'ಚೆನ್ನೈ ಎಕ್ಸ್‌ಪ್ರೆಸ್' ನಂತರ ರೋಹಿತ್ ಶೆಟ್ಟಿ ಮತ್ತು ದೀಪಿಕಾ ಪಡುಕೋಣೆ ಮತ್ತೆ ಯಾವಾಗ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ತಿಳಿಯಲು ಎಲ್ಲರಿಗೂ ಕುತೂಹಲವಿತ್ತು. ರೋಹಿತ್ ಶೆಟ್ಟಿ ದೀಪಿಕಾ ಅವರಿಗೆ ಲೇಡಿ ಸಿಗಂ ಪಾತ್ರ ನೀಡುವ ಮೂಳಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ವಾಸ್ತವವಾಗಿ, 'ಸರ್ಕಸ್' ಹಾಡಿನ ಸಮಾರಂಭದಲ್ಲಿ, ರೋಹಿತ್ ಶೆಟ್ಟಿ ದೀಪಿಕಾ ಪಡುಕೋಣೆ ಬಗ್ಗೆ ಈ ವಿಷಯವನ್ನು ಬಹಿರಂಗಪಡಿಸಿದರು. ದೀಪಿಕಾ ತನ್ನ ಕಾಪ್ ಯೂನಿವರ್ಸ್‌ಗೆ ಸೇರಿಕೊಂಡಿದ್ದಾರೆ ಎಂದು ರಿಹಿತ್ ಶೆಟ್ಟಿ ಅವರು ಹೇಳಿ
ಲೇಡಿ ಸಿಂಗಮ್ ಯಾವಾಗ ಬರುತ್ತಾರೆ? ಎಂದು ಪ್ರತಿ ಬಾರಿಯೂ ಅದೇ ಪ್ರಶ್ನೆ ಕೇಳಲಾಗುತ್ತದೆ ಹಾಗಾಗಿ 'ಸಿಂಗಮ್ ಅಗೇನ್' ಚಿತ್ರದಲ್ಲಿ ಲೇಡಿ ಸಿಂಗಂ ಬರಲಿದ್ದಾರೆ. ಅವಳು ಕಾಪ್ ಯೂನಿವರ್ಸ್‌ನಿಂದ ನನ್ನ ಲೇಡಿ ಪೋಲೀಸ್. ಮುಂದೆ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಘೋಷಣೆಯ ಬಗ್ಗೆ ತುಂಬಾ ಭಾವುಕರಾದ ದೀಪಿಕಾ ನಂತರ ರೋಹಿತ್ ಶೆಟ್ಟಿಯನ್ನು ಅಪ್ಪಿಕೊಂಡರು. ಹಾಡಿನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಣವೀರ್ ಕೂಡ ನೋಡಿ ನಗುತ್ತಾ, 'ಇಲ್ಲಿಯೇ ಇದನ್ನು ಮೊದಲ ಸಲ ಕೇಳುತ್ತಿರುವುದು' ಎಂದರು.
ಸರ್ಕಸ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ರಣವೀರ್ ಸಿಂಗ್ ಜೊತೆ 'ಕರೆಂಟ್ ಲಗಾ' ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸರ್ಕಸ್' ಚಿತ್ರದಲ್ಲಿ ರಣವೀರ್ ಸಿಂಗ್ ದ್ವಿಪಾತ್ರದಲ್ಲಿದ್ದು, ಚಿತ್ರದ ಟ್ರೇಲರ್ ಜನರಿಗೆ ತುಂಬಾ ಇಷ್ಟವಾಗಿದೆ. ಚಿತ್ರ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ.
2011 ರಲ್ಲಿ, ರೋಹಿತ್ ಶೆಟ್ಟಿ 'ಸಿಂಗಮ್' ಮೂಲಕ ಕಾಪ್ ಯೂನಿವರ್ಸ್ ಅನ್ನು ಪ್ರಾರಂಭಿಸಿದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ಬಾಜಿರಾವ್ ಸಿಂಘಂ ಆಗಿ ನಟಿಸಿ ಸೂಪರ್ ಡೂಪರ್ ಹಿಟ್ ಆದರು. 2014ರಲ್ಲಿ ‘ಸಿಂಗಂ ರಿಟರ್ನ್ಸ್’ಸಿನಿಮಾ ಬಂದಿತ್ತು. ಇದರಲ್ಲಿ ಕರೀನಾ ಕಪೂರ್ ಅಜಯ್ ದೇವಗನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
Image: Deepika PadukoneInstagram
ಮೊದಲ ಬಾರಿಗೆ, ಈ ಚಿತ್ರದ ಮುಂದಿನ ಭಾಗದಲ್ಲಿ ನಟಿಯನ್ನು ಪೊಲೀಸ್ ಪಾತ್ರದಲ್ಲಿ ತೋರಿಸಲಾಗುತ್ತದೆ. ಪೊಲೀಸ್ ಯೂನಿಫಾರ್ಮ್‌ನಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿರುವುದು ಸಹ ಮೊದಲ ಬಾರಿಯೇ.