ಆಲಿಯಾ ರಣಬೀರ್ ಮದುವೆ ವರ್ಷದ ಕೊನೆಯಲ್ಲಿ, ಶೀಘ್ರದಲ್ಲೇ ಡೇಟ್ ಬಹಿರಂಗ!
First Published | Oct 28, 2021, 5:27 PM ISTರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅವರ ಮದುವೆಯ ಕಾರಣಕ್ಕಾಗಿ ಬಹಳ ದಿನಗಳಿಂದ ಸುದ್ದಿಯಲ್ಲಿದ್ದಾರೆ. ರಣಬೀರ್-ಆಲಿಯಾ 2020ರಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕೊರೋನಾ ಮತ್ತು ನಂತರ ರಿಷಿ ಕಪೂರ್ ಸಾವಿನಿಂದ ಮದುವೆಯನ್ನು ಮುಂದೂಡಲಾಯಿತು. ಆದರೆ, ಈಗ ಮತ್ತೊಮ್ಮೆ ರಣಬೀರ್ ಮತ್ತು ಆಲಿಯಾ ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಇಬ್ಬರೂ ತಮ್ಮ ಶೂಟಿಂಗ್ ದಿನಾಂಕವನ್ನು ಮುಂದೂಡಿದ್ದಾರೆ. ಆದರಿಂದ ರಣಬೀರ್ ಕಪೂರ್ ಆಲಿಯಾ ಭಟ್ 2021ರ ಅಂತ್ಯದ ವೇಳೆಗೆ ಮದುವೆಯಾಗಬಹುದು, ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಮಾಧ್ಯಮ ವರದಿಗಳ ಪ್ರಕಾರ, ಆಲಿಯಾ ಮತ್ತು ರಣಬೀರ್ ಕಪೂರ್ ಡಿಸೆಂಬರ್ 2021ರಲ್ಲಿ ಸಪ್ತಪದಿ ತುಳಿಯಬಹುದು. ಇಬ್ಬರೂ ತಮ್ಮ ಕೆಲಸದ ಬದ್ಧತೆಯನ್ನು ಸರಿಯಾಗಿ ಹೊಂದಿಸಿಕೊಂಡಿದ್ದಾರೆ, ಎಂದು ಹೇಳಲಾಗುತ್ತಿದೆ.