'ನಾನು ಸೆಕೆಂಡ್ ಮದರ್' ಎಂದ ರಶ್ಮಿಕಾ ಮಂದಣ್ಣ; ಅವರಿಬ್ಬರ ಲವ್‌-ಕೇರಿಂಗ್‌ ನೋಡಿ ಹಲವರು ಶಾಕ್!

Published : Apr 20, 2026, 04:16 PM IST

ಸೌತ್ ಇಂಡಿಯನ್ ಸಿನಿಮಾಗಳು ಮಾತ್ರವಲ್ಲ, ಬಾಲಿವುಡ್ ಸಿನಿಮಾಗಳ ಮೂಲಕವೂ ಕೂಡ ಸ್ಟಾರ್ ನಟಿಯಾಗಿ ಮಿಂಚಿರುವ ರಶ್ಮಿಕಾ ಮಂದಣ್ಣ ಅವರು, ಇತ್ತೀಚೆಗಷ್ಟೇ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಸೆಕೆಂಡ್ ಮದರ್’ ಅಂದಿದ್ಯಾಕೆ ನೋಡಿ.. 

PREV
18

ರಶ್ಮಿಕಾ ಮಂದಣ್ಣ ಎಂಬ ಹೆಸರು ಸಾಮಾನ್ಯ ಹೆಸರಲ್ಲ. ಇಂದು ಇಡೀ ಭಾರತ ಸೇರಿದಂತೆ ಜಗತ್ತಿನಲ್ಲಿ ನಟಿ ರಶ್ಮಿಕಾ (Rashmika Mandanna) ಹೆಸರು ಕೇಳದವರು ಕಡಿಮೆ ಎನ್ನಬಹುದು. ಕಾರಣ, ಸೌತ್ ಇಂಡಿಯನ್ ಸಿನಿಮಾಗಳು ಮಾತ್ರವಲ್ಲ, ಬಾಲಿವುಡ್ ಸಿನಿಮಾಗಳ ಮೂಲಕವೂ ಕೂಡ ಸ್ಟಾರ್ ನಟಿಯಾಗಿ ಮಿಂಚಿರುವ ರಶ್ಮಿಕಾ ಮಂದಣ್ಣ ಅವರು, ಇತ್ತೀಚೆಗಷ್ಟೇ (28 ಫೆಬ್ರವರಿ 2026) ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

28

ಇಂಥ ನಟಿ ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ಹಲವು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಆ ವಿಡಿಯೋ ಕ್ಲಿಪ್ಪಿಂಗ್‌ಗಳು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೊಂದರಲ್ಲಿ ರಶ್ಮಿಕಾ ತಮ್ಮ ತಂಗಿಯ ಬಗ್ಗೆ ತೋರಿಸಿದ ವಿಡಿಯೋ ನೋಡಿ ಭಾವುಕರಾಗಿ ಮಾತನ್ನಾಡಿದ್ದಾರೆ. ತಂಗಿ ಹುಟ್ಟಿದ ಕ್ಷಣದಲ್ಲಿ ಅವಳನ್ನು ರಶ್ಮಿಕಾ ತಮ್ಮ ಕೈನಲ್ಲಿ ಹಿಡಿದಾಗ ತೆಗೆದ ಫೋಟೋ ಒಂದು, ಇನ್ನೊಂದು ರಶ್ಮಿಕಾ ಅವರು ಸಿನಿಮಾ ಶೂಟಿಂಗ್‌ನಲ್ಲಿ ಇದ್ದಾಗ ಅವಳ ಜೊತೆಗಿರುವ ತಂಗಿ ಶಿಮನ್.

38

ಇಂಟರ್‌ವ್ಯೂ ವೇಳೆ ತೋರಿಸಲಾದ ಈ ಎರಡೂ ಫೋಟೋಗಳನ್ನು ನೋಡಿ, ರಶ್ಮಿಕಾ ಮಂದಣ್ಣ ಅವರು ಭಾವುಕರಾಗಿ ಮಾತನ್ನಾಡಿದ್ದಾರೆ. 'ಹೌದು, ನನ್ನ ತಂಗಿ ಶಿಮನ್ ನನಗಿಂತ 16 ವರ್ಷಕ್ಕೂ ಹೆಚ್ಚು ಚಿಕ್ಕವಳು. ನಾನು ಅವಳಿಗೆ ಎರಡನೇ ತಾಯಿ.

