ಪಿರಿಯಡ್ಸ್‌ನಲ್ಲಿ ಟಿಪ್ ಟಿಪ್ ಬರ್ಸಾ ಪಾನಿ ಶೂಟಿಂಗ್ ಮಾಡಿದ್ರಂತೆ ರವೀನಾ ಟಂಡನ್!

ಬಾಲಿವುಡ್ (Bollywood) ನಟಿ ರವೀನಾ ಟಂಡನ್ಅ (Raveena Tandon) ವರಿಗೆ 47 ವರ್ಷ ತುಂಬಿದೆ. 26 ಅಕ್ಟೋಬರ್ 1974 ರಂದು ಮುಂಬೈನಲ್ಲಿ ಜನಿಸಿದ ರವೀನಾ ಅವರು ಬಾಲ್ಯದಿಂದಲೂ ಮನೆಯಲ್ಲಿ ಚಲನಚಿತ್ರದ ವಾತಾವರಣವಿತ್ತು. ಅವರ ತಂದೆ ರವಿ ಟಂಡನ್ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರಿಂದ ರವೀನಾ ಸಹ ಸಿನಿಮಾರಂಗ ಪ್ರವೇಶಿಸಿದರು. 1991ರ ಚಲನಚಿತ್ರ ಪತ್ತರ್ ಕೆ ಫೂಲ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು (career) ಪ್ರಾರಂಭಿಸಿದರು. 1994ರ ಚಲನಚಿತ್ರ ದಿಲ್ವಾಲೆ ಮೂಲಕ ಬ್ರೇಕ್‌ ಪಡೆದರು. ಆ ವರ್ಷದ ಮತ್ತೊಂದು ಸಿನಿಮಾ ಮೊಹ್ರಾ  (Mohara) ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ತೂ ಚೀಜ್ ಬಡೀ ಹೇ ಮಸ್ತ್ ಮಸ್ತ್ ಹಾಡಿನಲ್ಲಿ ರವೀನಾ ಅವರ ಡ್ಯಾನ್ಸ್‌ ಯುವಕರ ನಿದ್ರೆಗೆಡಿಸಿತ್ತು. 27 ವರ್ಷಗಳ ಹಿಂದೆ ಬಂದ ಮೊಹ್ರಾ ಚಿತ್ರದ ಶೂಟಿಂಗ್ ವೇಳೆ ರವೀನಾ ಟಂಡನ್ ಭಯಪಟ್ಟಿದ್ದರಂತೆ. ಕಾರಣವೇನು ಗೊತ್ತಾ?  

ತೂ ಚೀಜ್ ಬಧಿ ಹೈ ಮಸ್ತ್ ಮಸ್ತ್... ಹಾಡಿನ ಹೊರತಾಗಿ, ಮೊಹ್ರಾ ಸಿನಿಮಾದಲ್ಲಿ ರವೀನಾ ಟಂಡನ್ - ಅಕ್ಷಯ್ ಕುಮಾರ್ ಜೊತೆ ಚಿತ್ರಿಸಲಾದ ಟಿಪ್-ಟಿಪ್ ಬರ್ಸಾ ಪಾನಿ ಹಾಡು ಕೂಡ ಸಾಕಷ್ಟು ಜನಪ್ರಿಯವಾಯಿತು. ಈ ಹಾಡಿನ ಚಿತ್ರೀಕರಣವನ್ನು ಸುಮಾರು 4 ದಿನಗಳ ಕಾಲ ಸಾಕಷ್ಟು ಕಷ್ಟದಲ್ಲಿ ಮಾಡಲಾಗಿದೆ. ಇದನ್ನು ಸ್ವತಃ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಟಿಪ್ ಟಿಪ್ ಬರ್ಸಾ ಪಾನಿ .. ಸಾಂಗ್‌ ಅನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ಚಿತ್ರೀಕರಿಸಲಾಗಿದೆ. ಶೂಟಿಂಗ್ ವೇಳೆ ನನ್ನ ಕಾಲಿಗೆ ಕಲ್ಲುಗಳು ಚುಚ್ಚುತ್ತಿದ್ದವು. ಅಷ್ಟೇ ಅಲ್ಲ, ಚಿತ್ರೀಕರಣಕ್ಕೆ ಬಳಸಿದ ನೀರು ತುಂಬಾ ತಣ್ಣಗಿತ್ತು. ಆ ನೀರಿನಲ್ಲಿ ಪದೇ ಪದೇ ನೆನೆಯುವುದರಿಂದ ನನಗೆ ಶೀತ ಮತ್ತು ತೀವ್ರ ಜ್ವರ ಬಂದಿತ್ತು, ಎಂದು ರವೀನಾ ಟಂಡನ್ ಸಂದರ್ಶನದಲ್ಲಿ ಹೇಳಿದ್ದರು.


ವಿಪರೀತ ಚಳಿಯಿಂದಾಗಿ ನನಗೆ ತೀವ್ರ ಜ್ವರವಿತ್ತು ಮತ್ತು ನನ್ನ ದೇಹ ಸುಡುತ್ತಿತ್ತು. ಚಳಿ ತಡೆಯಲು ಸೆಟ್‌ಗಳಲ್ಲಿ ಆಗಾಗ ಹನಿ ಮತ್ತು ಜಿಂಜರ್‌ ಟೀ ಕುಡಿಯುತ್ತಿದ್ದೆ. ಆದರೆ, ಇದು ಕೂಡ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡಿಲ್ಲ ಎಂದು ರವೀನಾ ಶೂಟಿಂಗ್‌ ಅನುಭವವನ್ನು ಹೇಳಿದ್ದಾರೆ. 
 

