ದೇವರಕೊಂಡ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕಾ? 'ನಾನು ಹಿಂದಿರುಗಿ ಹೋಗಬೇಕು' ಎಂದ ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

Published : Jan 17, 2023, 10:38 AM IST

ನಟಿ ರಶ್ಮಿಕಾ ಮಂದಣ್ಣ ಸುಂದರ ಫೋಟೋಗಳನ್ನು ಹಂಚಿಕೊಂಡು ನಾನು ಹಿಂದಿರುಗಿ ಹೋಗಬೇಕು ಎಂದು ಹೇಳಿದ್ದಾರೆ. 

PREV
16
ದೇವರಕೊಂಡ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕಾ? 'ನಾನು ಹಿಂದಿರುಗಿ ಹೋಗಬೇಕು' ಎಂದ ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

ನಟಿ ರಶ್ಮಿಕಾ ಮಂದಣ್ಣ ಯಾವುದೇ ಪೋಸ್ಟ್ ಹಾಕಿದ್ರು, ಏನೇ ಹೇಳಿದ್ರೂ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಾರೆ. ಹಾಗಂತ ರಶ್ಮಿಕಾ ಹೆಚ್ಚು ತಲೆಕೆಡಿಸಿಕೊಳ್ಳದೆ ಸಿನಿಮಾ, ಪ್ರಮೋಷನ್ ಅಂತ ಬ್ಯುಸಿಯಾಗಿದ್ದಾರೆ. ಸದ್ಯ ಮಿಷನ್ ಮಜ್ನು ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ರಶ್ಮಿಕಾ. 

26

ರಶ್ಮಿಕಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ನಟನೆಯ ಮಿಷನ್ ಮಜ್ನು ಸಿನಿಮಾ ಇದೇ ತಿಂಗಳು ಒಟಿಟಿಯಲ್ಲಿ ರಿಲೀಸ್ ಆಗ್ತಿದೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ರಶ್ಮಿಕಾ ನಿರತರಾಗಿದ್ದಾರೆ. ಈ ನಡುವೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ಮತ್ತೆ ಟ್ರೋಲಿಗರಿಗೆ ಆಹಾರವಾಗಿದೆ. ರಶ್ಮಿಕಾ ಬೀಚ್ ಪಕ್ಕದಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ. 

36

ರಶ್ಮಿಕಾ ಕೇವಲ ಬೀಚ್ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ಮತ್ತೆ ಹಿಂದಿರುಗಬೇಕು ಎಂದು ಹೇಳಿದ್ದಾರೆ. ಪೋಟೋ ಜೊತೆಗೆ ರಶ್ಮಿಕಾ 'ನಾನು ಹಿಂದಿರುಗಬೇಕು ಎನಿಸುತ್ತಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ರಶ್ಮಿಕಾ ಕ್ಯಾಪ್ಷನ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಇನ್ನು ಕೆಲವರು ರಶ್ಮಿಕಾ ಕಲೆಳೆಯುತ್ತಿದ್ದಾರೆ. 

46

ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, 'ಇದು ವಿಜಯ್ ದೇವರಕೊಂಡ ಕ್ಲಿಕ್  ಮಾಡಿದ ಫೋಟೋನಾ' ಎಂದು ಕೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಮತ್ತೆ ವಿಜಯ್ ದೇವವರಕೊಂಡ ಜೊತೆ ಮಾಲ್ಡೀವ್ಸ್‌ಗೆ ಹೋಗಬೇಕಾ' ಎನ್ನುತ್ತಿದ್ದಾರೆ. ಇನ್ನು ಕೆಲವರು ಮತ್ತೆ ವಿದೇಶಕ್ಕೆ ಹಾರಿದ್ದೀರಾ ಎಂದು ಕೇಳುತ್ತಿದ್ದಾರೆ. 

56

ರಶ್ಮಿಕಾ ಇತ್ತೀಚಿಗಷ್ಟೆ ಸಂಕ್ರಾಂತಿಗೆ ವಿಶ್ ಮಾಡಿ ಸುದ್ದಿಯಾಗಿದ್ದರು. ಎಲ್ಲಾ ಭಾಷೆಯಲ್ಲೂ ಸಂಕ್ರಾಂತಿಗೆ ಸುಭಾಶಯ ತಿಳಿಸಿದ್ದರು. ಕನ್ನಡಕ್ಕೆ ಮೊದಲ ಆದ್ಯತೆ ನೀಡಿದರೂ ಸಹ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಬಕೆಟ್ ಹಿಡಿದರೂ ಹಳೆಯದನ್ನು ಮನೆಯಲ್ಲ ಎಂದು ಅನೇಕರು ರಶ್ಮಿಕಾ ವಿರುದ್ಧ ಕಿಡಿ ಕಾರಿದ್ದರು. 
 

66

ಟ್ರೋಲ್ ಮತ್ತು ನೆಗೆಟಿವಿಟಿ ಬಗ್ಗೆ ರಶ್ಮಿಕಾ ಇತ್ತೀಚಿಗಷ್ಟೆ ಆಂಗ್ಲ ಮಾಧ್ಯಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. 'ಜನರು ನಿಮ್ಮ ಬಗ್ಗೆ ಕುತೂಹಲ ಹೊಂದಿಲ್ಲ ಎಂದರೆ ಯಾರು ನಿಮ್ಮ ಬಗ್ಗೆ ಮಾತನಾಡಲ್ಲ. ನೆಗೆಟಿವ್ ಅಥವಾ ಪಾಸಿಟಿವ್ ಆಗಿರಲಿ ದಿನದ ಕೊನೆಯಲ್ಲಿ ನನ್ನ ಬಗ್ಗೆ ಮಾತನಾಡಿದ್ದೀರಿ ಅಲ್ವಾ ಸಾಕು' ಎಂದು ಹೇಳಿದ್ದರು. 

Read more Photos on
click me!

Recommended Stories