ಶಂಶೇರಾ ನೋಡಲು ತಂದೆ ಇರಬೇಕಿತ್ತು; Ranbir Kapoor ಭಾವುಕ

Published : Jun 24, 2022, 05:49 PM IST

ರಣಬೀರ್ ಕಪೂರ್ ಮತ್ತು ಸಂಜಯ್ ದತ್ ಅವರ ಬಹುನಿರೀಕ್ಷಿತ ಚಲನಚಿತ್ರ ಶಂಶೇರಾ  (Shamshera) ಅವರ ಟ್ರೈಲರ್ ಇಂದು ಅಂದರೆ ಜೂನ್ 24 ಶುಕ್ರವಾರ ಬಿಡುಗಡೆಯಾಗಲಿದೆ ಮತ್ತು ಈ ಚಿತ್ರವನ್ನು ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಸಮಯದಲ್ಲಿ ಭಾವುಕರಾಗಿದ್ದ  ರಣಬೀರ್ ಕಪೂರ್ (Ranbir Kapoor) ತಂದೆ  ರಿಷಿ ಕಪೂರ್ (Rishi Kapoor) ಅವರು ಶಂಶೇರಾ  ಚಲನಚಿತ್ರ  ನೋಡಲು ಜೀವಂತವಾಗಿರಬೇಕಿತ್ತು ಎಂದು ಬಯಸಿದ್ದಾರೆ.  

PREV
15
ಶಂಶೇರಾ ನೋಡಲು ತಂದೆ  ಇರಬೇಕಿತ್ತು;  Ranbir Kapoor ಭಾವುಕ

ಯಶ್‌ ರಾಜ್ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ತಯಾರಾದ ಶಂಶೇರಾ ಟೀಸರ್‌ ಎರಡು ದಿನಗಳ ಹಿಂದೆ ಬಿಡುಗಡೆಯಾಯಿತು. ಚಿತ್ರದಲ್ಲಿ ರಣಬೀರ್ ಅತ್ಯಂತ ವಿಭಿನ್ನ ಲುಕ್‌ನಲ್ಲಿ ಕಾಣಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಬಹಳ ಶ್ರಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

25

ಇತ್ತೀಚೆಗೆ, ರಣಬೀರ್‌ ಸಂದರ್ಶನವೊಂದರಲ್ಲಿ ತಮ್ಮ ತಂದೆ ಜೀವಂತವಾಗಿದ್ದರೆ, ಅವರ ಶಂಶೇರಾ ಲುಕ್‌ ನೋಡಿ ತುಂಬಾ ಸಂತೋಷವಾಗುತ್ತಿದ್ದರು ಎಂದು ಹೇಳಿದರು. 'ಪಪ್ಪಾ ಯಾವಾಗಲೂ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಬಲ್ಲ ಪಾತ್ರವನ್ನುನಿರ್ವಹಿಸಬೇಕೆಂದು ಬಯಸಿದ್ದರು' ಎಂದು ರಣಬೀರ್‌ ಹೇಳಿದ್ದಾರೆ. 

35

ತಂದೆ ರಿಷಿ ಕಪೂರ್ ಯಾವಾಗಲೂ ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಟೀಕಿಸುತ್ತಿದ್ದರು ಎಂದು ರಣಬೀರ್ ಕಪೂರ್ ಹೇಳಿದರು.  ಅಂದಹಾಗೆ, ರಣಬೀರ್ ಅವರ ತಂದೆಯೊಂದಿಗಿನ ಸಂಬಂಧವು ತುಂಬಾ ಉತ್ತಮವಾಗಿರಲಿಲ್ಲ. ದೀರ್ಘಕಾಲದವರೆಗೆ ಅವರು ತಮ್ಮ ಹೆತ್ತವರ ಮನೆಯಿಂದ ಹೊರಬಂದು ಬೇರೆಯಾಗಿದ್ದರು ಎಂದು ಹೇಳಲಾಗುತ್ತದೆ. 

45

ಆದರೆ ರಣಬೀರ್ ಅವರ ಚಿತ್ರ ಸಂಜು ಸಿನಿಮಾ ಬಂದಾಗ, ರಿಷಿ ಕಪೂರ್‌ ತನ್ನ ಮಗ ರಣಬೀರ್ ಅವರ ಕೆಲಸವನ್ನು ನೋಡಿ ತುಂಬಾ ಮೆಚ್ಚಿಕೊಂಡು  ಶ್ಲಾಘಿಸಿದರು. 2020 ರಲ್ಲಿ, ಕ್ಯಾನ್ಸರ್ ಕಾರಣದಿಂದಾಗಿ, ರಿಷಿ ಜಗತ್ತನ್ನು ತೊರೆದರು. 

55
Image: Still from the trailer

ನಿರ್ದೇಶಕ ಕರಣ್ ಮಲ್ಹೋತ್ರಾ ಅವರ ಚಲನಚಿತ್ರ ಶಂಶೇರಾದಲ್ಲಿ ರಣಬೀರ್ ಕಪೂರ್ ಡಕಾಯಿತನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ವಾಣಿ ಕಪೂರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಜಯ್ ಅವರು ಇಂಗ್ಲಿಷ್ ಜನರಲ್ ಪೊಲೀಸ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ವಾಣಿ ಕಪೂರ್‌ ಪಾತ್ರ ನರ್ತಕಿದಾಗಿದೆ.

Read more Photos on
click me!

Recommended Stories