48

ನಾನು ಯಾವತ್ತೂ ಕೂಡ ಶಿಮನ್ ಅವಳನ್ನು ನನ್ನ ತಂಗಿ ಎನ್ನುವುದಕ್ಕಿಂತ ನನ್ನ ಮೊದಲ ಮಗು' ಅಂತಲೇ ಕರೆಯಲು ಇಷ್ಟಪಡುತ್ತೇನೆ' ಎಂದಿದ್ದಾರೆ. ತಂಗಿಯ ಫೋಟೋವನ್ನು ಸಂದರ್ಶನದ ಮಧ್ಯೆ ನೋಡಿದಾಗ. ನಟಿ ರಶ್ಮಿಕಾ ಮುಖದಲ್ಲಿ ಮೂಡಿದ ಮಿಂಚು ಹಾಗೂ ಮಂದಹಾಸ ಸಹೋದರಿಯನ್ನು ರಶ್ಮಿಕಾ ಅದೆಷ್ಟು ಪ್ರೀತಿಸುತ್ತಾರೆ ಎಂಬುದನ್ನು ಅಕ್ಷರಶಃ ಹೇಳುವಂತಿತ್ತು.

58

ಸಾಮಾನ್ಯವಾಗಿ ಅಕ್ಕ-ತಂಗಿಯರ ನಡುವೆ ಕೆಲ ವರ್ಷಗಳ ಅಂತರವಿರುವುದು ಸಹಜ. ಆದರೆ, ರಶ್ಮಿಕಾ ಮಂದಣ್ಣ ಮತ್ತು ಶಿಮನ್‌ ಮಂದಣ್ಣ ಅವರ ವಿಷಯದಲ್ಲಿ ಇದು ಸ್ವಲ್ಪ ವಿಭಿನ್ನ. ರಶ್ಮಿಕಾ ಅವರಿಗೀಗ 29 ವರ್ಷ (ಏಪ್ರಿಲ್‌ 5ಕ್ಕೆ 29 ವರ್ಷ). ಅವರ ತಂಗಿ ಶಿಮನ್‌ಗೀಗ 13-14 ವರ್ಷ.

68

ರಶ್ಮಿಕಾ ಸಿನಿಮಾ ರಂಗಕ್ಕೆ ಕಾಲಿಟ್ಟು ಯಶಸ್ಸಿನ ಶಿಖರ ಏರುತ್ತಿರುವಾಗ ಶಿಮನ್‌ ಇನ್ನೂ ಶಾಲಾ ಬಾಲಕಿ. ವಯಸ್ಸಿನ ಇಷ್ಟು ಅಂತರವೇ ಅವರಿಬ್ಬರ ಸಂಬಂಧವನ್ನ ಮತ್ತಷ್ಟು ಗಟ್ಟಿಯಾಗಿಸಿದ್ದು, ರಶ್ಮಿಕಾ ತಮ್ಮ ತಂಗಿಯನ್ನ ʻತನ್ನ ಮೊದಲ ಮಗುʼ ಅಂತಲೇ ಕರೆಯುತ್ತಾರೆ.

78

ನಟಿ ರಶ್ಮಿಕಾಗೆ ಒಂದುಕಡೆ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುತ್ತಿದ್ದರೆ, ಇನ್ನೊಂದೆಡೆ ಪರ್ಸನಲ್‌ ಲೈಫ್‌ನಲ್ಲಿ ಕೆಲವು ಸುಂದರ ಕ್ಷಣಗಳನ್ನ ಕಳೆದುಕೊಂಡ ನೋವು ಕಾಡುತ್ತಿದೆಯಂತೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅ ಬಗ್ಗೆ ರಶ್ಮಿಕಾ 'ನನ್ನ ತಂಗಿ ನನಗಿಂತಲೂ 16 ವರ್ಷ ಚಿಕ್ಕವಳು. ಅವಳು ಬೆಳೆಯುತ್ತಿರುವುದನ್ನ ನಾನು ಸರಿಯಾಗಿ ನೋಡಿಲ್ಲ.

88

ಕಳೆದ ಎಂಟು ವರ್ಷಗಳಿಂದ ನಾನು ಕೆಲಸದ ನಿಮಿತ್ತ ಹೆಚ್ಚಾಗಿ ಮನೆಯಿಂದ ಹೊರಗಡೆ ಇದ್ದೇನೆ. ಅವಳು ಮಗುವಿನಿಂದ ಹದಿಹರೆಯಕ್ಕೆ ಕಾಲಿಡುತ್ತಿರುವುದನ್ನ ಕಣ್ತುಂಬಿಕೊಳ್ಳಲು ನನಗೆ ಅವಕಾಶ ಸಿಗಲಿಲ್ಲ. ಇಂದು ಅವಳು ಬಹುತೇಕ ನನ್ನಷ್ಟೇ ಎತ್ತರ ಬೆಳೆದಿದ್ದಾಳೆ' ಎಂದು ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ, ಸಿನಿಮಾ ಶೂಟಿಂಗ್‌ ನಡುವಿನ ಬ್ರೇಕ್‌ ಟೈಂನಲ್ಲಿ ತಂಗಿಯ ಜೊತೆ ಕಾಲ ಕಳೆಯುವುದೇ ರಶ್ಮಿಕಾ ಅವರಿಗೆ ದೊಡ್ಡ ಸಂಭ್ರಮ ಎಂಬುದೂ ರಿವೀಲ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories