Rashmika Mandanna Birthday : ಕೊಡಗಿನ ಸುಂದರಿ ಈ ಚಿತ್ರಗಳಲ್ಲಿ ಬ್ಯುಸಿಯೋ ಬ್ಯುಸಿ!

First Published | Apr 5, 2023, 3:02 PM IST

 ರಶ್ಮಿಕಾ ಮಂದಣ್ಣ  (Rashmika Mandanna) ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ರಶ್ಮಿಕಾ ಅವರು ಇಂದು ತಮ್ಮ  27ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಇತ್ತೀಚಿನ ಮತ್ತು ಮುಂಬರುವ ಚಿತ್ರಗಳ ವಿವರ ಇಲ್ಲಿದೆ.

2016ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ತಮ್ಮ ವೃತ್ತಿಜೀವನ (Career) ಪ್ರಾರಂಭಿಸಿದರು.ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಗಿತ್ತು ಮತ್ತು ನಂತರ ನಟಿ ಹಿಂದಿರುಗಿ ನೋಡಲಿಲ್ಲ.

ಅಂಜನಿಪುತ್ರ (2017), ಚಮಕ್ (2017), ಗೀತಾ ಗೋವಿಂದಂ (2018), ಡಿಯರ್ ಕಾಮ್ರೇಡ್ (2019), ಮತ್ತು ಸರಿಲೇರು ನೀಕೆವ್ವರು (2020) ಸೇರಿ ಹಲವಾರು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

Tap to resize

ನಂತರ, ಅಮಿತಾಭ್ ಬಚ್ಚನ್ ಅಭಿನಯದ ಗುಡ್‌ಬೈ ಚಿತ್ರದ ಮೂಲಕ ನಟಿ ಬಾಲಿವುಡ್‌ಗೆ ಕಾಲಿಟ್ಟರು. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಅಭಿನಯ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ.

5 ಏಪ್ರಿಲ್ 1996 ರಂದು ಜನಿಸಿದ ರಶ್ಮಿಕಾ 19ನೇ ವಯಸ್ಸಿನಲ್ಲಿ ದಕ್ಷಿಣ ಚಲನಚಿತ್ರೋದ್ಯಮ ಪ್ರವೇಶಿಸಿದರು  ಅವರ ಇತ್ತೀಚಿನ ಮತ್ತು ಮುಂಬರುವ ಚಿತ್ರಗಳ ವಿವರ ಇಲ್ಲಿದೆ.

ವರಿಸು (2023) ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ವಿಜಯ್ ದಳಪತಿ ಅವರ ಜೊತೆಗೆ ರಶ್ಮಿಕಾ  ಪಾತ್ರವನ್ನ ನಿರ್ವಹಿಸಿದ್ದಾರೆ.  ಈ ಸಿನಿಮಾ ಮೂಲಕ ಮೊದಲ ಬಾರಿಗೆ ರಶ್ಮಿಕಾ ಅವರು ವಿಜಯ್‌ ಅವರ ಜೊತೆ ಸ್ಕ್ಕೀನ್‌ ಹಂಚಿಕೊಳ್ಳುತ್ತಿದ್ದಾರೆ.

ಮಿಷನ್ ಮಂಜು (2023) ಶಂತನು ಬಾಗ್ಚಿ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ  ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ನಸ್ರೀನ್ ಹುಸೇನ್ ಎಂಬ ಅಂಧ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೀತಾ ರಾಮಂ (2022) ಹನು ರಾಘವಪುಡಿ ನಿರ್ದೇಶನದ ಈ ಕಥೆಯು ಅನಾಥ ಸೈನಿಕನ ಸುತ್ತ ಸುತ್ತುತ್ತದೆ, ಲೆಫ್ಟಿನೆಂಟ್ ರಾಮ್, ಸೀತಾ ಎಂಬ ಹುಡುಗಿಯಿಂದ ಪತ್ರ ಪಡೆದ ನಂತರ ಅವನ ಜೀವನ ಬದಲಾಗುತ್ತದೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮುಖ್ಯ ಭೂಮಿಕೆಯಲ್ಲಿದ್ದರು.

ಬ್ಲಾಕ್ ಬಸ್ಟರ್ ಚಿತ್ರ ಪುಷ್ಪ ಚಿತ್ರದ ಎರಡನೇ ಭಾಗವನ್ನು ಸುಕುಮಾರ್ ನಿರ್ದೇಶಿಸಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮತ್ತು ಪುಷ್ಪಾ ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ.  ವರದಿಗಳ ಪ್ರಕಾರ, ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ನೋಟವು ಟೀಸರ್ ರೂಪದಲ್ಲಿರಲಿದೆ.

ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರ ಅನಿಮಲ್, ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥಾವಸ್ತುವು ಎಲ್ಲಾ ಪಾತ್ರಗಳ ನಡುವಿನ ಅಸ್ತವ್ಯಸ್ತವಾಗಿರುವ ಸಂಬಂಧದ ಸುತ್ತ ಸುತ್ತುತ್ತದೆ   

ಅತ್ಯುತ್ತಮ ನಟಿಗಾಗಿ SIIMA ಪ್ರಶಸ್ತಿ ಮತ್ತು ಅತ್ಯುತ್ತಮ ನಟಿಗಾಗಿ ಜೀ ಸಿನಿ ಪ್ರಶಸ್ತಿ (ತೆಲುಗು) ಸೇರಿ ರಶ್ಮಿಕಾ ಅವರು ತಮ್ಮ ಉತ್ತಮ  ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 
 

Latest Videos

click me!