Ranbir Kapoor ಯಿಂದ Tiger Shroff ವರೆಗೆ; ಈ ಯಂಗ್ ನಟರ ಕ್ರಶ್ Madhuri Dixit

First Published | May 15, 2022, 6:56 PM IST

ಬಾಲಿವುಡ್‌ನ ಧಕ್‌ ಧಕ್‌ ಗರ್ಲ್‌  ಮಾಧುರಿ ದೀಕ್ಷಿತ್ (Madhuri Dixit)  ಅವರಿಗೆ 55 ವರ್ಷದ ಸಂಭ್ರಮ  15 ಮೇ 1967 ರಂದು ಮುಂಬೈನಲ್ಲಿ ಜನಿಸಿದರು. ಮಾಧುರಿ ಇಂಡಸ್ಟ್ರಿಯಲ್ಲಿ ತನ್ನ ಛಾಪು ಮೂಡಿಸಲು 4 ವರ್ಷ ಬೇಕಾಯಿತು    ತೇಜಾಬ್ ಚಿತ್ರದೊಂದಿಗೆ ಮಿಂಚಿದ ನಂತರ ಅವರು ಇಂದಿನ ವರೆಗೂ ಎಲ್ಲರ ಹೃದಯ ಆಳುತ್ತಿದ್ದಾರೆ. ಅಷ್ಟೇ ಅಲ್ಲ  ಶಾಹಿದ್ ಕಪೂರ್‌ನಿಂದ (Shahid Kapoor) ರಣಬೀರ್ ಕಪೂರ್‌ವರೆಗಿನ (Ranbir Kapoor) ಹಲವು ಬಾಲಿವುಡ್‌ನ ಹ್ಯಾಂಡ್ಸಮ್‌ ನಟರು ಮಾಧುರಿ ಅವರ ಮೇಲೆ  ಕ್ರಶ್‌ ಹೊಂದಿದ್ದರು.

ಫ್ಯಾನ್ಸ್‌ ಮಾತ್ರವಲ್ಲದೆ ಮಾಧುರಿ ದೀಕ್ಷಿತ್ ಬಿ-ಟೌನ್‌ನ  ಯಂಗ್‌  ಹಂಕ್‌ಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಶಾಹಿದ್ ಕಪೂರ್‌ನಿಂದ ರಣಬೀರ್ ಕಪೂರ್‌ವರೆಗೆ ಬಾಲಿವುಡ್‌ನ ಕೆಲವು ಬೆಸ್ಟ್‌ ಆಂಡ್‌ ಹಾಟ್‌ ನಟರು ಅವರ
ಅಭಿಮಾನಿಗಳ ಪಟ್ಟಿಯಲ್ಲಿದ್ದಾರೆ.
 

2013 ರ ಚಲನಚಿತ್ರ ಯೇ ಜವಾನಿ ಹೈ ದೀವಾನಿಯಲ್ಲಿ, ರಣಬೀರ್ ಕಪೂರ್ ಘಾಗ್ರಾ ಸಾಂಗ್‌ನಲ್ಲಿ ಮಾಧುರಿ ಜೊತೆ ಸ್ಟೆಪ್‌ ಹಾಕಿದರು. ಆದರೆ  ಮಾಧುರಿ ದೀಕ್ಷಿತ್ 1999 ರಲ್ಲಿ ಮದುವೆಯಾದಾಗ, ರಣಬೀರ್‌ ಅವರು ದುಃಖಿತರಾಗಿದ್ದರು ಎಂದು ಹೇಳಿದರು. ಆ ಸಮಯದಲ್ಲಿ ಅವರು 17 ವರ್ಷ ವಯಸ್ಸಿನವರಾಗಿದ್ದರು. "ನಾನು ಪ್ರೀತಿಸಿದ ಮೊದಲ ಮಹಿಳೆ ಮಾಧುರಿ ದೀಕ್ಷಿತ್, ಮದುವೆಯಾದಾಗ ನನಗೆ ಹಾರ್ಟ್‌ ಬ್ರೇಕ್‌ ನೀಡಿದ ಮೊದಲ ಮಹಿಳೆ ಮಾಧುರಿ ದೀಕ್ಷಿತ್. ಅವರೊಂದಿಗೆ ನೃತ್ಯ ಮಾಡಲು ಮತ್ತು ಅವರನ್ನು ನೋಡಲು ನನಗೆ ಅವಕಾಶ ಸಿಕ್ಕಿತು. ಸೆಟ್‌ಗಳು ಅದ್ಭುತವಾಗಿದ್ದವು' ಎಂದಿದ್ದಾರೆ ನಟ.

