೆ ಇದೆ. ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಮದುವೆ ಸಂಭ್ರಮಗಳು ನಡೆದಿವೆ. 
 

49

ವರದಿಗಳ ಪ್ರಕಾರ, ವರ ಸಿದ್ಧಾರ್ಥನ ವಿವಾಹ ಮೆರವಣಿಗೆ ಆಗಮನದ ವೇಳೆ ವಿವಾಹದ ವೇದಿಕೆಗೆ ಅವರು, ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಿದ್ಧಾರ್ಥ್, ಸಾಜನ್ ಜಿ ಘರ್ ಆಯೆ ಹಾಡಿಗೆ ಎಂಟ್ರಿ ಕೊಟ್ಟಿದ್ದಾರೆ. ಇದಲ್ಲದೆ, ಅವರ ಬಾರ್ ಬಾರ್ ದೇಖೋ ಚಿತ್ರದ ಪ್ರಸಿದ್ಧ ಹಾಡು ಕಾಲಾ ಚಶ್ಮಾವನ್ನು ಗೀತೆಗೆ ನೃತ್ಯ ಮಾಡುವ ಮೂಲಕ ವಿವಾಹದ ವೇದಿಕೆ ಏರಿದ್ದರು ಎನ್ನಲಾಗಿದೆ.


 

59

ವಿಕ್ಕಿ ಕೌಶಲ್-ಕತ್ರೀನಾ ಕೈಫ್, ರಣಬೀರ್-ಆಲಿಯಾ ಮತ್ತು ಕೆಎಲ್ ರಾಹುಲ್-ಅಥಿಯಾ ಶೆಟ್ಟಿಯಂತೆ ಈ ಇಬ್ಬರು ತಾರೆಯರು ಕೂಡ ಮಧ್ಯಾಹ್ನ ಮದುವೆಯಾದರು.

69
Image: Instagram

ಸಿದ್ಧಾರ್ಥ್ ಮತ್ತು ಕಿಯಾರಾ ಅವರ ವಿವಾಹ ಮಹೋತ್ಸವಕ್ಕೆ ಬಾಲಿವುಡ್‌ನ ಅನೇಕ ದಿಗ್ಗಜರು ಆಗಮಿಸಿದ್ದರು. ಇದರಲ್ಲಿ ಶಾಹಿದ್ ಕಪೂರ್, ಅವರ ಪತ್ನಿ ಮೀರಾ ರಜಪೂತ್, ಇಶಾ ಅಂಬಾನಿ, ಆನಂದ್ ಪರಿಮಳ್, ಮಹಿರಾ ಖಾನ್, ಆರತಿ ಶೆಟ್ಟಿ, ಕರಣ್ ಜೋಹರ್, ಜೂಹಿ ಚಾವ್ಲಾ, ಸಲ್ಮಾನ್ ಅಲಿ, ಸಂಚಿತಾ ತ್ರಿವೇದಿ, ಅರ್ಮಾನ್ ಜೈನ್ ಮತ್ತು ಅವರ ಪತ್ನಿ ಅನಿಸಾ ಮಲ್ಹೋತ್ರಾ ಅವರ ಹೆಸರುಗಳು ಸೇರಿವೆ.

79

ವಿವಾಹದ ಚಿತ್ರಗಳನ್ನು ಮೊದಲಿಗರಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟು ಕಿಯಾರಾ ಆಡ್ವಾಣಿ, 'ಇನ್ನು ಪರ್ಮನೆಂಟ್‌ ಬುಕ್ಕಿಂಗ್‌ ಆಗಿದೆ' ಎಂದು ಬರೆದಿದ್ದರು. ಇವರಿಬ್ಬರೂ ಜೊತೆಯಾಗಿ ನಟಿಸಿದ್ದ ಶೇರ್‌ ಶಾ ಚಿತ್ರದ ಡೈಲಾಗ್‌ ಇದಾಗಿದೆ.

89

ಇನ್ನೊಂದೆಡೆ ಸಿದ್ಧಾರ್ಥ್‌ ಮಲ್ಹೋತ್ರಾ ಕೂಡ ಇನ್ಸ್‌ಟಾಗ್ರಾಮ್‌ ಹಾಗೂ ಟ್ವಿಟರ್‌ನಲ್ಲಿ ಏಕಕಾಲದಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

99

ಮದುವೆ ಸಮಾರಂಭದಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ಬೆಳ್ಳಿ ಬಣ್ಣದ ಶೇರ್ವಾನಿಯನ್ನು ಧರಿಸಿದ್ದರೆ, ಕಿಯಾರಾ ಆಡ್ವಾಣಿ ಬಿಳಿ ಹಾಗೂ ಗುಲಾಬಿ ಮಿಶ್ರಿತ ಬಣ್ಣದ ಲೆಹೆಂಗಾ ಧರಿಸಿದ್ದರು.

Read more Photos on
click me!

Recommended Stories