ಸಹೋದರನ ಮದುವೆ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೆಸ್ ಬೆಲೆ ಬರೋಬ್ಬರಿ 8 ಕೋಟಿ!

First Published | Aug 25, 2024, 10:51 AM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ವಿವಾಹದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದು, ನಟಿ ಪ್ರಿಯಾಂಕಾ ಚೋಪ್ರಾ ದೇಸಿ ಲುಕ್ ನಲ್ಲಿ ಸಖತ್ತಾಗಿ ಮಿಂಚಿದ್ದಾರೆ.
 

ಪ್ರಿಯಾಂಕಾ ಚೋಪ್ರಾ ಜೊನಾಸ್ (Priyanka Chopra Jonas) ತನ್ನ ಸಹೋದರ ಸಿದ್ಧಾರ್ಥ್ ಚೋಪ್ರಾ ಅವರ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದು, ಮೆಜೆಂಟಾ ಬಣ್ಣದ ಸೀರೆಯುಟ್ಟು ತಮ್ಮ  ದೇಸಿ ಗರ್ಲ್ ಅವತಾರದಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.
 

ಪ್ರಿಯಾಂಕಾ ಚೋಪ್ರಾ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ (Manish Malhotra) ಮಾಡಿದಂತಹ ಮೆಜೆಂಟಾ ಶೀರ್ ಸೀರೆಯ ಜೊತೆಗೆ  ಮುತ್ತಿನ ಚೋಕರ್ ಹಾರ ಮತ್ತು ಅದಕ್ಕೆ ಮ್ಯಾಚ್ ಆಗುವಂತಹ ಮುತ್ತಿನ ಕಿವಿಯೋಲೆಗಳೊಂದಿಗೆ ತುಂಬಾನೆ ಸುಂದರವಾಗಿ ಕಾಣುತ್ತಿದ್ದರು. ಪಿಗ್ಗಿ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ. 
 

Tap to resize

ಪಿಗ್ಗಿ ಧರಿಸಿದ್ದ ಮುತ್ತಿನ ಹಾರ ಅಂತಿದ್ದಲ್ಲ, ಬಿಳಿ ಚಿನ್ನ ಮತ್ತು ವಜ್ರಗಳಲ್ಲಿ ಮಾಡಿದಂತಹ ವಿಂಟೇಜ್ ಬಲ್ಗರಿ ಪರ್ಲ್ ಮತ್ತು ರೂಬಿಸ್ ನೆಕ್ಲೆಸ್ ಆಗಿದ್ದು, ಇದರ ಬೆಲೆ 8 ಕೋಟಿ ರೂ. ಅಪ್ರತಿಮ ರೋಮನ್ ಆಭರಣ ಮಳಿಗೆಯ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿರುವ ಪ್ರಿಯಾಂಕಾ, ವೈಟ್ ಗೋಲ್ಡ್ ಬ್ರಾಂಡ್ನ ವಿಂಟೇಜ್ ಹೈ ಜ್ಯುವೆಲ್ಲರಿ ಇಯರಿಂಗ್ ಕೂಡ ಧರಿಸಿದ್ದರು. ಜೊತೆಗೆ ಪ್ರಿಯಾಂಕಾ ಬರೋಬ್ಬರಿ 30,79,000 ರೂ.ಗಳ ಬ್ರೇಸೆಟ್ ಕೂಡ ಧರಿಸಿದ್ದರು. 
 

'ದೇಸಿ ಗರ್ಲ್' ಪ್ರಿಯಾಂಕಾ ಚೋಪ್ರಾ ತಮ್ಮ ಸಹೋದರ ಮದುವೆಯ ಸಮಾರಂಭದಲ್ಲಿ ಭಾಗವಹಿಸಲು ಬಂದ ಸಂಬಂಧಿಕರು ಮತ್ತು ಅವರ ತಾಯಿ ಡಾ.ಮಧು ಚೋಪ್ರಾ ಅವರೊಂದಿಗೆ ಫೋಟೊಗೆ ಪೋಸ್ ನೀಡಿದ್ದು, ಫೋಟೋಗಳು ಸದ್ಯ ವೈರಲ್ ಆಗ್ತಿವೆ.
 

ಪ್ರಿಯಾಂಕ ಚೋಪ್ರಾ ಸಹೋದರ ಸಿದ್ಧಾರ್ಥ್ ಚೋಪ್ರಾ (Siddharth Chopra) ಮತ್ತು ನೀಲಂ ರೋಕಾ ಸಮಾರಂಭ ಈ ವರ್ಷದ ಏಪ್ರಿಲ್ ನಡೆದಿತ್ತು,  ಅವರು ಆ ಸಂಭ್ರಮದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದರು ಅದರಲ್ಲಿ ಪ್ರಿಯಾಂಕಾ, ನಿಕ್ ಜೊನಸ್, ಮಾಲ್ತಿ ಕೂಡ ಭಾಗಿಯಾಗಿದ್ದರು.
 

ಇನ್ನು ಸಿದ್ದಾರ್ಥ್ ಚೋಪ್ರಾ ಮದುವೆ ಯಾವಾಗ ಅನ್ನೋದು ತಿಳಿದು ಬಂದಿಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪ್ರಿಯಾಂಕ, ಪತಿ ನಿಕ್ ಮತ್ತು ಮಗಳನ್ನು ಬಿಟ್ಟು ಏಕಾಂಗಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಮುಂಜಾನೆ ಮುಂಬೈ ನಿಲ್ದಾಣದಲ್ಲಿ ಬಂದಿಳಿದ ಪಿಗ್ಗಿ, ತಡರಾತ್ರಿಯಾಗುತ್ತಿದ್ದಂತೆ ಮತ್ತೆ ಏರ್ ಪೋರ್ಟ್ ಗೆ ತೆರಳಿದ್ದಾರೆ. 
 

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಫ್ರಾಂಕ್ ಇ ಫ್ಲವರ್ಸ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ದಿ ಬ್ಲಫ್ ನ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇಲ್ಯಾ ನೈಶುಲ್ಲರ್ ನಿರ್ದೇಶನದ ಆಕ್ಷನ್ ಕಾಮಿಡಿ ಹೆಡ್ಸ್ ಆಫ್ ಸ್ಟೇಟ್ ನಲ್ಲಿ ಜಾನ್ ಸೆನಾ, ಇಡ್ರಿಸ್ ಎಲ್ಬಾ ಮತ್ತು ಜ್ಯಾಕ್ ಕ್ವೈಡ್ ಅವರೊಂದಿಗೆ ಪಿಗ್ಗಿ ಕಾಣಿಸಿಕೊಳ್ಳಲಿದ್ದಾರೆ.
 

Latest Videos

click me!