ಫೆ.26ಕ್ಕೆ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ದೇವರಕೊಂಡ ಮದುವೆ, ಹೈದರಾಬಾದ್‌ನಲ್ಲಿ ರೆಸೆಪ್ಶನ್

Published : Dec 30, 2025, 03:02 PM IST

ಫೆ.26ಕ್ಕೆ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ದೇವರಕೊಂಡ ಮದುವೆ, ಹೈದರಾಬಾದ್‌ನಲ್ಲಿ ರೆಸೆಪ್ಶನ್, ತಯಾರಿಗಳು ಆರಂಭಗೊಂಡಿದೆ. ಬಾಲಿವುಡ್ ಸೇರಿದಂತೆ ಹಲವು ಸಿನಿ ಕ್ಷೇತ್ರದ ದಿಗ್ಗಜರಿಗೆ ಆಹ್ವಾನ ನೀಡಲು ಪ್ಲಾನ್ ಮಾಡಲಾಗಿದೆ. 

PREV
17
ರಶ್ಮಿಕಾ ಮಂದಣ್ಣ ಮದುವೆ

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುವ ಮೂಲಕ ಭಾರಿ ಜನಪ್ರಿಯತೆ ಹಾಗೂ ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕಾ ಮಂದಣ್ಣ ಸದ್ಯ ಶೂಟಿಂಗ್ ಸೇರಿದಂತೆ ಸಿನಿಮಾ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಕುರಿತು ಮತ್ತೊಂದು ಸುದ್ದಿ ಹೊರಬಿದ್ದಿದೆ. ಮೂಲಗಳ ಪ್ರಕಾರ ಈ ಜೋಡಿ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

27
ಉದಯಪುರದಲ್ಲಿ ಮದುವೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಆಯೋಜಿಸಲಾಗಿದೆ ಎಂದು ವರದಿಯಾಗಿದೆ. ಮದುವೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ. ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈಗಾಗಲೇ ತಯಾರಿಗಳು ಆರಂಭಗೊಂಡಿದೆ ಎಂದು ವರದಿಯಾಗಿದೆ.

37
ಹೈದರಾಬಾದ್‌ನಲ್ಲಿ ಆರತಕ್ಷತೆ

ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮುದುವೆಯಾದರೆ, ಇನ್ನು ಮದುವೆ ರಿಸೆಪ್ಶನ್ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದೆ. ಹೈದರಾಬಾದ್ ಕಾರ್ಯಕ್ರಮಕ್ಕೆ ಸಿನಿಮಾ ಕ್ಷೇತ್ರದ ಹಲವರಿಗೆ ಆಹ್ವಾನ ನೀಡಲಾಗುತ್ತಿದೆ. ಬಾಲಿವುಡ್ ಸೇರಿದಂತೆ ಹಲವು ಸಿನಿಮಾ ಕ್ಷೇತ್ರದ ದಿಗ್ಗಜರು, ಆಪ್ತರು ರಿಸೆಪ್ಶನ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

47
ಮದುವೆಯಲ್ಲಿದೆ ಹಲವು ವಿಶೇಷತೆ

ಉದಯಪುರ ಹಾಗೂ ಹೈದರಾಬಾದ್‌ ಎರಡು ಕಡೆ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ಕೊಡಗಿನ ಮೂಲದವರಾಗಿರುವ ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ. ಕೊಡಗಿನ ಮನೆಯಲ್ಲಿ ಕೊಡವ ಸಂಪ್ರದಾಯದ ಪ್ರಕಾರ ಕಾರ್ಯಕ್ರಮಗಳು ನಡೆಯಲಿದೆ.

57
ಸೈಲೆಂಟ್ ಎಂಗೇಜ್‌ಮೆಂಟ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಕ್ಟೋಬರ್ 3ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಇದುವರೆಗೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಮದುವೆ ವಿಚಾರ ಕುರಿತು ಅಧಿಕೃತ ಮಾಹಿಗಳು ಹೊರಬಿದ್ದಿಲ್ಲ.

67
ಸುಳಿವು ನೀಡಿದ್ದ ರಶ್ಮಿಕಾ ಮಂದಣ್ಣ

ಇತ್ತೀಚೆಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಮದುವೆಯನ್ನು ನಾನು ಖಚಿತಪಡಿಸುತ್ತಿಲ್ಲ, ಅಥವಾ ಅಲ್ಲಗೆಳೆಯುತ್ತಿಲ್ಲ. ಆದರೆ ಒಂದು ಮಾತು ಹೇಳುತ್ತೇನೆ, ಯಾವಾಗ ಈ ಕುರಿತು ಹೇಳಬೇಕೋ, ಅಂದು ನಾವು ಹೇಳುತ್ತೇವೆ ಎಂದು ರಶ್ಮಿಕಾ ಮಂದಣ್ಣ ಸೂ್ಚ್ಯವಾಗಿ ಹೇಳಿದ್ದರು.

ಸುಳಿವು ನೀಡಿದ್ದ ರಶ್ಮಿಕಾ ಮಂದಣ್ಣ

77
ರಿಲೇಶನ್‌ಶಿಪ್ ಗೌಪ್ಯವಾಗಿಟ್ಟಿರುವ ಜೋಡಿ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಮ್ಮ ರಿಲೇಶನ್‌ಶಿಪ್ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇವರಿಬ್ಬರ ಹೇಳಿಕೆ, ಸೋಶಿಯಲ್ ಮೀಡಿಯಾ ಪೋಸ್ಟ್ ರಿಲೇಶನ್‌ಶಿಪ್ ಖಚಿತಪಡಿಸಿತ್ತು. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಇಂಡಿಯಾ ಡೇ ಪರೇಡ್‌ನಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿತ್ತು.

ರಿಲೇಶನ್‌ಶಿಪ್ ಗೌಪ್ಯವಾಗಿಟ್ಟಿರುವ ಜೋಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories