700 ಕೋಟಿ ರೂ. ಆಸ್ತಿ, 20 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನದ ಒಡತಿಯಾಗಿರೋ ನಟಿ ಯಾರು?

Published : Apr 20, 2026, 02:51 PM IST

Actress Priyanka Chopra: ಬಾಲಿವುಡ್‌ ತೊರೆದು ಹಾಲಿವುಡ್‌ ಸೇರಿದ ನಟಿಯೊಬ್ಬರು ಸದ್ಯ 700 ಕೋಟಿ ಆಸ್ತಿ, 20 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ಒಡತಿಯಾಗಿದ್ದಾರೆ. ಹಾಲಿವುಡ್‌ ಪತಿಯೊಂದಿಗೆ ಐಷಾರಾಮಿ ಜೀವನ ನಡೆಸುತ್ತಿರುವ ಈ ನಟಿ ಬೇರಾರೂ ಅಲ್ಲ, ನಮ್ಮದೇ ಪ್ರಿಯಾಂಕಾ ಚೋಪ್ರಾ. 

PREV
14
700 ಕೋಟಿಗೂ ಅಧಿಕ ಆಸ್ತಿ

ವಿಶ್ವ ಸುಂದರಿ ಪಟ್ಟದೊಂದಿಗೆ ಪಯಣ ಆರಂಭಿಸಿ, ಭಾರತೀಯ ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾಗಿ ಬೆಳೆದ ಪ್ರಿಯಾಂಕಾ ಚೋಪ್ರಾ, ಶಾರುಖ್, ಸಲ್ಮಾನ್, ಹೃತಿಕ್, ಅಮೀರ್, ಅಕ್ಷಯ್ ಅವರಂತಹ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಬಾಲಿವುಡ್‌ ರಾಜಕೀಯದಿಂದ ಬೇಸತ್ತು ಹಾಲಿವುಡ್‌ ಸೇರಿದ ಈ ನಟಿ, ಅಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಸದ್ಯ 700 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಇವರು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

24
ಲವ್‌ ಮ್ಯಾರೇಜ್‌ ಆದರು

ಬ್ಲಫ್‌ಮಾಸ್ಟರ್, ಡಾನ್, ಫ್ಯಾಷನ್, ಕಮೀನೆ, 7 ಖೂನ್ ಮಾಫ್, ಬರ್ಫಿ!, ಮೇರಿ ಕೋಮ್‌ನಂತಹ ಚಿತ್ರಗಳಲ್ಲಿನ ನಟನೆಗೆ ಪ್ರಿಯಾಂಕಾ ಮೆಚ್ಚುಗೆ ಗಳಿಸಿದರು. ನಟನೆಯ ಜೊತೆಗೆ ಅವರ ಫ್ಯಾಷನ್ ಸೆನ್ಸ್ ಕೂಡ ಅವರಿಗೆ ವಿಶೇಷ ಮನ್ನಣೆ ತಂದುಕೊಟ್ಟಿತು. ಬಾಲಿವುಡ್‌ನ ರಾಜಕೀಯದಿಂದ ಬೇಸತ್ತು, ತನಗಿಂತ 10 ವರ್ಷ ಚಿಕ್ಕವರಾದ ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ಪ್ರೀತಿಸಿ ಮದುವೆಯಾದರು.

34
50 ಕ್ಯಾರೆಟ್ ವಜ್ರದ ಕಿವಿಯೋಲೆಗಳ ಮೌಲ್ಯ 21.75 ಕೋಟಿ ರೂ

ಪ್ರಿಯಾಂಕಾ ಚೋಪ್ರಾ ಅವರ ಐಷಾರಾಮಿ ಜೀವನಶೈಲಿ ಬೆರಗು ಮೂಡಿಸುತ್ತದೆ. 2016ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅವರು ಧರಿಸಿದ್ದ 50 ಕ್ಯಾರೆಟ್ ವಜ್ರದ ಕಿವಿಯೋಲೆಗಳ ಮೌಲ್ಯ ಸುಮಾರು 21.75 ಕೋಟಿ ರೂ. ಆಗಿತ್ತು. ಅದೇ ರೀತಿ, ಒಮ್ಮೆ ಅವರು ಧರಿಸಿದ್ದ ರಾಲ್ಫ್ & ರುಸ್ಸೋ ಗೌನ್‌ನ ಮೌಲ್ಯ 72 ಕೋಟಿ ರೂ. ಹಾಗೂ ಮತ್ತೊಂದು ಸಂದರ್ಭದಲ್ಲಿ ಧರಿಸಿದ್ದ ಉಡುಪಿನ ಬೆಲೆ ಸುಮಾರು 45 ಲಕ್ಷ ರೂ. ಎಂದು ವರದಿಯಾಗಿದೆ.

44
ಒಂದು ಸಿನಿಮಾಕ್ಕೆ 30 ಕೋಟಿ ರೂ ಸಂಭಾವನೆ

ಬಾಲಿವುಡ್ ಸಿನಿಮಾಗಳನ್ನು ಕಡಿಮೆ ಮಾಡಿದ ಪ್ರಿಯಾಂಕಾ, ಹಾಲಿವುಡ್ ಪ್ರಾಜೆಕ್ಟ್‌ಗಳತ್ತ ಗಮನ ಹರಿಸಿದರು. ವೆಬ್ ಸರಣಿಗಳು ಮತ್ತು ಅಂತರರಾಷ್ಟ್ರೀಯ ಸಿನಿಮಾಗಳಲ್ಲಿ ನಟಿಸಿ ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿದರು. ಸದ್ಯ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ 'ವಾರಣಾಸಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಈ ಚಿತ್ರಕ್ಕೆ ಸುಮಾರು 30 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಪ್ಯಾನ್-ವರ್ಲ್ಡ್ ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories