ಸಿನಿಮಾ ನಟಿಯ ಖಾಸಗಿ ವಿಡಿಯೋ ಲೀಕ್‌, ಖ್ಯಾತ ನಿರ್ಮಾಪಕನ ವಿರುದ್ಧ ದೂರು

Published : Aug 01, 2023, 06:40 PM IST

ತನ್ನ ಜೊತೆ ಸೆಕ್ಸ್‌ ನಡೆಸಿದ್ದಲ್ಲದೆ, ಅದರ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿರುವ ಬಗ್ಗೆ ನಟಿ ಶೀತಲ್‌ ಪಾತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ನಿರ್ಮಾಪಕ ದಯಾನಿಶಿ ಧಹಿಮಾ ವಿರುದ್ಧ ಅವರು ದೂರು ನೀಡಿದ್ದಾರೆ.

PREV
113
ಸಿನಿಮಾ ನಟಿಯ ಖಾಸಗಿ ವಿಡಿಯೋ ಲೀಕ್‌, ಖ್ಯಾತ ನಿರ್ಮಾಪಕನ ವಿರುದ್ಧ ದೂರು

ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದ ನಟಿ ಹಾಗೂ ನಿರ್ಮಾಪಕನ ವಿಚಾರ ಈಗ ಜಗಳದ ಕಾರಣದಿಂದಾಗಿ ಸುದ್ದಿಗೆ ಬಂದಿದೆ. ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕಾಗಿ ನಟಿಯ ಜೊತೆ ಸೆಕ್ಸ್‌ ನಡೆಸಿದ ವಿಡಿಯೋ ಹಾಗೂ ಫೋಟೋಗಳನ್ನು ನಿರ್ಮಾಪಕ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ.

213

ಒಡಿಯಾ ನಟಿ ಶೀತಲ್‌ ಪಾತ್ರಾ ಅವರ ಎಂಎಂಎಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದರ ಬೆನ್ನಲ್ಲಿಯೇ ನಿರ್ಮಾಪಕ ದಯಾನಿಧಿ ಧಹಿಮಾ ವಿರುದ್ಧ ಪೊಲೀಸರಿಗೆ ಅಧಿಕೃತ ದೂರು ದಾಖಲಿಸಿ ಫೇಸ್‌ಬುಕ್‌ನಲ್ಲಿಯೂ ಬರೆದುಕೊಂಡಿದ್ದಾರೆ. 


 

313

ತನ್ನ ನಟನೆ ಹಾಗೂ ಸೌಂದರ್ಯದಿಂದಲೇ ಗಮನಸೆಳೆದಿರುವ ಒಡಿಯಾ ನಟಿ ಶೀತಲ್‌ ಪಾತ್ರಾ ತನ್ನೊಂದಿಗೆ ಲಿವ್‌ ಇನ್‌ ರಿಲೇಶನ್‌ಷಿಪ್‌ ಹೊಂದಿದ್ದ ನಿರ್ಮಾಪಕ ದಯಾನಿಧಿ ಧಹಿಮಾ ವಿರುದ್ಧ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ ಆರೋಪ ಹೊರಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

413

ಒಡಿಶಾ ರಾಜಧಾನಿ ಭುವೇಶ್ವರದ ಲಕ್ಷ್ಮೀ ಸಾಗರ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತಾಗಿ ದೂರು ದಾಖಲಾಗಿದೆ. ನಾನು ಕಳೆದ ಕೆಲವು ವರ್ಷಗಳಿಂದ ದಯಾನಿಧಿ ಜೊತೆ ಅನ್ಯೂನ್ಯವಾಗಿದ್ದೆ. ಅದನ್ನೇ ಅವರು ಮೋಸಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

513

ದಯಾನಿಧಿ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನ ಅಡಿಯಲ್ಲಿ ಶೀತಲ್‌ ಪಾತ್ರಾ ಕೆಲವು ಚಿತ್ರಗಳನ್ನು ಮಾಡಿದ್ದಾರೆ. ಈ ವೇಳೆಯೇ ಅವರು ಆಪ್ತರಾಗಿದ್ದು, ಖಾಸಗಿಯಾಗಿ ಕೆಲವು ಕ್ಷಣಗಳನ್ನೂ ಕಳೆದಿದ್ದರು.

613

ಮೊದ ಮೊದಲು ನನ್ನ ಜೊತೆ ಆಪ್ತವಾಗಿದ್ದ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದ. ನಾನು ಯಾವುದಕ್ಕೂ ಆಕ್ಷೇಪ ಮಾಡಿರಲಿಲ್ಲ. ಆದರೆ, ಅದನ್ನು ಈ ರೀತಿ ಬಳಸಿಕೊಳ್ಳುತ್ತಾನೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಶೀತಲ್‌ ಪಾತ್ರಾ ದೂರಿದ್ದಾರೆ.

713

ನಾನು ಆತನನ್ನು ಸಂಪೂರ್ಣವಾಗಿ ನಂಬಿದ್ದೆ. ಆತನ ಬ್ಯಾನರ್‌ನಡಿ ನಟಿಸಿದ ಚಿತ್ರದ ಸಂಭಾವನೆ ಕೇಳಿದ್ದೆ. ಅದನ್ನು ಕೊಟ್ಟಿರಲಿಲ್ಲ. ಆ ಬಳಿಕ ನಮ್ಮಿಬ್ಬರ ಬಾಂಧವ್ಯ ಹಳಸಿತ್ತು. ಆ ಬಳಿಕ ಆತನ ವರ್ತನೆ ಸಂಪೂರ್ಣವಾಗಿ ಬದಲಾಯಿತು. ಈಗ ನನ್ನ ಖಾಸಗಿ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ ಎಂದು ದೂರಿದ್ದಾರೆ.

813

ಈ ನಡುವೆ ಶೀತಲ್‌ ಪಾತ್ರಾ ಇತರ ಬ್ಯಾನರ್‌ಗಳಡಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದು ದಯಾನಿಧಿಯನ್ನು ಕೆರಳಿಸಿದೆ. ಆಕೆಯ ಆಫರ್‌ಗಳನ್ನು ದಯಾನಿಧಿಯೇ ತಿರಸ್ಕರಿಸುತ್ತಿದ್ದ. ಇದಕ್ಕೂ ಶೀತಲ್ ಬಗ್ಗದ ಕಾರಣಕ್ಕೆ ಆಕೆಯ ಖಾಸಗಿ ವಿಡಿಯೋ ಲೀಕ್‌ ಮಾಡಿ ಮಾನಹರಣದ ಕೆಲಸ ಮಾಡಿದ್ದಾನೆ.

913

ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದಾಗ ದಯಾನಿಧಿ ಆಕೆಯನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾನೆ. ಇದು ಆಕೆಯ ವೃತ್ತಿಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಶೀತಲ್‌ ಪಾತ್ರಾ ಪರ ವಕೀಲ ಸೌಮ್ಯಜಿತ್‌ ಬಿಸ್ವಾಲ್‌ ಹೇಳಿದ್ದಾರೆ.

1013

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲೀ ಶೀತಲ್‌ ಪಾತ್ರಾ ಬರೆದುಕೊಂಡಿದ್ದು, ನಿರ್ಮಾಪಕನ ಹೆಸರನ್ನೂ ಉಲ್ಲೇಖ ಮಾಡಿದ್ದಾಳೆ. ಈಕೆಯ ನೆರವಿಗೆ ಚಿತ್ರರಂಗದ ಕಲಾವಿದರು ಧಾವಿಸಿದ್ದಾರೆ.

1113

ಎರಡೂ ಜೋಡಿ ಕಳೆದ ಕೆಲವು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದು ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸವನ್ನೂ ಮಾಡಿದ್ದಾರೆ. ಬೇರೆ ನಿರ್ಮಾಪಕ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇ ವಿವಾದದ ಮೂಲ ಎನ್ನಲಾಗಿದೆ.

1213

ಈವರೆಗೂ 11 ಚಿತ್ರಗಳಲ್ಲಿ ಶೀತಲ್‌ ಪಾತ್ರಾ ನಟಿಸಿದ್ದು, 'ಭಾಲಾ ಪಾಯೆ ಟಾಟೆ 100 ರು 100' ಹಾಗೂ 'ಪ್ರಿಮಾರೆ ಪ್ರಿಮಾರೆ' ಚಿತ್ರದ ಮೂಲಕ ಪ್ರಸಿದ್ಧಿಯನ್ನೂ ಪಡೆದಿದ್ದಾರೆ.

1313

ಭರತನಾಟ್ಯ ಕಲಾವಿದೆಯೂ ಆಗಿರುವ ಶೀತಲ್‌ ಪಾತ್ರಾ, ಸೋಶಿಯಲ್‌ ಮೀಡಿಯಾದಲ್ಲೂ ಕೂಡ ದೊಡ್ಡ ಮಟ್ಟದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. 

Read more Photos on
click me!

Recommended Stories