ಸೌತ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಮಗಳ ಸಂಕ್ರಾತಿ ಸೆಲೆಬ್ರೆಷನ್‌ ವೀಡಿಯೊ ವೈರಲ್‌

Published : Jan 16, 2023, 06:49 PM IST

ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು  ಜನವರಿ 15 ರಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಯಿತು. ಇಡೀ ದೇಶದಲ್ಲಿ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೆ ಎಲ್ಲರೂ ಇದನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಸೌತ್‌ನ ಸೂಪರ್‌ಸ್ಟಾರ್ ಅಲ್ಲು ಅರ್ಜುನ್  (Allu Arjun) ಅವರ ಪತ್ನಿ ಸ್ನೇಹಾ ರೆಡ್ಡಿ ಕೂಡ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಲಡ್ಡೂಗಳನ್ನು ತಯಾರಿಸಿದ್ದಾರೆ. ಮಗಳು ಅಲ್ಲು ಅರ್ಹಾ ಅವರೊಂದಿಗೆ ಲಡ್ಡು ತಯಾರಿಸುವ ವೀಡಿಯೊವನ್ನು ಸ್ನೇಹಾ ಹಂಚಿಕೊಂಡಿದ್ದಾರೆ. ಈ ಕ್ಯೂಟ್‌ ವೀಡಿಯೊ ಸಖತ್‌ ಮೆಚ್ಚುಗೆ ಗಳಿಸಿದೆ.  

PREV
112
ಸೌತ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಮಗಳ ಸಂಕ್ರಾತಿ ಸೆಲೆಬ್ರೆಷನ್‌ ವೀಡಿಯೊ ವೈರಲ್‌

ಸ್ನೇಹಾ ರೆಡ್ಡಿ ಶೇರ್‌ ಮಾಡಿರುವ ವೀಡಿಯೋದಲ್ಲಿ  ತಾಯಿ-ಮಗಳು ಸಂಕ್ರಾಂತಿಗೆ ಲಡ್ಡುಗಳನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಹಂಚಿಕೊಂಡಿರುವ ಸ್ನೇಹಾ ರೆಡ್ಡಿ ಅವರು ಟಿಪ್ಪಣಿಯನ್ನೂ ಬರೆದಿದ್ದಾರೆ.
 

212

'ಇದು ಹಬ್ಬದ ಸಮಯ, ಆದರೆ ಅರ್ಹಗಳಿಗೆ ಇದು ಲಡ್ಡೂ ಸಮಯ. ಈ ವರ್ಷ ಸಂಕ್ರಾಂತಿಯಂದು, ಸುನ್ನುನಾಡಲು ಮಾಡುವಲ್ಲಿ ಅರ್ಹ ನನ್ನೊಂದಿಗೆ ಮೊದಲ ಬಾರಿಗೆ ಸೇರಿಕೊಂಡಿದ್ದಾಳೆ, ಇದು ಸಂಪ್ರದಾಯ ಮತ್ತು ಆರೋಗ್ಯಕ್ಕೆ ಒಳ್ಳೆಯದು' ಎಂದು ಸ್ನೇಹಾ ಅವರು ವೀಡಿಯೊ ಜೊತೆ ಬರೆದಿದ್ದಾರೆ.


 

312

ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಕಂದು ಬಣ್ಣದ ಸೂಟ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿರುವ ವಿಡಿಯೋದಲ್ಲಿ, ಅವರ ಮಗಳು ಅರ್ಹಾ ಪಿಂಕ್ ಸೂಟ್ ಧರಿಸಿದ್ದಾರೆ. ಲಡ್ಡೂಗಳನ್ನು ತಯಾರಿಸುವಾಗ, ತಾಯಿ ಮತ್ತು ಮಗಳ ನಗು ತುಂಬಾ ಮುದ್ದಾಗಿದೆ.   

412

ಸ್ನೇಹಾ ತಮ್ಮ ಇಡೀ ಕುಟುಂಬದ ಪರವಾಗಿ ಜನರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಅಮ್ಮ ಮಗಳ ಈ ಕ್ಯೂಟ್‌ ಸಂಭ್ರಮವನ್ನು ಜನ ತೀವ್ರವಾಗಿ ಹೊಗಳುತ್ತಿದ್ದಾರೆ.

512

ಅಲ್ಲು ಅರ್ಜುನ್ ಮಾರ್ಚ್ 6, 2011 ರಂದು ಹೈದರಾಬಾದ್‌ನಲ್ಲಿ ಸ್ನೇಹಾ ರೆಡ್ಡಿ ಅವರನ್ನು ವಿವಾಹವಾದರು. ಅಲ್ಲು ಮತ್ತು ಸ್ನೇಹಾ ಮೊದಲು ಮದುವೆಯೊಂದರಲ್ಲಿ ಕಾಮನ್ ಫ್ರೆಂಡ್ ಮೂಲಕ ಭೇಟಿಯಾದರು. ಮೊದಲ ನೋಟದಲ್ಲೇ ಸ್ನೇಹಾರಿಗೆ  ಅಲ್ಲು ತನ್ನ ಹೃದಯವನ್ನು ನೀಡಿದರು.

