ಪಾಪರಾಜಿಗಳಿಗೆ ರಶ್ಮಿಕಾ ನೀಡಿದ ಪೋಸ್‌ ನೋಡಿ ಓವರ್ ಆ್ಯಕ್ಟಿಂಗ್ ಎಂದ ನೆಟ್ಟಿಗರು!

First Published | Mar 25, 2023, 5:30 PM IST

ಪ್ರಸ್ತುತ ರಶ್ಮಿಕಾ ಮಂದಣ್ಣ ಉದ್ಯಮದ ಅತ್ಯಂತ ಬ್ಯುಸಿ ಸ್ಟಾರ್‌ಗಳ ಪಟ್ಟಿಯಲ್ಲಿ ಒಬ್ಬರು. ತೆಲುಗು ಸ್ಟಾರ್ ನಿತಿನ್ ಚಿತ್ರದ ಮುಹೂರ್ತ ಪೂಜೆಯಿಂದ ಭಾಗವಹಿಸಿದ ಬಳಿಕ ತಡರಾತ್ರಿ ನಟಿ ರಶ್ಮಿಕಾ ಮಂದಣ್ಣ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮುಂಬೈಗೆ ಆಗಮಿಸಿದ್ದರು. ಇದೀಗ ನಟಿ ಬೆಳಗ್ಗೆಯೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ನಟಿ ಅಲ್ಲಿದ್ದ ಪಾಪ್‌ಗಳಿಗೆ ಸಾಕಷ್ಟು ಪೋಸ್‌ಗಳನ್ನು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ನಟಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಂಪು ಶರರಾದಲ್ಲಿ ಕಾಣಿಸಿಕೊಂಡರು. ಇವರನ್ನು ನೋಡಿದರೆ ಬಹುಶಃ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾರೆ ಎಂಬುದನ್ನು ಗೆಸ್ ಮಾಡಬಹುದಿತ್ತು. 

ಎಂದಿನಂತೆ ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದಲ್ಲಿರುವ ಪಾಪ್‌ಗಳನ್ನು ನೋಡಿ ದೊಡ್ಡ ನಗು ಬೀರಿದರು ಮತ್ತು ಸಾಕಷ್ಟು ಪೋಸ್‌ ಸಹ ನೀಡಿದರು

Tap to resize

ಆದರೆ ವಿಮಾನ ನಿಲ್ದಾಣದಲ್ಲಿ ಪಾಪ್‌ಗಳ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಕ್ಕಾಗಿ ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಅವರು ನೀಡಿರುವ ಪೋಸ್‌ಗಳನ್ನು ನೊಡಿದ ನಂತರ ಜನ ರಶ್ಮಿಕಾ ಮಂದಣ್ಣಗೆ 'ಓವರ್ ಆಕ್ಟಿಂಗ್ ಶಾಪ್'  ಎಂದು ಟ್ರೋಲ್‌ ಮಾಡುತ್ತಿದ್ದಾರೆ

ರಶ್ಮಿಕಾ  ಅವರು ತಮ್ಮ ಮುದ್ದಾದ ಅಭಿವ್ಯಕ್ತಿಗಳಿಂದ ಅಭಿಮಾನಿಗಳ ಹೃದಯವನ್ನು ಆಳುತ್ತಾರೆ. ಆದರೆ ಸಾಕಷ್ಟು ಜನರಿಗೆ ಇಷ್ಟವಾಗುವುದಿಲ್ಲ ಮತ್ತು  ಇದರಿಂದಾಗಿಯೇ  ಅವರಿಗೆ ‘ಓವರ್ ಆ್ಯಕ್ಟಿಂಗ್ ಶಾಪ್’ ಎಂಬ ಬಿರುದನ್ನು ಹಲವು ಬಾರಿ ನೀಡಿದ್ದಾರೆ.

ಆದರೆ ನಟಿಯ ಅಭಿಮಾನಿಗಳೂ ಕಡಿಮೆ ಇಲ್ಲ. ಫ್ಯಾನ್ಸ್‌ ರಶ್ಮಿಕಾ ಮಂದಣ್ಣ ಅವರನ್ನು 'ನ್ಯಾಷನಲ್ ಕ್ರಶ್' ಎಂದು ಕರೆಯುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಈ ಕೊಡಗಿನ ಬೆಡಗಿ, ಇದೀಗ ಬಾಲಿವುಡ್‌ನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ತೆಲಗಿನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದಾರೆ ಈ ನಟಿಗೆ. 

 ಇವರು  ಶೀಘ್ರದಲ್ಲೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮತ್ತೊಮ್ಮೆ ಶ್ರೀವಲ್ಲಿ ಪಾತ್ರದಲ್ಲಿ ನಟಿಸಲಿದ್ದಾರೆ.

Latest Videos

click me!