Tap to resize

ಟೈಗರ್ ಶ್ರಾಫ್ ಅವರಿಗೆ ಅವರ  ತಂದೆ ಜಾಕಿ ಶ್ರಾಫ್ ನಟಿಸಿದ ಪ್ರಮುಖ ನಟಿಯರ ಮೇಲೆ ಏನಾದರೂ ಕ್ರಷ್ ಇದೆಯೇ ಎಂದು ಕೇಳಲಾಯಿತು.  ಮಾಧುರಿ ದೀಕ್ಷಿತ್,  ಮಾಧುರಿ ನನ್ನ ಅಚ್ಚುಮೆಚ್ಚಿನವರು. ಬಾಲ್ಯದಲ್ಲಿ ನಾನು ಅವರನ್ನು ಹೆಚ್ಚಾಗಿ ಭೇಟಿಯಾಗಲಿಲ್ಲ. ನಾನು ಇತ್ತೀಚೆಗೆ ಅವರನ್ನು ಪ್ರಶಸ್ತಿ ಸಮಾರಂಭದಲ್ಲಿ ಭೇಟಿ ಮಾಡಿದ್ದೇನೆ ಎಂದು ಅವರು ಹೇಳಿದರು

ಇನ್ನೊಬ್ಬ ಹ್ಯಾಂಡ್‌ಸಮ್‌ ನಟ ವಿಕ್ಕಿ ಕೌಶಲ್‌ ಸಹ  ಮಾಧುರಿ ದೀಕ್ಷಿತ್‌ಗೆ ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಮ್ ಪ್ರಶ್ನೋತ್ತರ ಅವಧಿಯಲ್ಲಿ ಅವರ ಮೊದಲ ಕ್ರಶ್‌ ಬಗ್ಗೆ ಪ್ರಶ್ನಿಸಿದಾಗ, ವಿಕ್ಕಿ ಕೌಶಲ್ ಅವರು ಮಾಧುರಿ ದೀಕ್ಷಿತ್ ಎಂದು ಹೇಳಿದರು.

Image: Official Instagram accounts of the actor(s)

ಸಿದ್ಧಾರ್ಥ್ ಮಲ್ಹೋತ್ರಾ ಜೂಹಿ ಚಾವ್ಲಾ ಮತ್ತು ಮಾಧುರಿ ದೀಕ್ಷಿತ್ ಕಾಫಿ ವಿಥ್ ಕರಣ್‌ಗೆ ಅತಿಥಿಯಾಗಿದ್ದರು.  ಸಿದ್ಧಾರ್ಥ್ ಮಲ್ಹೋತ್ರಾ ಪ್ರಕಾರ, 'ಅವರ(ನೃತ್ಯ) ಚಲನೆಯು ನೆನಪಿಗೆ ಬರುತ್ತದೆ ಏಕೆಂದರೆ ಅವರು ಅದ್ಭುತ
ನೃತ್ಯಗಾರ್ತಿಯಾಗಿದ್ದಾರೆ ಎಂದು ಹೇಳಿದ್ದರು ಮತ್ತು  ಮಾಧುರಿ ದೀಕ್ಷಿತ್‌ ಅವರ ಬಗ್ಗೆ ಅವರ ಕ್ರಶ್‌ ಅನ್ನು  ಖಚಿತಪಡಿಸಿದ್ದಾರೆ.

ಶಾಹಿದ್ ಕಪೂರ್ ತಮ್ಮ ನಟನೆ ಮತ್ತು ನೃತ್ಯದ ಸಾಮರ್ಥ್ಯಕ್ಕಾಗಿ ಫೇಮಸ್‌ ಆಗಿದ್ದಾರೆ. ಮಾಧುರಿ ದೀಕ್ಷಿತ್ ಅವರ ಬಾಲ್ಯದ ಕ್ರಶ್‌ ಎಂದು ಬಹಿರಂಗಪಡಿಸಿದರು. ತನ್ನ ವಯಸ್ಸಿನ ಪ್ರತಿಯೊಬ್ಬ ಯುವಕನು ಧಕ್ ಧಕ್ ಹುಡುಗಿಗೆ
ಫೀದಾ ಆಗಿದ್ದರು ಮತ್ತು ಅವರು ಇದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದ್ದಾರೆ. ಶಾಹಿದ್ ಕಪೂರ್  ಮಾಧುರಿ ಅವರು ಆದರ್ಶ ಬಾಲಿವುಡ್ ನಾಯಕಿ ಎಂದು ಹೇಳಿದ್ದಾರೆ ಮತ್ತು ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಆನಂದಿಸಿದೆ ಎಂದು ಹೇಳಿದ್ದಾರೆ.

Latest Videos

click me!