ರಣಬೀರ್ ಇನ್ನು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡೋಲ್ವಂತೆ! ಅದ್ಯಾಕೋ?

Published : Dec 09, 2022, 05:36 PM ISTUpdated : Dec 09, 2022, 05:44 PM IST

ರಣಬೀರ್ ಕಪೂರ್ (Ranbir Kapoor) ಅವರು ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಮಾಧ್ಯಮ ಸಂವಾದದ ಸಮಯದಲ್ಲಿ ತಮ್ಮ ಮುಂಬರುವ ಯೋಜನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಮತ್ತೆ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

PREV
14
 ರಣಬೀರ್ ಇನ್ನು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡೋಲ್ವಂತೆ! ಅದ್ಯಾಕೋ?

ರಣಬೀರ್‌ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ತಮ್ಮ ಮುಂಬರುವ ಚಿತ್ರ ಅನಿಮಲ್ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಲವ್ ರಂಜನ್ ಅವರ ಕಾಮಿಡಿ ಚಿತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದು, ಈ ಶೈಲಿಯಲ್ಲಿ ಇದು ಅವರ ಕೊನೆಯ ಸಿನಿಮಾ ಎಂದು ಹೇಳಿದ್ದಾರೆ.
 

24

ರಣಬೀರ್ ಕಪೂರ್ ಲವ್ ರಂಜನ್ ಅವರ ಹೆಸರಿಡದ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಶ್ರದ್ಧಾ ಕಪೂರ್ ಸಹ-ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮುಂದಿನ ವರ್ಷ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ ಆದರೆ ಈ ಚಿತ್ರವು ರೋಮ್-ಕಾಮ್ ಪ್ರಕಾರದಲ್ಲಿ ಅವರ ಕೊನೆಯ ಚಿತ್ರವಾಗಬಹುದು ಎಂದು ರಣಬೀರ್ ಹೇಳಿದ್ದಾರೆ.

34

40 ವರ್ಷದ ರಣಬೀರ್ ಅವರು ತಮ್ಮ ವೃತ್ತಿಜೀವನದಲ್ಲಿ (Career) ಹಲವಾರು ರೊಮ್ಯಾಂಟಿಕ್ ಹಾಸ್ಯ ಚಿತ್ರಗಳಲ್ಲಿ (Romantic Comedies) ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಕೊನೆಯದು 2017 ರಲ್ಲಿ ಜಗ್ಗಾ ಜಾಸೂಸ್.

44

ಸಂದೀಪ್ ವಂಗಾ ರೆಡ್ಡಿ ಆನಿಮಲ್‌ ಚಿತ್ರವನ್ನು 'ಕ್ರೈಮ್ ಥ್ರಿಲ್ಲರ್' (Crime Thriller) ಮತ್ತು 'ಗ್ಯಾಂಗ್‌ಸ್ಟರ್ ಚಿತ್ರ'ಎಂದು ರಣಬೀರ್ ಬಣ್ಣಿಸಿದ್ದಾರೆ. ಚಿತ್ರದ ಬಗ್ಗೆ ಮತ್ತಷ್ಟು ಮಾತನಾಡುತ್ತಾ, ಅವರು ಸಾಕಷ್ಟು ಆಘಾತಕಾರಿ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಬಹಿರಂಗಪಡಿಸಿದರು.  ಮತ್ತು ನಾನು ಹಿಂದೆಂದೂ ಮಾಡದಂತಹದ್ದು. ಇದು  ನನಗೆ ಬಹಳ ರೋಮಾಂಚಕಾರಿ ಯೋಜನೆ ಎಂದೂ ರಣಬೀರ್‌ ಹೇಳಿದ್ದಾರೆ.

Read more Photos on
click me!

Recommended Stories