ಶತ್ರುಘ್ನಾರಿಗಿತ್ತು ರೀನಾ ರಾಯ್ ಜೊತೆ ಅಫೇರ್, ಆದರೂ ಸುಮ್ಮನಿದ್ದರು ಮಡದಿ!
First Published | Dec 9, 2022, 4:53 PM ISTಬಾಲಿವುಡ್ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ (Shatrughan Sinha ) 77ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 9, 1945 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಶತ್ರುಘ್ನ ಸಿನ್ಹಾ ಅವರ ಗಡಸು ಮುಖದಿಂದಾಗಿ ಅವರು ಹೀರೋ ಆಗಲು ಸಾಧ್ಯವೇ ಎಂದು ಅವರೇ ಅನುಮಾನಿಸಿದ್ದರು. ಆದರೆ, ಅವರ ನಟನೆಯ ಆಧಾರದ ಮೇಲೆ ಕೆಲಸ ಪಡೆದರು. ಉದ್ಯಮದಲ್ಲಿ ಹೆಸರು ಮಾಡಿದರು.. ಶತ್ರುಘ್ನ ಸಿನ್ಹಾ ಅವರ ಪ್ರೇಮ ಜೀವನ ತುಂಬಾ ಆಸಕ್ತಿದಾಯಕವಾಗಿದೆ. ನಟಿ ರೀನಾ ರಾಯ್ (Reena Roy)ಅವರೊಂದಿಗೆ ಸುಮಾರು 7 ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಈ ಸಮಯದಲ್ಲಿ, ಅವರು ಪೂನಂ ಎಂಬ ಮಹಿಳೆಯೊಂದಿಗೆ ಸಪ್ತಪದಿ ತುಳಿದರು. ಆದರೂ ಶತ್ರುಘ್ನ ಅವರು ರೀನಾ ಅವರನ್ನು ಬಿಡಲಿಲ್ಲ.