Image courtesy: Instagram

ಚಿತ್ರೀಕರಣದ ವೇಳೆ ಮೊಣಕಾಲ ಮೇಲೆ ನಡೆಯುವಾಗ ನನ್ನ ಕಾಲಿನ ಸಿಪ್ಪೆ ಸುಲಿದಿತ್ತು. ಆ ಸಮಯದಲ್ಲಿ ನನ್ನ ಪಿರಿಯಡ್ಸ್ ಕೂಡ ಇತ್ತು ಮತ್ತು ಈ ಹಾಡಿನಲ್ಲಿ ನಾನು ತುಂಬಾ ಸೆಕ್ಸಿ ಆಗ ಕಾಣಬೇಕಾಗಿತ್ತು. ಇದನ್ನೆಲ್ಲಾ ಮಾಡಲು ನನಗೆ ತುಂಬಾ ಕಷ್ಟವಾಯಿತು. ಪಿರಿಯಡ್ಸ್ ಸಮಯದಲ್ಲಿ ನೀರಿನಲ್ಲಿ ನೆನೆದು ಹಾಡನ್ನು ಚಿತ್ರೀಕರಿಸುವುದು ತುಂಬಾ ಕಷ್ಟಪಟ್ಟೆ ಎಂದು ರವೀನಾ ಹೇಳಿ ಕೊಂಡಿದ್ದರು.

ವರದಿಗಳ ಪ್ರಕಾರ, ಮೊಹ್ರಾ ಸಿನಿಮಾದ, ಶೂಟಿಂಗ್ ಸಮಯದಲ್ಲಿ ಅಕ್ಷಯ್-ರವೀನಾ ಪರಸ್ಪರ ಹತ್ತಿರವಾಗಿದ್ದರು. ಚಿತ್ರದ ಶೂಟಿಂಗ್ ಮುಗಿಯುವ ಹೊತ್ತಿಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲು ಸಹ ನಿರ್ಧರಿಸಿದ್ದರು. ಇಬ್ಬರ ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಕೆಮಿಸ್ಟ್ರಿ ಕೂಡ ಸಾಕಷ್ಟು ಚರ್ಚೆಯಲ್ಲಿತ್ತು.ಅಕ್ಷಯ್ ಅವರು ಗೃಹಿಣಿಯಾಗಬೇಕೆಂದು ಬಯಸಿದ್ದರಿಂದ ರವೀನಾ ಕೂಡ ಚಿತ್ರಗಳಿಗೆ ಸಹಿ ಹಾಕುವುದನ್ನು ನಿಲ್ಲಿಸಿದ್ದರು. 

ಕೊನೆಯ ಚಿತ್ರೀಕರಣ ಮುಗಿದ ತಕ್ಷಣ ಅಕ್ಷಯ್ ತಮ್ಮನ್ನು ಮದುವೆಯಾಗುವುದಾಗಿ ಅಕ್ಷಯ್ ಕುಮಾರ್ ಹೇಳಿದ್ದರಂತೆ. ಈ ವೇಳೆ ಇಬ್ಬರೂ ಗುಟ್ಟಾಗಿ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಸಹ ರವೀನಾ ಬಹಿರಂಗಪಡಿಸಿದ್ದರು.

ಅಕ್ಷಯ್ ಈ ವಿಷಯವನ್ನು ಮುಚ್ಚಿಡಲು ಬಯಸಿದ್ದರು ಏಕೆಂದರೆ ಇದರಿಂದಾಗಿ ಅವರಿಗೆ   ತನ್ನ ಮಹಿಳಾ ಅಭಿಮಾನಿಗಳನ್ನು ಕಳೆದುಕೊಳ್ಳುವ ಭಯವಿದೆ. ರವೀನಾ-ಅಕ್ಷಯ್ ನಡುವೆ ಸ್ವಲ್ಪ ಸಮಯದವರೆಗೆ ಎಲ್ಲವೂ ಚೆನ್ನಾಗಿತ್ತು, ಆದರೆ 1996 ರಲ್ಲಿ ಬಿಡುಗಡೆಯಾದ ಖಿಲಾಡಿ ಕಾ ಕಿಲಾಡಿ ಸಮಯದಲ್ಲಿ ಎಲ್ಲವೂ ಬದಲಾಯಿತು. ಇಬ್ಬರೂ ಬೇರೆಯಾದರು. 

ರವೀನಾ ಟಂಡನ್ ಅವರು ದಿವ್ಯ ಶಕ್ತಿ, ಕ್ಷತ್ರಿಯ,ಏಕ್‌ ಹೀ ರಸ್ತಾ, ಇನ್ಸಾನಿಯತ್‌, ಅಂದಾಜ್ ಅಪ್ನಾ ಅಪ್ನಾ, ಜಿದ್ದಿ, ಸಲಾಖೆ, ಆಂಟಿ ನಂಬರ್ ಒನ್, ಬಡೇ ಮಿಯಾನ್ ಚೋಟೆ ಮಿಯಾನ್, ಶೂಲ್, ವಿಸ್ಮಯ, ಆತಿಶ್, ಬುಲಾಂಡಿ, ಇನ್ನೂ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

ರವೀನಾ ಟಂಡನ್‌ ಅವರು ಮುಂದಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಯಶ್ ಮತ್ತು ಸಂಜಯ್ ದತ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದು  2022 ರಲ್ಲಿ ಬಿಡುಗಡೆಯಾಗಲಿದೆ.

Latest Videos

click me!