ಸನ್ನಿ ಲಿಯೋನ್‌ಗೆ ನ್ಯೂ ಇಯರ್ ಶಾಕ್, ಭಾರಿ ವಿರೋದ ಬಳಿಕ ಹೊಸ ವರ್ಷ ಕಾರ್ಯಕ್ರಮ ರದ್ದು

Published : Dec 30, 2025, 06:06 PM IST

ಸನ್ನಿ ಲಿಯೋನ್‌ಗೆ ನ್ಯೂ ಇಯರ್ ಶಾಕ್, ಭಾರಿ ವಿರೋದ ಬಳಿಕ ಹೊಸ ವರ್ಷ ಕಾರ್ಯಕ್ರಮ ರದ್ದು, ಹೊಸ ವರ್ಷ ಸಂಭ್ರಮಾಚರಣೆಗೆ ಸನ್ನಿ ಲಿಯೋನ್‌ ಕೋಟಿ ರೂಪಾಯಿ ಖರ್ಚು ಮಾಡಿ ಆಹ್ವಾನ ನೀಡಲಾಗಿದೆ. ಆದರೆ ಪರಿಸ್ಥಿತಿ ಉಲ್ಟಾ ಆಗಿದೆ. 

PREV
16
ಸನ್ನಿ ಲಿಯೋನ್ ಹೊಸ ವರ್ಷದ ಕಾರ್ಯಕ್ರಮ

ಭಾರತದಲ್ಲೂ ಹೊಸ ವರ್ಷ ಆಚರಣೆ ವಿದೇಶಗಳಿಗಿಂತಲೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸಿನಿಮಾ ನಟ ನಟಿಯರಿಗೆ ಬಿಡುವಿಲ್ಲದ ಕಾರ್ಯಕ್ರಮಗಳು ಆಯೋಜನೆ ಮಾಡಲಾಗುತ್ತದೆ. ಈ ಪೈಕಿ ಸನ್ನಿ ಲಿಯೋನ್‌ ಕಾರ್ಯಕ್ರಮಕ್ಕೆ ದೇಶಾದ್ಯಂತ ಭಾರಿ ಬೇಡಿಕೆ. ಹೀಗೆ ಕೋಟಿ ಕೋಟಿ ರೂಪಾಯಿ ನೀಡಿ ಹೊಸ ವರ್ಷ ಸಂಭ್ರಮಾಚರಣೆಗೆ ಸನ್ನಿ ಲಿಯೋನ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ರದ್ದಾಗಿದೆ.

26
ಮುಥುರಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ

ಉತ್ತರ ಪ್ರದೇಶದ ಮಥುರಾದ ಖಾಸಗಿ ಹೊಟೆಲ್‌ನಲ್ಲಿ ಹೊಸ ವರ್ಷದ ಸಂಭ್ರಮ ಹೆಚ್ಚಿಸಲು ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಸೆಂಬರ್ 31ರ ರಾತ್ರಿ ಈ ಕಾರ್ಯಕ್ರಮ ನಿಗದಿಯಾಗಿತ್ತು.ಹೊಟೆಲ್ ಮ್ಯಾನೇಜ್ಮೆಂಟ್ ಎಲ್ಲಾ ತಯಾರಿ ಮಾಡಿತ್ತು. ಆದರೆ ಕಾರ್ಯಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಾರ್ಯಕ್ರಮ ರದ್ದು ಮಾಡಲಾಗಿದೆ.

