ಮಗ ಅಥವಾ ಮಗಳು ಯಾವುದು ಬೇಕೆಂದು ಬಹಿರಂಗ ಪಡಿಸಿದ Ranveer Singh; ನಟ ತಂದೆಯಾಗಲು ರೆಡಿ ?

First Published | Apr 20, 2022, 6:33 PM IST

ರಣವೀರ್ ಸಿಂಗ್ (Ranveer Singh)ತೆರೆಯ ಮೇಲೆ ತಂದೆಯಾಗಲಿದ್ದಾರೆ. 'ಜಯೇಶ್‌ಭಾಯ್ ಜೋರ್ದಾರ್' ' (Jayeshbhai Jordaar) ಸಿನಿಮಾದಲ್ಲಿ, ಅವರು ತಮ್ಮ ಹೆಂಡತಿ ಮತ್ತು  ಹುಟ್ಟಲಿರುವ ಮಗಳನ್ನು ಉಳಿಸಲು ತಂದೆಯೊಂದಿಗೆ ಹೋರಾಡುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಅವರ ಅಭಿಮಾನಿಗಳು ನಿಜ ಜೀವನದಲ್ಲಿ ರಣವೀರ್ ಸಿಂಗ್ ತಂದೆಯಾಗುವುದನ್ನು ಮತ್ತು ದೀಪಿಕಾ ಪಡುಕೋಣೆ ತಾಯಿಯಾಗುವುದನ್ನು ನೋಡಲು ಬಯಸುತ್ತಾರೆ. ಜಯೇಶ್‌ಭಾಯ್ ಜೋರ್ದಾರ್   ಟ್ರೇಲರ್ ಬಿಡುಗಡೆ ಸಮಯದಲ್ಲಿ ತಮಗೆ ಯಾವ ಮಗು ಬೇಕು ಎಂದು ರಣವೀರ್‌ ಬಹಿರಂಗಪಡಿಸಿದ್ದಾರೆ.

Image: Ranveer SinghInstagram

ಬಾಲಿವುಡ್‌ನ ಈ ಪವರ್‌ ಕಪಲ್‌ ಜೋಡಿಗಳು ಯಾವಾಗ ಪೋಷಕರಾಗುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ರಣವೀರ್‌ಗೆ ಮಗ ಬೇಕೋ ಅಥವಾ ಮಗಳು ಬೇಕೋ ಎಂಬುದಕ್ಕೆ ಸ್ವತಃ ರಣವೀರ್‌  ಉತ್ತರ ನೀಡಿದ್ದಾರೆ.

ವಾಸ್ತವವಾಗಿ, ರಣವೀರ್ ಸಿಂಗ್ ಅಭಿನಯದ 'ಜಯೇಶ್‌ಭಾಯ್ ಜೋರ್ದಾರ್' ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ತನ್ನ ಫೇಮಸ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು. 

Tap to resize

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ತನಗೆ ಮಗ ಬೇಕೋ ಅಥವಾ ಮಗಳು ಬೇಕೋ ಎಂಬ ಪ್ರಶ್ನೆಗೆ, ಮೊದಲು ತನಗೆ ಏನು ಬೇಕು ಎಂದು ಬಹಿರಂಗಪಡಿಸಿದರು.

ನಿಜ ಜೀವನದಲ್ಲಿ ನಿಮಗೆ ಮಗ ಅಥವಾ ಮಗಳು ಬೇಕೇ ಎಂದು ಮಾಧ್ಯಮಗಳು ಅವರನ್ನು ಕೇಳಿದಾಗ, ಅದು ದೇವರನ್ನು ಅವಲಂಬಿಸಿರುತ್ತದೆ ಎಂದು ನಟ ಹೇಳಿದರು. ಮೇಲಿನವರು ಏನು ಕೊಟ್ಟರೂ ಸಂತೋಷದಿಂದ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ.

ಜಯೇಶ್‌ಭಾಯ್ ಜೋರ್ದಾರ್'  ಚಿತ್ರ  ಗುಜರಾತ್ ಹಿನ್ನಲೆಯಲ್ಲಿ ನಿರ್ಮಾಣವಾಗಿದೆ. ಒಂದು ಹಳ್ಳಿಯಲ್ಲಿ ಒಬ್ಬ ಸರಪಂಚ್ , ಅವನ ಮಗ ಜಯೇಶ್ (ರಣವೀರ್ ಸಿಂಗ್). ಬೊಮನ್ ಇರಾನಿ ಅವರು ಸರಪಂಚ್ ಪಾತ್ರದಲ್ಲಿದ್ದಾರೆ. ಜಯೇಶ್ ಪತ್ನಿ ತಾಯಿಯಾಗಲಿದ್ದಾರೆ. ಮನೆಯಲ್ಲಿ ಕುಲದೀಪಕ್ ಅಂದರೆ ಗಂಡು ಬೇಕು ಬಯಸುತ್ತಾರೆ ಆದರೆ ಅವರ ಪತ್ನಿ (ಶಾಲಿನಿ ಪಾಂಡೆ) ಮಗಳನ್ನು ಹೊಂದಲಿದ್ದಾರೆ. 

ಬೊಮನ್ ಇರಾನಿ ಮತ್ತು ಅವರ ಪತ್ನಿ ತಮ್ಮ ಸೊಸೆಯ ಅಬಾರ್ಷನ್‌ ಮಾಡಲು ಬಯಸುತ್ತಾರೆ. ಆದರೆ ರಣವೀರ್ ಸಿಂಗ್‌ಗೆ ಇದು ಇಷ್ಟವಿಲ್ಲ. ಜಯೇಶ್ ತನ್ನ ತಂದೆಯ ವಿರುದ್ಧ ಬಂಡಾಯವೇಳುತ್ತಾನೆ. ಟ್ರೈಲರ್ ತುಂಬಾ ತಮಾಷೆಯಾಗಿದೆ. ಮೇ 13 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

Latest Videos

click me!