ಅಮ್ಮನ ವಿಧೇಯ ಮಗನಾಗಿದ್ದ ಕಾರಣ ಕಿರಣ್‌ ಕುಮಾರ್‌ : ಸಂಬಂಧ ಮುರಿದು ಕೊಂಡ ರೇಖಾ

First Published | Jan 17, 2023, 5:25 PM IST

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ  ರೇಖಾ (Rekha) ಅವರ ಬದುಕು ತೆರೆದ ಪುಟಗಳ ಪುಸ್ತಕವಿದ್ದಂತೆ. ಇದರಲ್ಲಿ ಲಕ್ಷಾಂತರ ಕಥೆಗಳು ದಾಖಲಾಗಿವೆ.  ಅವರ ಕಾಲದ ಬೋಲ್ಡ್ ಮತ್ತು ಬಹಿರಂಗವಾಗಿ ಮಾತನಾಡುವ ನಟಿಯ ಆಫೇರ್‌  ಬಗ್ಗೆ  ಎಂದಿಗೂ ಮರೆಮಾಡಲಿಲ್ಲ. ರೇಖಾ ಅವರ ಹೆಸರು ಅನೇಕ ನಟರೊಂದಿಗೆ ಕೇಳಿಬಂದಿವೆ. ಅವರ ಹಲವು ಸಂಬಂಧಗಳು ಜೊತೆಗೆ ಬ್ರೇಕಪ್‌ ಸಹ ಸಾಕಷ್ಟು ಸುದ್ದಿ ಮಾಡಿವೆ. ಕೆಲವು ದಶಕಗಳ ನಂತರವೂ ಅವರ ಲವ್‌ ಲೈಫ್‌ ಆಗಗಾ ಮತ್ತೆ ಚರ್ಚೆಗೆ ಬರುತ್ತಲೇ ಇರುತ್ತದೆ.
 

ಪ್ರತಿ ಜೋಡಿಯಂತೆ ರೇಖಾ ಅವರ ಸಂಬಂಧದಲ್ಲೂ ಜಗಳಗಳಿದ್ದವು. ನಟಿಯ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ರೇಖಾ  ಒಬ್ಬ ನಟನ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾಗ ಅವನ ಒಂದು ಅಭ್ಯಾಸ ಅವರನ್ನು ತುಂಬಾ ಕಾಡುತ್ತಿತ್ತು. 

ರೇಖಾ ಮತ್ತು ನಟ ಕಿರಣ್ ಕುಮಾರ್ ಅವರ ಅನೈತಿಕ ಸಂಬಂಧದ ಚರ್ಚೆಗಳು ಒಂದು ಕಾಲದಲ್ಲಿ ಪ್ರಮುಖ ಸುದ್ದಿಯಾಗಿದ್ದವು. ಈ ಸತ್ಯವನ್ನು ಸ್ವತಃ ರೇಖಾ ಒಪ್ಪಿಕೊಂಡಿದ್ದಾರೆ.

Tap to resize

ರೇಖಾ ಜನವರಿ 1975 ರಲ್ಲಿ ಪ್ರಕಟವಾದ ಸ್ಟಾರ್ಡಸ್ಟ್ ನಿಯತಕಾಲಿಕದ ಆವೃತ್ತಿಯಲ್ಲಿ ಕಿರಣ್ ಕುಮಾರ್ ಅವರೊಂದಿಗಿನ ಸಂಬಂಧವನ್ನು ಚರ್ಚಿಸಿದರು. ಇದರೊಂದಿಗೆ ಅವರ ಒಂದು ಅಭ್ಯಾಸದಿಂದ ನಟಿ ಹೇಗೆ ಕೋಪಗೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದರು.

Rekha

ರೇಖಾ ಅವರು ಕಿರಣ್ ಕುಮಾರ್ ಅವರನ್ನು 'ಮಮ್ಮಾ ಬಾಯ್' ಎಂದೇ ಪರಿಗಣಿಸುತ್ತಿದ್ದರು. ಲೇಖನದಲ್ಲಿ, ಕಿರಣ್ ಅವರೊಂದಿಗೆ ತಡರಾತ್ರಿಯ ವಾಕ್‌ ಅನ್ನು ನಾನು ಪ್ಲಾನ್‌ ಮಾಡಲು  ಸಾಧ್ಯವಿಲ್ಲ ಯಾಕಂದರೆ ಅವರು ರಾತ್ರಿ 10 ಗಂಟೆಗೆ ಮನೆಗೆ ಮನೆಗೆ ಹೋಗಿ ಹಾಲು ಕುಡಿಯಬೇಕು ಎಂದು ಅವರು ಹೇಳಿದ್ದಾರೆ. 

ಅವರ ಈ 'ವಿಧೇಯ ಪುತ್ರ' ಅವತಾರ ನನ್ನನ್ನು ತುಂಬಾ ಕಾಡುತ್ತಿದೆ  ನನಗೆ  ತುಂಬಾ ಅಮ್ಮನ ಮಗ ಸಿಕ್ಕಿದ್ದಾನೆ ಎಂದು ನಿಮಗೆ ಅನಿಸುವುದಿಲ್ವಾ ಎಂದು ನಟಿ ಹೇಳಿದ್ದರು.
 

ರೇಖಾ ತನ್ನ ಮಾಜಿ ಗೆಳತಿಯ ಧ್ವನಿಯನ್ನು ಅನುಕರಿಸಿ ನನಗೆ  ಕಿರುಕುಳ ನೀಡುತ್ತಿದ್ದರು ಎಂದು ಕಿರಣ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಆ ಸಮಯದಲ್ಲಿ ಕಿರಣ್ ಕುಮಾರ್ ಅವರ ತಂದೆ ಮತ್ತು ಖ್ಯಾತ ನಟ ಜೀವನ್ ಕುಮಾರ್ ಅವರು ನಟಿ ರೇಖಾ ಅವರ ಮನೆಯ ಸೊಸೆಯಾಗಲು ಬಯಸುವುದಿಲ್ಲ ಎಂದು ರೇಖಾ ಬಗ್ಗೆ ಮತ್ತೊಂದು ವದಂತಿ ಹಬ್ಬಿತ್ತು .ತನ್ನ ತಂದೆಯಿಂದ ತಿರಸ್ಕರಿಸಲ್ಪಟ್ಟಾಗ ಕಿರಣ್ ತನ್ನ ಪರವಾಗಿ ನಿಲ್ಲಲಿಲ್ಲ ಎಂದು ರೇಖಾ ಹೆಚ್ಚು ನೊಂದರು.

ತಮ್ಮ ವೃತ್ತಿ ಜೀವನದಲ್ಲಿ 190ಕ್ಕೂ ಹೆಚ್ಚು ಸಿನಿಮಾ ಮಾಡಿರುವ  68 ವರ್ಷದ ನಟಿ ರೇಖಾರ ಸೌಂದರ್ಯಕ್ಕೆ ಯಾರೂ ಸಾಟಿಯಿಲ್ಲ ಮತ್ತು  ಈ ಎವರ್‌ಗ್ರೀನ್‌ ನಟಿ ಇಂದಿಗೂ ತಮ್ಮದೇ ಆದ ದೊಡ್ಡ ಫ್ಯಾನ್‌ ಫಾಲೋಯಿಂಗ್‌ ಉಳಿಸಿಕೊಂಡಿದ್ದಾರೆ.

Latest Videos

click me!