36
ಬ್ರಜ್ ಭೂಮಿಯಲ್ಲಿ ಕಾರ್ಯಕ್ರಮಕ್ಕೆ ವಿರೋಧ

ಖಾಸಗಿ ಹೊಟೆಲ್ ಮಥುರಾದ ಬ್ರಜ್ ಭೂಮಿ ಆವರಣದಲ್ಲಿದೆ. ಇದು ಶ್ರೀಕೃಷ್ಣನ ಮಥುರಾ ದೇವಸ್ಥಾನದ ವ್ಯಾಪ್ತಿಗೆ ಒಳಪಡವ ವೃಂದಾವನದ ಪಕ್ಕದಲ್ಲಿದೆ. ಪವಿತ್ರ ಕ್ಷೇತ್ರದಲ್ಲಿ ಮದ್ಯ, ಕುಣಿತ ಸಂಸ್ಕೃತಿಗೆ ಒಪ್ಪಲು ಸಾಧ್ಯವಿಲ್ಲ ಎಂದು ಸ್ವಾಮೀಜಿಗಳು, ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿತ್ತು.

46
ಧಾರ್ಮಿಕ ಪಾವಿತ್ರ್ಯತೆ ಕಾಪಾಡಲು ಹೋರಾಟ

ಕಾರ್ಯಕ್ರಮ ನಿಗದಿ ಮಾಡಿ ಟಿಕೆಟ್ ಬುಕಿಂಗ್ ಆರಂಭಿಸಿದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಮಥುರಾ ಶ್ರೀಕೃಷ್ಣ ಜನ್ಮಭೂಮಿ ಸ್ವಾಮೀಜಿಳು ಕೈಜೋಡಿಸಿದ್ದರು. ಶ್ರೀಕೃಷ್ಣನ ಜನ್ಮ ಭೂಮಿ ಹಾಗೂ ಮುಥುರಾ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ಪಾವಿತ್ಯತೆ ಹಾಳು ಮಾಡಲು ಅವಕಾಶ ನೀಡಲ್ಲ ಎಂದು ಹೋರಾಟ ಆರಂಭಗೊಂಡಿತ್ತು.

56
ತಕ್ಷಣ ಸ್ಪಂದಿಸಿದ ಉತ್ತರ ಪ್ರದೇಶ ಸರ್ಕಾರ

ಮಥುರಾದಲ್ಲಿ ಈ ರೀತಿಯ ಕಾರ್ಯಕ್ರಮ ಹಾಗೂ ಇದಕ್ಕೆ ವ್ಯಕ್ತವಾಗತ್ತಿರುವ ವಿರೋಧಕ್ಕೆ ಉತ್ತರ ಪ್ರದೇಶ ಸರ್ಕಾರ ತಕ್ಷಣ ಪ್ರತಿಕ್ರಿಯಿಸಿದೆ. ಹೀಗಾಗಿ ಕಾರ್ಯಕ್ರಮ ಆಯೋಜಕರು ತಕ್ಷಣವೇ ಹೊಸ ವರ್ಷದ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ತಕ್ಷಣ ಸ್ಪಂದಿಸಿದ ಉತ್ತರ ಪ್ರದೇಶ ಸರ್ಕಾರ

66
ಶ್ರೀಕೃಷ್ಣ ಭಕ್ತರ ಪರವಾಗಿ ಸರ್ಕಾರಕ್ಕೆ ಧನ್ಯವಾದ

ಶ್ರೀಕೃಷ್ಣನ ಊರಿನಲ್ಲಿ ಧಾರ್ಮಿಕ ಹಿನ್ನಲೆ ಹಾಗೂ ಪಾವಿತ್ಯತಗೆ ಧಕ್ಕೆ ತರುವ ಕಾರ್ಯಕ್ರಮ ರದ್ದು ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸರ್ಕಾರಕ್ಕೆ ಧನ್ಯವಾದ. ಭಕ್ತರ ಭಾವನೆ ಹಾಗೂ ನಂಬಿಕೆಗೆ ಘಾಸಿಗೊಳಿಸದಂತೆ ಎಚ್ಚರವಹಿಸುವುದು ಎಲ್ಲರ ಕರ್ತವ್ಯ ಎಂದು ಸ್ವಾಮೀಜಿಗಳು ಹೇಳಿದ್ದರೆ.

ಶ್ರೀಕೃಷ್ಣ ಭಕ್ತರ ಪರವಾಗಿ ಸರ್ಕಾರಕ್ಕೆ ಧನ್ಯವಾದ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories