ಆರ್ಯನ್ ಖಾನ್, ತಾಪ್ಸಿ ಪನ್ನು, ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ, ಕಂಗನಾ ರನೌತ್, ಮನೋಜ್ ಬಾಜ್‌ಪೇಯಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ವರ್ಷ ವಿವಾದಗಳಿಗೆ ಸಿಲುಕಿದ್ದಾರೆ. ಕೆಲವರು ತಮ್ಮ ಹೇಳಿಕೆಗಳ ಕಾರಣದಿಂದ ಚರ್ಚರಯಾದರೆ ಇನ್ನೂ ಕೆಲವರು ತಮ್ಮ ಸಿನಿಮಾಗಳಿಗೆ ಸಂಬಂಧಿಸಿದಂತೆ ವಿವಾದಗಳಲ್ಲಿ ಸಿಲುಕಿದ್ದಾರೆ.
ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ಅವರನ್ನು ಮುಂಬೈ ಪೊಲೀಸರು ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸಿ ಅಪ್ಲಿಕೇಶನ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಬಂಧಿಸಿದ್ದರು. ಮುಂಬೈ ಕ್ರೈಂ ಬ್ರಾಂಚ್ ಕೆಲಕಾಲ ತನಿಖೆ ನಡೆಸುತ್ತಿತ್ತು. ರಾಜ್ ಕುಂದ್ರಾ ಪ್ರಮುಖ ಸಂಚುಕೋರ ಎಂದು ಹೇಳಲಾಗಿದೆ. ಆದರೆ, ನಂತರ ಕುಂದ್ರಾಗೆ ಜಾಮೀನು ನೀಡಲಾಗಿತ್ತು.
ಕಂಗನಾ ರಣಾವತ್ (Kangana Ranaut) ತನ್ನ ಬೋಲ್ಡ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಕಂಗನಾ ಭಾರತದ ಸ್ವಾತಂತ್ರ್ಯದ ಬಗ್ಗೆ ಕಾಮೆಂಟ್ ಮಾಡಿರುವುದು ಅವರ ಈ ವರ್ಷದ ದೊಡ್ಡ ವಿವಾದವಾಗಿದೆ. 1947ರಲ್ಲಿ ಭಿಕ್ಷೆ ಬೇಡುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, 2014ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದರು ಇದರಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.
ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್‌ನನ್ನು (Aryan Khan) ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಎನ್‌ಸಿಬಿ ಅವರ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿತ್ತು, ಇದರಿಂದಾಗಿ ಅವರು ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಆದರೆ, ನಂತರ ಬೇಲ್ ಮೇಲೆ ನಂತರ ಅವರನ್ನು ಜೈಲಿನಿಂದ ಹೊರತರಲು ಸಾಧ್ಯವಾಯಿತು.
ತಾಂಡವ್ (Tandav) ಎಂಬ ವೆಬ್ ಸೀರೀಸ್ ನಲ್ಲಿ ಸೈಫ್ ಅಲಿ ಖಾನ್(Saif Ali Khan) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಾಸ್ತವವಾಗಿ, ಸೈಫ್ ಅವರ ಈ ವೆಬ್ ಸರಣಿಯಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕೆಲವು ದೃಶ್ಯಗಳಿವೆ. ವೆಬ್ ಸರಣಿಯ ನಿರ್ಮಾಪಕರ ವಿರುದ್ಧವೂ ದೂರು ದಾಖಲಾಗಿದೆ. ಈ ವಿವಾದವು ಸಾಕಷ್ಟು ಹೆಚ್ಚಾಯಿತು, ಇದರಿಂದಾಗಿ ನಿರ್ಮಾಪಕರು ಕೆಲವು ದೃಶ್ಯಗಳನ್ನು ತೆಗೆಯಬೇಕಾಯಿತು.
ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರು 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ತೊಂದರೆಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಆಕೆಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು, ಅದರಲ್ಲಿ ಅವರು ಸುಕೇಶ್ ಅವರನ್ನು ಚುಂಬಿಸುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ನಂತರ ಬಿಡುಗಡೆ ಮಾಡಲಾಗಿದೆ.
ಬಬಿತಾ ಜಿ ಅಂದರೆ ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ (Taarak Mehta Ka Ooltah Chashmah) ಜನಪ್ರಿಯ ಹಿಂದಿ ಧಾರವಾಹಿಯ ಮುನ್ಮುನ್ ದತ್ತಾ (Munmun Dutta)ಕೂಡ ವಿವಾದದಲ್ಲಿ ಸಿಲುಕಿದ್ದರು. ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಜಾತಿನಿಂದನೆಯ ಪದಗಳನ್ನು ಹೇಳುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಅವರನ್ನು ತೀವ್ರವಾಗಿ ಟ್ರೋಲ್ ಮಾಡಲಾಯಿತು. ಅಷ್ಟೇ ಅಲ್ಲ, ಬಂಧನಕ್ಕೂ ಜನರು ಒತ್ತಾಯಿಸಿದ್ದರು. ಬಳಿಕ ವಿಡಿಯೋವನ್ನು ಶೇರ್ ಮಾಡುವ ಮೂಲಕ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಟಿವಿ ಶೋ ಇಂಡಿಯನ್ ಐಡಲ್ (Indian Idol) ಕೂಡ ಈ ವರ್ಷ ಮುಖ್ಯಾಂಶಗಳಲ್ಲಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕಿಶೋಲ್ ಕುಮಾರ್(Amit Kumar) ಪುತ್ರ ಅಮಿತ್ ಕುಮಾರ್ (Amit Kumar) ತಮ್ಮ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದರು. ಶೋ ಮೇಕರ್‌ಗಳು ಸ್ಪರ್ಧಿಗಳನ್ನು ಹೊಗಳುವಂತೆ ತಮ್ಮ ಬಳಿ ಕೇಳಿಕೊಂಡಿದ್ದಾರೆ ಎಂದು ಅಮಿತ್ ಹೇಳಿದ್ದರು. ಈ ವಿವಾದದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಗಲಾಟೆಗಳು ನಡೆದವು.
ಮನೋಜ್ ಬಾಜಪೇಯಿ (Manoj Bajpayee) ಅವರ ಅತ್ಯಂತ ಪ್ರಸಿದ್ಧ ವೆಬ್ ಸರಣಿ ಫ್ಯಾಮಿಲಿ ಮ್ಯಾನ್‌ನ(The Family Man) ಎರಡನೇ ಸೀಸನ್ ವಿವಾದದಲ್ಲಿದೆ. ಇದರಲ್ಲಿ ಭಾರತದ ದಕ್ಷಿಣ ಪ್ರಾಂತ್ಯಗಳ ಜನರನ್ನು ಭಯೋತ್ಪಾದಕರಂತೆ ತೋರಿಸಲಾಗಿದ್ದು, ಇದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ.
ಈ ವರ್ಷ ಯುವಿಕಾ ಚೌಧರಿ (Yuvika Chaudhary) ಕೂಡ ಸುದ್ದಿಯಲ್ಲಿದ್ದರು. ಆಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಆಕೆ ಜಾತಿವಾದಿ ಪದವನ್ನು ಬಳಸುತ್ತಿರುವುದು ಕಂಡುಬಂದಿದೆ. ಟ್ರೋಲ್‌ಗೆ ಒಳಗಾದ ಕಾರಣ, ಅವರು ಜನರಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.