ತಾಯಿ ಬರೆದ ಆತ್ಮಕಥನದಿಂದ ಬಹಿರಂಗವಾಯ್ತು ಈ ಸ್ಟಾರ್ ನಟಿಯ ಆತ್ಮಹತ್ಯೆ ಪ್ರಯತ್ನದ ಕಥೆ!

Published : Aug 02, 2023, 03:11 PM ISTUpdated : Aug 05, 2023, 12:56 PM IST

ಈ ಕಪ್ಪು ಬಿಳುಪಿನ ಫೋಟೋದಲ್ಲಿರುವ ಹುಡುಗಿ ಬಾಲಿವುಡ್‌ನ ದಂತಕಥೆಗಳ ನಾಯಕಿ ಮತ್ತು ಅವಳು ತನ್ನ ಪ್ರಭಾವಶಾಲಿ ನಟನೆಗೆ ಹೆಸರುವಾಸಿಯಾಗಿದ್ದಾಳೆ. ಈ ನಟಿ ಪ್ರಸಿದ್ಧ ಕುಟುಂಬದಲ್ಲಿ ಜನಿಸಿದರು. ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದು ಅವರಿಗೆ ಸುಲಭವಾಗಿತ್ತು. ಆದರೆ ಆಕೆಗೆ ಅವಕಾಶ ಸಿಕ್ಕಾಗ, ತನ್ನನ್ನು ತಾನು ಸಾಬೀತುಪಡಿಸಲು ಯಾವುದೇ ಅಡೆತಡೆಯನ್ನು ದಾಟಿ ಛಲ ಬಿಡದೆ ತನ್ನ ವೃತ್ತಿಜೀವನದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಳು. ಅಷ್ಟೇ ಅಲ್ಲ, ಭಾರತ ಸರ್ಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣವನ್ನೂ ಪಡೆದಿದ್ದಾರೆ.

PREV
16
ತಾಯಿ ಬರೆದ ಆತ್ಮಕಥನದಿಂದ ಬಹಿರಂಗವಾಯ್ತು ಈ ಸ್ಟಾರ್ ನಟಿಯ ಆತ್ಮಹತ್ಯೆ ಪ್ರಯತ್ನದ ಕಥೆ!

ಭಾರತ ಸರ್ಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣವನ್ನೂ ಪಡೆದ ಆ ಶ್ರೇಷ್ಠ ನಟಿ  ಬೇರೆ ಯಾರೂ ಅಲ್ಲ, ಶಬಾನಿ ಅಜ್ಮಿ. ಶಬಾನಾ ಅಜ್ಮಿ ಕೈಫಿ ಅಜ್ಮಿ ಮತ್ತು ಶೌಕತ್ ಅಜ್ಮಿ ಅವರ ಪುತ್ರಿ. ಶಬಾನಾ ಅಜ್ಮಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಆಕೆಯ ತಾಯಿ ಶೌಕತ್ ಅಜ್ಮಿ ತಮ್ಮ ಆತ್ಮಚರಿತ್ರೆ ‘ಕೈಫ್ ಮತ್ತು ಐ: ಎ ಮೆಮೊಯಿರ್’ನಲ್ಲಿ ಬರೆದಿದ್ದಾರೆ.

26

ಆತ್ಮಚರಿತ್ರೆ  ಪುಸ್ತಕದ ಪ್ರಕಾರ, ಶಬಾನಾ ಅಜ್ಮಿ ಅವರಿಗೆ ಅವರ ತಾಯಿ ತನಗಿಂತ ಹೆಚ್ಚು ತನ್ನ ಸಹೋದರನನ್ನು ಹೆಚ್ಚು ಪ್ರೀತಿಸುತ್ತಾಳೆ ಎಂದು ಭಾವಿಸಿದ್ದರಂತೆ ಮತ್ತು ಅದಕ್ಕಾಗಿಯೇ ಶಬಾನಾ ಅಜ್ಮಿ ಕೆಲವೊಮ್ಮೆ ತುಂಬಾ ದುಃಖಿತಳಾಗಿರುತ್ತಿದ್ದರಂತೆ. 

