ತನ್ನ ಮಗ ಆಜಾದ್‌ನೊಂದಿಗೆ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಮಾವಿನ ಹಣ್ಣನ್ನು ಸವಿಯುತ್ತಿರುವುದನ್ನು ಕಾಣಬಹುದು. ನಟ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ,
ಆಮೀರ್ ಖಾನ್, ಅವರ ಕಾಲದ ಭಾರತದ ಅತ್ಯಂತ ಟ್ಯಾಲೆಂಟಡ್ ನಟರಲ್ಲಿ ಒಬ್ಬರು. ಸದ್ಯಕ್ಕೆ ಅವರು ಮತ್ತು ಅವರ ಮಗ ಆಜಾದ್ ಮಾವಿನ ಹಣ್ಣನ್ನು ತಿನ್ನುತ್ತಿರುವ ಕ್ಯೂಟ್ ಫೋಟೋಗಳ ಮೂಲಕ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ
ತಂದೆ-ಮಗನ ಜೋಡಿಯು ಮಾವಿನ ಹಣ್ಣನ್ನು ಸವಿಯುತ್ತಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಪ್ಲೇಟ್‌ಫುಲ್ ಮಾಮಿನ ಹಣ್ಣನ್ನು ಆಮೀರ್ ಮಗ ಆಜಾದ್ ಜೊತೆ ಎರಡೂ ಕೈಗಳಿಂದ ತಿನ್ನುವುದು ಕಾಣಬಹುದು
ಆಮೀರ್ ಖಾನ್ ಅಭಿಮಾನಿಗಳು ನಟ ಮತ್ತು ಅವರ ಮಗನ ಈ ಕ್ಲೋಸ್ ಕ್ಷಣದ ಫೋಟೋಗಳಿಗೆ ಫುಲ್ ಫಿದಾ ಆಗಿದ್ದಾರೆ. ಫ್ಯಾನ್ಸ್ ತಂದೆ-ಮಗ ಜೋಡಿಗೆ ಪ್ರೀತಿಯ ಮಳೆ ಸುರಿಸಿದ್ದಾರೆ.
ಆಮೀರ್ ಖಾನ್ ಪ್ರೊಡಕ್ಷನ್ಸ್ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಮಗ ಆಜಾದ್ ಜೊತೆ ಮಾಮಿನ ಹಣ್ಣುಗಳನ್ನು ಆನಂದಿಸುತ್ತಿರುವ ಫೋಟೋಗಳನ್ನು ಸೂಪರ್‌ಸ್ಟಾರ್ ಆಮೀರ್ ಹಂಚಿಕೊಂಡಿದ್ದಾರೆ.
ಆಮೀರ್ ಇತ್ತೀಚೆಗೆ ಇನ್‌ಫ್ಲುಯೆನ್ಸರ್ ರೂಹೀ ದೋಸಾನಿ ಮತ್ತು ಅವರ ಕುಟುಂಬದೊಂದಿಗೆ ಬೈಸಾಖಿಯನ್ನು ಆಚರಿಸಿದರು. ಧೋಲ್ ಜಾಗೀರೋ ಡಾಗೆ ಡ್ಯಾನ್ಸ್ ಮಾಡುವಾಗ ಅಮೀರ್ ಲಸ್ಸಿ ಮತ್ತು ಹಲ್ವಾ ತಿನ್ನುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿದೆ.
ಆಮೀರ್ ಈ ಹಿಂದೆ ನ್ಯೂಸ್ 18 ನೀಡಿದ ಇಂಡರ್‌ವ್ಯೂವ್‌ನಲ್ಲಿ ತನ್ನ ಕೆಲಸಗಳ ನಡುವೆ ತನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿಲ್ಲ ಎಂದು ವಿಷಾದಿಸಿದ್ದಾರೆ.
ಕೆಲಸವನಿರ್ವಹಿಸಲು ಫೋನ್ ನಿರಂತರವಾಗಿ ತೊಂದರೆ ನೀಡುತ್ತಿದೆಎಂದು ಭಾವಿಸಿ ಫೋನ್ ಅನ್ನು ತ್ಯಜಿಸುವ ನಿರ್ಧಾರ ಮಾಡಿದ್ದಾರೆ.
ಆಮೀರ್ ಕರೀನಾ ಕಪೂರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಟಾಮ್ ಹ್ಯಾಂಕ್ಸ್ ನಟಿಸಿದ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿದೆ. ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಲಿದ್ದು, ಆಗಸ್ಟ್ 12, 2022 ರಂದು ಬಿಡುಗಡೆಯಾಗಲಿದೆ.