ಮುಕುಲ್ ರೋಹಟಗಿ-ಸತೀಶ್ ಮನೇಶಿಂದೆ: ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಡುತ್ತಿರುವ ಲಾಯರ್ಸ್!

First Published Oct 26, 2021, 6:45 PM IST

ಭಾರತದ ಮಾಜಿ ಅಟಾರ್ನಿ ಜನರಲ್ (AGI) ಮುಕುಲ್ ರೋಹಟಗಿ (Mukul Rohatgi) ಅವರು ಸಿನಿಯರ್‌ ಪಾರ್ಟನರ್‌ಗಳಾದ ರೂಬಿ ಸಿಂಗ್ ಅಹುಜಾ (Ruby Singh Ahuja) ಮತ್ತು ಸಂದೀಪ್ ಕಪೂರ್ (Sandeep Kapur) ಅವರೊಂದಿಗೆ ಮುಂಬೈಗೆ ಆಗಮಿಸಿ, ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರ ಜಾಮೀನು ಅರ್ಜಿಗೆ ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ. ಆರ್ಯನ್‌ ಖಾನ್‌ ಜಾಮೀನಿಗಾಗಿ ಹೋರಾಡುತ್ತಿರುವ 7 ಫೇಮಸ್‌ ಲಾಯರ್‌ಗಳ ಮಾಹಿತಿ ಇಲ್ಲಿದೆ.

ವಿಶೇಷ ನ್ಯಾಯಾಲಯವು ಅಕ್ಟೋಬರ್ 20 ರಂದು ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ ನಂತರ ಬಾಂಬೆ ಹೈಕೋರ್ಟ್ ಇಂದು ಜಾಮೀನು ಅರ್ಜಿಯನ್ನು ಆಲಿಸಿದೆ. ಇದರ ವಿಚಾರಣೆಯೂ ನಾಳೆಗೆ ಮುಂದೂಡಲ್ಪಟ್ಟಿದ್ದು, ಮತ್ತೆ ಜೈಲಲ್ಲಿ ಆರ್ಯನ್ ಕಳೆಯುವುದು ಅನಿವಾರ್ಯವಾಗಿದೆ. 

ಅಕ್ಟೋಬರ್ 3 ರಂದು ಕ್ರೂಸ್ ರೇವ್ ಪಾರ್ಟಿಯಿಂದ ಬಂಧಿಸಲಾದ ಆರ್ಯನ್ ಖಾನ್  ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ಮೂವರು ಆರೋಪಿಗಳಾದ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಜೈಲಿನ ಕಂಬಿ ಎಣಿಸುತ್ತಿದ್ದಾರೆ.
 

ಇಂದು ಮುಂಬಯಿ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಂತೆ,  ಆರ್ಯನ್ ಖಾನ್‌ ಅವರನ್ನು ಜಾಮೀನಿನ ಮೇಲೆ ಹೊರತರಲು ಶಾರುಖ್ ಖಾನ್ ಏಳು ದಿಗ್ಗಜ ವಕೀಲರ ಕಾನೂನು ತಂಡವನ್ನೇ ನೇಮಿಸಿದ್ದಾರೆ. ಇಂದು ಆರ್ಯನ್ ಖಾನ್ ಜಾಮೀನು ಅರ್ಜಿಗೆ ಹಾಜರಾಗಲು ಭಾರತದ ಮಾಜಿ ಅಟಾರ್ನಿ ಜನರಲ್ (ಎಜಿಐ) ಮುಕುಲ್ ರೋಹಟಗಿ, ರೂಬಿ ಸಿಂಗ್ ಅಹುಜಾ ಮತ್ತು ಸಂದೀಪ್ ಕಪೂರ್ ಮುಂಬೈಗೆ ತೆರಳಿದ್ದಾರೆ.
 

Aryan Khan

ಮೇಲೆ ಉಲ್ಲೇಖಿಸಿದ ಲಾಯರ್‌ಗಳನ್ನು ಹೊರತು ಪಡಿಸಿ ಹಿರಿಯ ವಕೀಲರಾದ ಅಮಿತ್ ದೇಸಾಯಿ ಮತ್ತು ಬಾಲಿವುಡ್‌ನ ಫೇವರೇಟ್‌ ಲಾಯರ್‌ ಸತೀಶ್ ಮನೇಶಿಂಡೆ ಕೂಡ ಇಂದು ಆರ್ಯನ್‌ಗೆ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ದೇಸಾಯಿ ಮತ್ತು ಮನೇಶಿಂಡೆ ಅವರು ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್‌ನ ಜಾಮೀನಿಗಾಗಿ ಹೋರಾಡಿದರು, ಆದರೆ ವಿಫಲರಾಗಿದ್ದಾರೆ. 

ಭಾರತದ ಅಟಾರ್ನಿ ಜನರಲ್ (ಎಜಿಐ) ಆಗಿದ್ದ ಮುಕುಲ್ ರೋಹಟಗಿ ಎನ್‌ಸಿಬಿಯನ್ನು 'an Ostrich with head buried in the sand' ಎಂದು ಕರೆದಿದ್ದಾರೆ. 66 ವರ್ಷದ ಮುಕುಲ್ ರೋಹಟಗಿ ಅವರು ಭಾರತದ 14ನೇ ಅಟಾರ್ನಿ ಜನರಲ್ ಆಗಿದ್ದರು ಮತ್ತು ಅವರು ಕೆ ಕೆ ವೇಣುಗೋಪಾಲ್ ನಂತರ ಅಧಿಕಾರ ವಹಿಸಿಕೊಂಡಿದ್ದರು.
 

ಮುಕುಲ್ ರೋಹಟಗಿ ಅವರು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ ಮತ್ತು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ರೋಹಟಗಿ ಅವರು 2014 ರಿಂದ 2017 ರವರೆಗೆ ಮೂರು ವರ್ಷಗಳ ಕಾಲ ಭಾರತದ ಅಟಾರ್ನಿ ಜನರಲ್  ಅಧಿಕಾರ ಹೊಂದಿದ್ದರು.

ಆರ್ಯನ್ ಖಾನ್ ಪರ ವಾದ ಮಂಡಿಸಿದ ಮನೇಶಿಂದೆ ಮತ್ತು ದೇಸಾಯಿ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಎನ್‌ಸಿಬಿ
ಆರ್ಯನ್‌  ಮೇಲೆ ಅರೋಪ ಹೊರಿಸಲು ಅವನ ವಾಟ್ಸಾಪ್ ಚಾಟ್‌ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು.

click me!