36

ತಾಯಿ ಪ್ರೀತಿ ಕಡಿಮೆ ಎಂದು ಮನದಲ್ಲಿಟ್ಟುಕೊಂಡಿದ್ದ ಶಬಾನಾ ಅಜ್ಮಿ ಒಮ್ಮೆ ಲ್ಯಾಬ್‌ನಲ್ಲಿ ತಾಮ್ರದ ಸಲ್ಫೇಟ್ ಅನ್ನು ಸೇವಿಸಿದ್ದಳು ಮತ್ತು ಅವಳ ಜೀವವನ್ನು ಅವಳ ಸ್ನೇಹಿತೆ ಉಳಿಸಿದಳು. ಶಬಾನಾ ಅಜ್ಮಿ ಒಮ್ಮೆ ರೈಲಿನ ಮುಂದೆ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದಳು ಆದರೆ ಶಾಲೆಯ ವಾಚ್‌ಮನ್ ಅವಳನ್ನು ರಕ್ಷಿಸಿದನು ಎಂದು  ಅವರ ತಾಯಿ ಬರೆದುಕೊಂಡಿದ್ದಾರೆ. 

46

ಶಬಾನಾ ಅಜ್ಮಿ ತನ್ನ ಕೆಲವು ಸಂದರ್ಶನಗಳಲ್ಲಿ ತನ್ನ ಪ್ರೀತಿಯ ಜೀವನ ಮತ್ತು ಮೋಹದ ಬಗ್ಗೆ ಮಾತನಾಡಿದ್ದಾರೆ. ಶಬಾನಾ ಅಜ್ಮಿ ಪ್ರಕಾರ, ಅವರು ನಿರ್ದೇಶಕ ಶೇಖರ್ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದರು.

56

ಶೇಖರ್ ಕಪೂರ್ ಹೊರತುಪಡಿಸಿ, ಶಬಾನಾ ಅಜ್ಮಿ ಯಾವಾಗಲೂ ಅಪ್ರತಿಮ ನಟ ಶಶಿ ಕಪೂರ್ ಮೇಲೆ ಕ್ರಶ್ ಹೊಂದಿದ್ದರು. ಇದರ ನಂತರ, ಶಬಾನಾ ಅಜ್ಮಿ ಜಾವೇದ್ ಅಖ್ತರ್ ಅವರನ್ನು ಪ್ರೀತಿಸುತ್ತಿದ್ದರು. ಜಾವೇದ್ ಅಖ್ತರ್ ಉತ್ತಮ ಬರಹಗಾರ ,ಕವಿ ಅವರು ಬರೆದ   ಕವಿತೆಯನ್ನು ತನ್ನ ತಂದೆ ಕೈಫಿ ಅಜ್ಮಿಗೆ ತಂದು ತೋರಿಸುತ್ತಿದ್ದರು.

66

ಜಾವೇದ್ ಅಖ್ತರ್ ವಿವಾಹವಾಗಿದ್ದಾರೆಂದು ಯಾವಾಗ ಶಬಾನಾ ಅಜ್ಮಿ ತಿಳಿಯಿತೋ, ಅಂದು ಅವರು ಪ್ರಸಿದ್ಧ ಗೀತರಚನೆಕಾರರೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದರು ಆದರೆ ಅದು ಯಶಸ್ವಿಯಾಗಲಿಲ್ಲ. ತನ್ನ ಮೊದಲ ಪತ್ನಿ ಹನಿ ಇರಾನಿಯಿಂದ ಜಾವೇದ್ ಅಖ್ತರ್  ವಿಚ್ಛೇದನದ ಪಡೆದ ನಂತರ ಶಬಾನಾ ಅಜ್ಮಿ ಅವರನ್ನು ವಿವಾಹವಾದರು. ಹೈದರಾಬಾದ್‌ ನಲ್ಲಿ ಹುಟ್ಟಿದ ನಟಿಗೆ ಈಗ 72 ವರ್ಷ ವಯಸ್ಸು 

Read more Photos on
click me!

Recommended Stories