ಮದುವೆಯ ಹೊತ್ತಲ್ಲಿ 'ನಾನು ಇಲ್ಲಿ ಬದುಕಿದ್ದೇ ನಿಮ್ಮಿಂದ' ಎಂದ ರಶ್ಮಿಕಾ ಮಂದಣ್ಣ.. ಫ್ಯಾನ್ಸ್ ಕಾಮೆಂಟ್ ಏನೇನು ಬರ್ತಿದೆ?

Published : Dec 31, 2025, 03:18 PM IST

ಚಿತ್ರರಂಗದಲ್ಲಿ ಅನೇಕ ಟೀಕೆಗಳು, ಟ್ರೋಲ್‌ಗಳು ಮತ್ತು ಸವಾಲುಗಳನ್ನು ಎದುರಿಸಿದರೂ ರಶ್ಮಿಕಾ ಎಂದೂ ಧೃತಿಗೆಡಲಿಲ್ಲ. “ನನ್ನ ಪ್ರತಿಯೊಂದು ಏಳುಬೀಳುಗಳಲ್ಲಿ ನೀವು ನನ್ನ ಜೊತೆಗಿದ್ದೀರಿ. ನಿಮ್ಮ ಈ ನಿಸ್ವಾರ್ಥ ಪ್ರೀತಿಗೆ ನಾನು ಯಾವಾಗಲೂ ಚಿರಋಣಿ” ಎಂದಿರುವ ರಶ್ಮಿಕಾ ಎನ್ನೇನು ಹೇಳಿದ್ದಾರೆ?

PREV
110

ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ವರೆಗೆ ತನ್ನ ಮುಗುಳ್ನಗೆಯ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ, ಈಗ ಚಿತ್ರರಂಗದಲ್ಲಿ ಯಶಸ್ವಿ 9 ವರ್ಷಗಳನ್ನು ಪೂರೈಸಿದ್ದಾರೆ. 

210

ಈ ಸುದೀರ್ಘ ಪಯಣದ ಸಂಭ್ರಮವನ್ನು ರಶ್ಮಿಕಾ ಅವರು ಅತ್ಯಂತ ಭಾವುಕವಾಗಿ ಹಂಚಿಕೊಂಡಿದ್ದು, ತಮ್ಮ ಯಶಸ್ಸಿನ ಪೂರ್ಣ ಶ್ರೇಯಸ್ಸನ್ನು ಅಭಿಮಾನಿಗಳಿಗೆ ಸಲ್ಲಿಸಿದ್ದಾರೆ.

310

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮನದಾಳದ ಮಾತು:

ತಮ್ಮ ಒಂಬತ್ತು ವರ್ಷಗಳ ಸಿನಿಪಯಣದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಬರೆದಿರುವ ರಶ್ಮಿಕಾ, "ನಾನು ಇಂದು ಇಲ್ಲಿಯವರೆಗೆ ಬದುಕುಳಿದಿದ್ದೇನೆ ಎಂದರೆ ಅದಕ್ಕೆ ಕಾರಣ ನೀವು (ಅಭಿಮಾನಿಗಳು).

410

ನಿಮ್ಮ ಪ್ರೀತಿ, ಹಾರೈಕೆ ಮತ್ತು ಬೆಂಬಲ ಇಲ್ಲದಿದ್ದರೆ ಈ ಸಾಧನೆ ಸಾಧ್ಯವಿರಲಿಲ್ಲ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಿಂದ ಇಲ್ಲಿಯವರೆಗೆ ನೀವು ನನ್ನನ್ನು ಒಬ್ಬ ಮಗಳಂತೆ, ಸಹೋದರಿಯಂತೆ ಮತ್ತು ಗೆಳತಿಯಂತೆ ಪ್ರೀತಿಸಿದ್ದೀರಿ. ಆ ಪ್ರೀತಿಯೇ ನನ್ನನ್ನು ಪ್ರತಿ ದಿನವೂ ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.

510

'ಕಿರಿಕ್ ಪಾರ್ಟಿ'ಯಿಂದ 'ಅನಿಮಲ್' ವರೆಗೆ:

ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಈ ಬೆಡಗಿ, ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. 'ಅಂಜನಿಪುತ್ರ', 'ಚಮಕ್' ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಅವರು, ನಂತರ ತೆಲುಗಿನ ‘ಗೀತ ಗೋವಿಂದಂ’, ‘ಪುಷ್ಪ’ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಇತ್ತೀಚೆಗೆ ಬಾಲಿವುಡ್‌ನ ‘ಅನಿಮಲ್’ ಚಿತ್ರದ ಯಶಸ್ಸಿನ ಮೂಲಕ ರಶ್ಮಿಕಾ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ.

610

ಚಿತ್ರರಂಗದಲ್ಲಿ ಅನೇಕ ಟೀಕೆಗಳು, ಟ್ರೋಲ್‌ಗಳು ಮತ್ತು ಸವಾಲುಗಳನ್ನು ಎದುರಿಸಿದರೂ ರಶ್ಮಿಕಾ ಎಂದೂ ಧೃತಿಗೆಡಲಿಲ್ಲ. "ನನ್ನ ಪ್ರತಿಯೊಂದು ಏಳುಬೀಳುಗಳಲ್ಲಿ ನೀವು ನನ್ನ ಜೊತೆಗಿದ್ದೀರಿ.

710

ನಿಮ್ಮ ಈ ನಿಸ್ವಾರ್ಥ ಪ್ರೀತಿಗೆ ನಾನು ಯಾವಾಗಲೂ ಚಿರಋಣಿ" ಎಂದು ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಸ್ತುತ ರಶ್ಮಿಕಾ ಅವರು 'ಪುಷ್ಪ-2' ಮತ್ತು 'ಕುಬೇರ' ಅಂತಹ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಈ ಸಾಧನೆಗೆ ಸಿನಿಮಾ ತಾರೆಯರು ಮತ್ತು ಅಭಿಮಾನಿಗಳು ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.

810

ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಜೋಡಿಯ ಮದುವೆ 26 ಫೆಬ್ರವರಿ 2026 ರಂದು ಉದಯಪುರದ ಅರಮನೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಇದೆ.

910

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಕಳೆದ ಕೆಲವು ವರ್ಷಗಳಿಂದ ಲವ್‌ ಮಾಡುತ್ತಿದ್ದರು. ಈ ಜೋಡಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಆಗಿನಿಂದಲೂ ಹಬ್ಬುತ್ತಲೇ ಇತ್ತು. 

1010

ಇತ್ತೀಚೆಗೆ ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೆಬ್ರವರಿಯಲ್ಲಿ ಮದುವ ಎನ್ನಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ಈ ಇಬ್ಬರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories