ರೇಖಾ-ಅಮಿತಾಬ್ ಬಚ್ಚನ್-ಜಯಾ ಬಚ್ಚನ್ ತ್ರಿಕೋನ ಪ್ರೇಮ, ಹಿಂದಿ ಚಿತ್ರೋದ್ಯಮದ ಅತ್ಯಂತ ಜನಪ್ರಿಯ ಮತ್ತು ನಿರಂತರ ಬಿಸಿ ಬಿಸಿ ಸುದ್ದಿಗಳಲ್ಲೊಂದು. 70 ರ ದಶಕದ ಮಧ್ಯ ಭಾಗದಿಂದ ವದಂತಿಗಳು ಹರಡಿದ್ದರೂ, ಮೂವರಲ್ಲಿ ಯಾರು ಊಹಾಪೋಹಗಳನ್ನು ಸ್ಪಷ್ಟವಾಗಿ ದೃಢಪಡಿಸಲಿಲ್ಲ.
ಕುತೂಹಲವೆಂದರೆ, ರೇಖಾ ಮತ್ತು ಜಯಾ ಅಮಿತಾಭ್ ಅವರ ಮದುವೆಗೆ ಮುಂಚೆಯೇ ನಿಕಟ ಬಂಧವಿತ್ತು. ವಾಸ್ತವವಾಗಿ, ಆರಂಭಿಕ ಯಶಸ್ಸಿನ ನಂತರ 18ನೇ ವಯಸ್ಸಿನಲ್ಲಿ ರೇಖಾ ಮುಂಬೈಗೆ ಶಿಫ್ಟ್ ಆದಾಗಸ ಜಯಾ ಬಚ್ಚನ್ ಇದ್ದ ಕಟ್ಟಡದಲ್ಲಿಯೇ ವಾಸವಾಗಿದ್ದರು.
ಜಯಾ ಬಿಗ್ ಬಿ ಜೊತೆ ಮದುವೆಯಾದಾಗ ರೇಖಾ ಇಬ್ಬರಿಗೂ ಒಳ್ಳೆ ಫ್ರೆಂಡ್ಸ್. ಎಷ್ಟರಮಟ್ಟಿಗೆಂದರೆ, ಮೂವರು ಆಗಾಗ್ಗೆ ಒಟ್ಟಿಗೆ ಡ್ರೈವ್‌ಗಳಿಗೆ ಹೋಗುತ್ತಿದ್ದರು. ಹನೀಫ್ ಝವೇರಿಯವರು ಬರೆದ ಮೆಹಮೂದ್ ಅವರ ಜೀವನ ಚರಿತ್ರೆಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ
'ಅಮಿತಾಭ್ ಮತ್ತು ಅನ್ವರ್ (ಮೆಹಮೂದ್ ಸಹೋದರ) ಆತ್ಮೀಯ ಸ್ನೇಹಿತರು. ಅಮಿತಾಭ್ ಮತ್ತು ಜಯಾ ಅವರನ್ನು ಆಗಾಗ್ಗೆ ಲಾಂಗ್ ಡ್ರೈವ್‌ಗೆ ಕರೆದುಕೊಂಡು ಹೋಗುತ್ತಿದ್ದೆ. ಇಬ್ಬರು ಅವನೊಂದಿಗೆ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು ಕೊಳ್ಳುತ್ತದ್ದರು ಮತ್ತು ರೇಖಾ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣದ ಉದ್ದಕ್ಕೂ ಮಾತನಾಡುತ್ತಿದ್ದರು ಎಂದು ಅನ್ವರ್ ಹೇಳಿದ್ದರು' ಎಂಬದನ್ನು ಜೀವನ ಚರಿತ್ರೆಯಲ್ಲಿ ಬರೆಯಲಾಗಿದೆ.
ರೇಖಾ ಮತ್ತು ಅಮಿತಾಭ್ ದೋ ಅಂಜಾನೆ (1976) ಸೆಟ್‌ನಲ್ಲಿ ಪರಸ್ಪರ ಭೇಟಿಯಾದರು. ಆಗಲೇ, ಅಮಿತಾಬ್ ಬಚ್ಚನ್ ಜಯಾ ಅವರನ್ನು ಮದುವೆಯಾಗಿದ್ದರು ಮತ್ತು ಶ್ವೇತಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಹ ಹುಟ್ಟಿಯಾಗಿತ್ತು.
ಅಮಿತಾಬ್ ಬಚ್ಚನ್ ಮತ್ತು ರೇಖಾ ಮಿಸ್ಟರ್ ನಟ್ವರ್‌ಲಾಲ್, ದೋ ಅಂಜಾನೆ ಮತ್ತು ಮುಕದ್ದರ್ ಕಾ ಸಿಕಂದರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದಾಗ್ಯೂ, ಸಿಲ್ಸಿಲಾ ಅವರ ಕೊನೆಯ ಚಿತ್ರವಾಗಿತ್ತು.