ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ತಮ್ಮ ವೈವಾಹಿಕ ಜೀವನದಲ್ಲಿ ಬಹಳ ಸಂತೋಷದಿಂದ ಕಾಣುತ್ತಿದ್ದಾರೆ ಮತ್ತು ಇದೀಗ ಈ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಸ್ವರಾ ಭಾಸ್ಕರ್ ಅವರು ತಮ್ಮ ಸಂಗೀತ ರಾತ್ರಿಯ ಗಾರ್ಡನ್ ಫೋಟೋಶೂಟ್‌ನ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
ವೀರ್ ದೇ ವೆಡ್ಡಿಂಗ್ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಹಾದ್ ಅಹ್ಮದ್ ಅವರೊಂದಿಗೆ ಸಂಗೀತ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಸಂಗೀತ ರಾತ್ರಿಗಾಗಿ ಹಸಿರು ಲೆಹೆಂಗಾವನ್ನು ಆಯ್ಕೆ ಮಾಡಡಿಕೊಂಡಿದ್ದರು ಫಹಾದ್ ಮ್ಯಾಚಿಂಗ್ ಕಲರ್ ಶೇರ್ವಾನಿ ತೊಟ್ಟಿದ್ದರು.
ಹಸಿರು ಬಣ್ಣದಲ್ಲಿ ರಾಣಿಯಂತೆ ಭಾಸವಾಗುತ್ತಿದೆ' ಎಂದು ಸ್ವರಾ ಫೋಟೋಗಳ ಶೀರ್ಷಿಕೆಯಲ್ಲಿ ಬರೆದಿದ್ದಾರೆ, ಇದರಲ್ಲಿ ಅವರು ಹಸಿರು ಹೃದಯದ ಇಮೋಜಿಯನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಈ ವರ್ಷದ ಆರಂಭದಲ್ಲಿ ತಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಿಕೊಂಡರು.
ಇಬ್ಬರೂ ಜನವರಿ 6, 2023 ರಂದು ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದರು. ನಂತರ ಮತ್ತೆ ಸಾಂಪ್ರದಾಯಿಕವಾಗಿ ಮದುವೆಯಾಗಲು ನೀರ್ಧರಿಸಿದ್ದರು.
ಸ್ವರಾ ಮತ್ತು ಫಹಾದ್ ಅವರ ಸಾಂಪ್ರದಾಯಿಕ ವಿವಾಹದ ಆಚರಣೆಗಳು ಮಾರ್ಚ್ 11 ರಂದು ಹಲ್ದಿ ಸಮಾರಂಭದೊಂದಿಗೆ ಪ್ರಾರಂಭವಾಯಿತು.
ಮಾರ್ಚ್ 19 ರಂದು ವರನ ಕುಟುಂಬದವರು ಸ್ವರಾ ಮತ್ತು ಫಹಾದ್ ಅವರ ವಲೀಮಾವನ್ನು ಆಯೋಜಿಸಿದ್ದರು. ಇದರ ನಂತರ ಮೆಹೆಂದಿ, ಸಂಗೀತ ಮತ್ತು ಕವ್ವಾಲಿ ರಾತ್ರಿ ನಡೆಯಿತು.
ಸ್ವರಾ ಭಾಸ್ಕರ್ ಅವರು ತಮ್ಮಮದುವೆಯ ಮೆಹಂದಿ ರಾತ್ರಿಗಾಗಿ ಗ್ರ್ರಾಂಡ್ ಕೇಸರಿ ಡ್ರೆಸ್‌ನಲ್ಲಿ ಹೀಗೆ ಕಾಣಿಸಿಕೊಂಡಿದ್ದರು. ತಮ್ಮ ಮದುವೆಗೆ ಪಾಕಿಸ್ತಾನಿ ಡಿಸೈನರ್ ಲೆಹಂಗಾ ತೊಟ್ಟಿದ್ದ ಸ್ವರಾ ಕಾಲೆಳೆದಿದ್ದರು ನೆಟ್ಟಿಗರು.