ಬೆನ್ನು ತೋರಿಸಿ ಕುಳಿತ ಕನ್ನಡದ ಈ ಸ್ಟಾರ್ ನಟಿ ಯಾರೆಂದು ಊಹಿಸಬಲ್ಲಿರಾ

Published : May 15, 2022, 05:15 PM IST

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಧಿಕಾ ನಾರಾಯಣ್ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ರಂಗಿತರಂಗ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ‌ನಲ್ಲಿ ಸದ್ದು ಮಾಡಿದವ್ರು ನಟಿ ರಾಧಿಕಾ. ಮೊದಲ ಸಿನಿಮಾವೇ ರಾಧಿಕಾ ಅವರಿಗೆ ಸ್ಟಾರ್ ಗಿರಿ ತಂದುಕೊಟ್ಟಿತ್ತು.  

PREV
17
ಬೆನ್ನು ತೋರಿಸಿ ಕುಳಿತ ಕನ್ನಡದ ಈ ಸ್ಟಾರ್ ನಟಿ ಯಾರೆಂದು ಊಹಿಸಬಲ್ಲಿರಾ
radhika

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಧಿಕಾ ನಾರಾಯಣ್ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ರಂಗಿತರಂಗ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ‌ನಲ್ಲಿ ಸದ್ದು ಮಾಡಿದವ್ರು ನಟಿ ರಾಧಿಕಾ. ಮೊದಲ ಸಿನಿಮಾವೇ ರಾಧಿಕಾ ಅವರಿಗೆ ಸ್ಟಾರ್ ಗಿರಿ ತಂದುಕೊಟ್ಟಿತ್ತು.

 

27
radhika

ರಂಗಿತರಂಗ ಬಳಿಕ ಬಂದ ರಾಧಿಕಾ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ವಿಮರ್ಶಾತ್ಮಕವಾಗಿ ಸಿನಿಮಾಗಳು ಮೆಚ್ಚುಗೆ ಪಡೆದವು. ಆದರೆ ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡುವಲ್ಲಿ ವಿಫಲವಾದವು.

 

37
radhika

ಯು ಟರ್ನ್ ಸಿನಿಮಾದಲ್ಲಿ ರಾಧಿಕಾ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎರಡನೇ ಬಾರಿ ಅಭಿಮಾನಿಗಳ ಮುಂದೆ ಬಂದರು. ಆನಂತರ ಕಾಫಿ ತೋಟ, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

 

47
radhika

ನಟಿ ರಾಧಿಕಾ ಕೊನೆಯದಾಗಿ ಶಿವಾಜಿ ಸೂರತ್ಕಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

 

57
radhika

ಸದ್ಯ ರಾಧಿಕಾ ಚೇಸ್ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಜೊತೆಗೆ ಶಿವಾಜಿ ಸೂರತ್ಕಲ್-2 ಸಿನಿಮಾದಲ್ಲೂ ಕಣಿಸಿಕೊಳ್ಳುತ್ತಿದ್ದಾರೆ.

 

67
radhika

ನಟಿ ರಾಧಿಕಾ ನಾರಾಯಣ್ ಅದ್ಭುತ ಡಾನ್ಸರ್. ಮಾಡೆಲ್ ಮತ್ತು ಡಾನ್ಸರ್ ಆಗಿದ್ದ ರಾಧಿಕಾ ರಂಗಿತರಂಗ ಮೂಲಕ ದೊಡ್ಡ ಪರದೆಮೇಲೆ ಮಿಂಚಿದರು. ಅಂದಹಾಗೆ ನಟಿ ರಾಧಿಕಾ ಮೈಸೂರು ಮೂಲದವರು.

 

77
radhika

ರಾಧಿಕಾ ನಾರಾಯಣ್ ಮೊದಲು ರಾಧಿಕಾ ಚೇತನ್ ಆಗಿದ್ದರು. ರಾಧಿಕಾ ಚೇತನ್ ಆಗಿಯೇ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ರಾಧಿಕಾ ಚೇತನ್ ಹೆಸರಿನ ಬದಲಿಗೆ ನಾರಾಯಣ್ ಸೇರಿಕೊಂಡಿದ್ದಾರೆ. ಇದೀಗ ರಾಧಿಕಾ ನಾರಾಯಣ್ ಆಗಿದ್ದಾರೆ.

Read more Photos on
click me!

Recommended Stories