612

ಅಲ್ಲು ಮತ್ತು ಸ್ನೇಹಾ ಪರಸ್ಪರ  ತಮ್ಮ ಫೋನ್‌ ನಂಬರ್‌ ಬದಲಾಯಿಸಿಕೊಂಡರು  ಮತ್ತು ನಂತರ ನಿಧಾನವಾಗಿ ಅವರ ಸಂಭಾಷಣೆ ಪ್ರಾರಂಭವಾಯಿತು.


 

712

ಆ ಸಮಯದಲ್ಲಿ ಸ್ನೇಹಾ ತನ್ನ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಅಮೆರಿಕದಿಂದ ಹಿಂದಿರುಗಿದ್ದರು, ಅಲ್ಲು ಅರ್ಜುನ್ ಕೂಡ ತೆಲುಗು ಚಿತ್ರರಂಗದಲ್ಲಿ ಚಿರಪರಿಚಿತ ಹೆಸರಾಗಿದ್ದರು. ಇದಾದ ನಂತರ ಇಬ್ಬರೂ ಮಾರ್ಚ್ 2011 ರಲ್ಲಿ ವಿವಾಹವಾದರು.

812

ಮದುವೆಯಾದ ಮೂರು ವರ್ಷಗಳ ನಂತರ, ಏಪ್ರಿಲ್ 2014 ರಲ್ಲಿ, ಅಲ್ಲು ಅರ್ಜುನ್ ಮೊದಲ ಬಾರಿಗೆ ತಂದೆಯಾದರು. ಮಗ ಅಲ್ಲು ಅಯಾನ್  ಜನಿಸಿದರೆ, ಎರಡು ವರ್ಷಗಳ ನಂತರ, ಅಂದರೆ 2016 ರಲ್ಲಿ, ಅರ್ಜುನ್ ಎರಡನೇ ಬಾರಿಗೆ ತಂದೆಯಾದರು ಮತ್ತು ಈ ಬಾರಿ ಅವರ ಮನೆಯಲ್ಲಿ ಮಗಳು ಅಲ್ಲು ಅರ್ಹಾ ಜನಿಸಿದಳು.

912

ಅಲ್ಲು ಅರ್ಜುನ್ ಅಭಿನಯದ ಕೊನೆಯ ಚಿತ್ರ 'ಪುಷ್ಪ ದಿ ರೈಸ್' ಗಳಿಕೆಯ ಎಲ್ಲಾ ದಾಖಲೆಗಳನ್ನು ಮುರಿದಿದು, ವಿಶ್ವಾದ್ಯಂತ ಸುಮಾರು 365 ಕೋಟಿ ಕಲೆಕ್ಷನ್ ಮಾಡಿದೆ. ಪುಷ್ಪಾ ಹಿಂದಿ ಬೆಲ್ಟ್‌ನಲ್ಲಿ ಮಾತ್ರ 100 ಕೋಟಿಗೂ ಹೆಚ್ಚು ಗಳಿಸಿದೆ.

1012

ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಿದ್ದಾರೆ. ಮೊದಲ ಭಾಗದ  ನಂತರ, ಈಗ ತಯಾರಕರು ಅದರ ಮುಂದುವರಿದ ಭಾಗವನ್ನು ಮಾಡಲು ಹೊರಟಿದ್ದಾರೆ,  'ಪುಷ್ಪ: ದಿ ರೂಲ್ಸ್' ಹೆಸರಿನಲ್ಲಿ ಬರಲಿರುವ ಈ ಸಿನಿಮಾದಲ್ಲಿ ಅದೇ ಜೋಡಿ ಪುನರಾವರ್ತನೆಯಾಗುತ್ತದೆ. 
 

1112

ಅಲ್ಲು ಅರ್ಜುನ್ ಅವರ ಮಗಳು ಅರ್ಹಾ ಕೂಡ ತನ್ನ ಚೊಚ್ಚಲ ನಟನೆಯನ್ನು ಮಾಡಲಿದ್ದಾರೆ. ಕೇವಲ 6 ವರ್ಷದ ಅರ್ಹಾ ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

1212

ತಮ್ಮ ಮಗಳ ನಟನೆಯ ಚೊಚ್ಚಲ ಕುರಿತು ಮಾತನಾಡುತ್ತಾ, ಅಲ್ಲು ಅರ್ಜುನ್ ಹೇಳಿದ್ದರು- ಅರ್ಹಾ ಅವರನ್ನು ತೆರೆಯ ಮೇಲೆ ನೋಡಿದಾಗ ನನಗೆ ಹೇಗೆ ಅನಿಸುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
 

Read more Photos on
click me!

Recommended Stories