Pushpa Item Song: ಸಮಂತಾರ ಐಟಂ ಸಾಂಗ್‌ ವಿವಾದ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದಿಷ್ಟು!

Published : Dec 19, 2021, 06:25 PM IST

ಅಲ್ಲು ಅರ್ಜುನ್ (Allu Arjun) ನಟಿಸಿರುವ ಪುಷ್ಪಾ (Pushpa) ಸಿನಿಮಾದ ಡ್ಯಾನ್ಸ್ ನಂಬರ್ ಊ ಅಂತಾವ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಡ್ಯಾನ್ಸ್ ನಂಬರ್ ಊ ಅಂತಾವ ತೊಂದರೆಗೆ ಸಿಲುಕಿದೆ ಹಾಗೂ ವಿವಾದಕ್ಕೂ ಕಾರಣವಾಗಿದೆ. ಹಾಡಿನ ಸಾಹಿತ್ಯ ಮತ್ತು ವಿಡಿಯೋ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಪುರುಷರ ಸಂಘವೊಂದು ಪುಷ್ಪ ಸಿನಿಮಾದ ಈ ಹಾಡಿನ  ವಿರುದ್ಧ ಪ್ರಕರಣ ದಾಖಲಿಸಿದೆ. ಚೆನೈನಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಅಲ್ಲು ಅವರಿಗೆ  'ಊ ಅಂತಾವಾ' ವಿವಾದದ ಕುರಿತು ಅಭಿಪ್ರಾಯವನ್ನು ಕೇಳಲಾಯಿತು.ಈ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು? ವಿವರ ಇಲ್ಲಿದೆ.

PREV
17
Pushpa Item Song: ಸಮಂತಾರ ಐಟಂ ಸಾಂಗ್‌ ವಿವಾದ ಬಗ್ಗೆ ಅಲ್ಲು ಅರ್ಜುನ್  ಹೇಳಿದ್ದಿಷ್ಟು!

ಇತ್ತೀಚಿನ ಬಿಡುಗಡೆಯಾದ ಅಲ್ಲು ಅರ್ಜುನ್ ಅವರ ಪುಷ್ಪಾ ಸಿನಿಮಾ 'ಊ ಅಂತವ ಊಊ ಅಂತವ', ಹಾಡು ಸಖತ್‌ ವೈರಲ್‌ ಆಗಿದೆ. ಇದು ಸಮಂತಾ ರುತ್ ಪ್ರಭು ಅವರ ಮೊದಲ ಐಟಂ ಸಾಂಗ್ ಆಗಿದ್ದು, ಅವರು ಸ್ಕರ್ಟ್‌ ಬ್ಲೂ ಬ್ಲೌಸ್‌ನಲ್ಲಿ ಸೂಪರ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 

27

ಚಂದ್ರ ಬೋಸ್ ಬರೆದಿರುವ ಹಾಡಿನ ಸಾಹಿತ್ಯವು ಪುರುಷರು ಸಾಮಾನ್ಯವಾಗಿ ಮಹಿಳೆಯರನ್ನು ಹೇಗೆ ನೋಡುತ್ತಾರೆ ಎಂಬುದರ ಕುರಿತು ಒಂದು ಬೋಲ್ಡ್‌ ಸಂದೇಶವನ್ನು ಹೊಂದಿದೆ. ಓ ಅಂತಾವಾ ಹಾಡಿನ ಸಾಹಿತ್ಯದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ. 

37

ಈ ನಡುವೆ ಪುಷ್ಪಾ ಸಿನಿಮಾದ ಈ ಹಾಡು ಪುರುಷರನ್ನು ಕಾಮಪ್ರಚೋದಕ ಎಂದು ವಿವಾದವನ್ನು ಉಂಟುಮಾಡಿದೆ ಮತ್ತು ತೊದರೆಗೆ ಸಿಲುಕಿದೆಹಾಡಿನ ಸಾಹಿತ್ಯ ಮತ್ತು  ವಿಡಿಯೋ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಪುರುಷರ ಸಂಘವೊಂದು ಪುಷ್ಪ ಸಿನಿಮಾದ ಈ ಹಾಡಿನ  ವಿರುದ್ಧ ಪ್ರಕರಣ ದಾಖಲಿಸಿದೆ.

47

ದಿ ಮೆನ್ಸ್ ಅಸೋಸಿಯೇಷನ್ ​​ಆಂಧ್ರಪ್ರದೇಶದಲ್ಲಿ ತಯಾರಕರ ವಿರುದ್ಧ ಮೊಕದ್ದಮೆ ಹೂಡಿದೆ ಮತ್ತು ಹಾಡಿನ ವೀಡಿಯೊವನ್ನು ನಿಷೇಧಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಮಾಧ್ಯಮಗಳ ಜೊತೆಗಿನ ಸಂವಾದದ ವೇಳೆ ಅಲ್ಲು ಅರ್ಜುನ್ ಅವರಿಗೆ ಹಾಡಿನ ವಿವಾದದ  ಬಗ್ಗೆ ಅವರ ಅಭಿಪ್ರಾಯವನ್ನು ಕೇಳಲಾಯಿತು. 

57

ಹಾಡಿನ ಕುರಿತು ಅಲ್ಲು ಅವರ ಅಭಿಪ್ರಾಯವನ್ನು ಕೇಳಿದ ವರದಿಗಾರರಿಗೆ 'ಇದು ನಿಜ. ಹಾಡಿನ ಉಲ್ಲೇಖವು ನಿಜವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಮಂತಾ ಅವರ ಬೋಲ್ಡ್, ಬ್ಲಿಂಗಿ ಐಟಂ ನಂಬರ್‌ಗಾಗಿ ಟ್ರೋಲ್ ಮಾಡಿದ್ದಾರೆ, ಆದರೆ ಅನೇಕರು ಅದನ್ನು ಇಷ್ಟಪಟ್ಟಿದ್ದಾರೆ' ಎಂದು ಅವರು ಹೇಳಿದರು.

67

ನಿನ್ನೆ, ಸಮಂತಾ ಅವರ ಐಟಂ ಸಾಂಗ್‌ಗೆ ಥಿಯೇಟರ್‌ಗಳಲ್ಲಿ ಜನಸಾಮಾನ್ಯರು ನೃತ್ಯ ಮಾಡುವುದನ್ನು ಮತ್ತು ಆನಂದಿಸುತ್ತಿರುವುದನ್ನು ತೋರಿಸುವ ಕೆಲವು ದೃಶ್ಯಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಕಾಪಿರೈಟ್ ಸಮಸ್ಯೆಯಿಂದಾಗಿ ಸಮಂತಾ ಅವರ ಹಾಡನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ, 'Missed the mass #ooAntavaOoooAntava' ಎಂದು ಸಮಂತಾ ಟ್ವೀಟ್ ಮಾಡಿದ್ದರು.

 

77

ಹಾಡಿನ ಸಂಗೀತವನ್ನು ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ ಮತ್ತು ಗಣೇಶ್ ಆಚಾರ್ಯ ಸಮಂತಾ ಅವರ ಹಾಟ್ ನಂಬರ್‌ಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಮಂತಾ ಪ್ರಸ್ತುತ ಎರಡು ಬಹುಭಾಷಾ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಜೊತೆಗೆ ಅವರ ಶಾಕುಂತಲಂ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

Read more Photos on
click me!

Recommended Stories