ಬಾಲಿವುಡ್’ನ ಈ ಸ್ಟಾರ್ ನಟರಿಗಿಂತ ಅವರ ಹೆಂಡ್ತಿಯರೇ ಶ್ರೀಮಂತರು!

First Published | Sep 12, 2024, 12:52 AM IST

ಬಾಲಿವುಡ್ ನಟ -ನಟಿಯರು ತುಂಬಾನೆ ರಿಚ್ ಅನ್ನೋದು ಗೊತ್ತೇ ಇದೆ. ಅದರಲ್ಲೂ ಈ ಸ್ಟಾರ್ ನಟಿಯರು ತಮ್ಮ ಗಂಡನಿಂತಲೂ ದುಪ್ಪಟ್ಟು ಶ್ರೀಮಂತರು. 
 

ಬಾಲಿವುಡ್ ನ ಈ ನಟಿಯರು ಎಷ್ಟು ಶ್ರೀಮಂತರು ಅಂದ್ರೆ ಅವರ ಪತಿಯಂದಿರೂ ಕೂಡ ಅವರ ಮುಂದೆ ಏನೂ ಇಲ್ಲ. ಇಲ್ಲಿದೆ ನೋಡಿ ಬಾಲಿವುಡ್ (bollywood) ನ ಆಗರ್ಭ ಶ್ರೀಮಂತ ನಟಿಯರ ಲಿಸ್ಟ್, ಇವರ ನೆಟ್ ವರ್ತ್ ಅವರ ಗಂಡನ ನೆಟ್ ವರ್ತ್ ಗಿಂತ ದುಪ್ಪಟ್ಟು ಆಗಿದೆ. 
 

ಕತ್ರೀನಾ ಕೈಫ್ : ವಿಕ್ಕಿ ಕೌಶಲ್ ಗಿಂತ ಕತ್ರೀನಾ ಕೈಫ್(katrina Kaif)  6 ಪಟ್ಟು ಹೆಚ್ಚು ಶ್ರೀಮಂತರಂತೆ. ವಿಕ್ಕಿ (Vicjy Kaushal) ನೆಟ್ ವರ್ತ್ 41 ಕೋಟಿಯಾಗಿದ್ರೆ, ಕತ್ರೀನಾ ಕೈಫ್ ನೆಟ್ ವರ್ತ್ 224 ಕೋಟಿ ಆಸ್ತಿಯ ಒಡತಿ. 
 

Tap to resize

ಪ್ರೀತಿ ಝಿಂಟಾ : ಬಾಲಿವುಡ್ ನ ಡಿಂಪಲ್ ಬ್ಯೂಟಿ ಪ್ರೀತಿ ಝಿಂಟಾ (Priety Zinta)  ಕೂಡ ತುಂಬಾನೆ ರಿಚ್. ಪ್ರೀತಿ ಝಿಂಟಾ ಪತಿ ಜೀನ್ ಗುಡೆನೋ ಆಸ್ತಿ 25 ಕೋಟಿ, ಆದರೆ ಪ್ರೀತಿ ಝಿಂಟಾ ಆಸ್ತಿ 250 ಕೋಟಿ. 
 

ದೀಪಿಕಾ ಪಡುಕೋಣೆ : ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ (Deepika Padukone) ಇಬ್ಬರ ಆಸ್ತಿಯಲ್ಲಿ ಬರೋಬ್ಬರಿ 255 ಕೋಟಿ ಡಿಫರೆನ್ಸ್ ಇದೆ. ರಣ್ ವೀರ್ ಸಿಂಗ್ ಆಸ್ತಿ 245 ಕೋಟಿ ಆಗಿದ್ರೆ, ದೀಪಿಕಾ ಪಡುಕೋಣೆ ಆಸ್ತಿ 500 ಕೋಟಿ. 
 

ಆಲಿಯಾ ಭಟ್ : ಇದನ್ನ ಕೇಳಿ ನಿಮಗೆ ವಿಚಿತ್ರ ಅನಿಸಬಹುದು, ಆದ್ರೂ ಇದು ನಿಜಾ. ರಣ್ಬೀರ್ ಕಪೂರ್ ಆಸ್ತಿ 345 ಕೋಟಿಯಾಗಿದ್ದು, ಆಲಿಯಾ ಭಟ್ ಆಸ್ತಿ 550 ಕೋಟಿಯಾಗಿದೆ. 
 

ಐಶ್ವರ್ಯ ರೈ : ರಿಚ್ ಸ್ಟಾರ್ ನಟಿಯರಲ್ಲಿ ಮೊದಲ ಸ್ಥಾನದಲ್ಲಿರೋದು ಐಶ್ವರ್ಯ ರೈ. (Aishwarya Rai) ಈಕೆ ಬಾಲಿವುಡ್ ನ ಅತ್ಯಂತ ಶ್ರೀಮಂತ ನಟಿ. ಇವರ ಆಸ್ತಿ ಬರೋಬ್ಬರಿ 800 ಕೋಟಿಯಾಗಿದೆ. ಆದರೆ ಅಭಿಷೇಕ್ ಬಚ್ಚನ್ ಆಸ್ತಿ ಮೌಲ್ಯ 280 ಕೋಟಿಯಾಗಿದೆ. 

Latest Videos

click me!