ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್(Instagram) ಸ್ಟೋರಿಯಲ್ಲಿ ಮದುವೆ ಮತ್ತು ಹೆಣ್ಣುಮಕ್ಕಳ ಬಗ್ಗೆ ಸ್ಪೂರ್ತಿದಾಯಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಮೂಲತಃ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಬರೆದ ಈ ಹೇಳಿಕೆಯು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದರ ಬಗ್ಗೆ, ಆರ್ಥಿಕವಾಗಿ ಸ್ವತಂತ್ರವಾಗಿಸುವ ಬಗ್ಗೆ ಹಾಗೂ ಹೆಚ್ಚು ಆತ್ಮವಿಶ್ವಾಸದಿಂದ ಬೆಳೆಸುವಂತೆ ಮಾಡುವ ಕುರಿತಾಗಿತ್ತು.
Samantha
ನಿಮ್ಮ ಹೆಣ್ಣುಮಕ್ಕಳನ್ನು ತುಂಬಾ ಸಮರ್ಥರನ್ನಾಗಿ ಮಾಡಿ, ಅವಳನ್ನು ಯಾರು ಮದುವೆಯಾಗುತ್ತಾರೆ ಎಂದು ನೀವು ಚಿಂತಿಸಬೇಕಾಗಿಲ್ಲ. ಅವಳ ಮದುವೆಯ ದಿನಕ್ಕಾಗಿ ಹಣವನ್ನು ಉಳಿಸುವ ಬದಲು, ಅದನ್ನು ಅವಳ ಶಿಕ್ಷಣಕ್ಕೆ ಖರ್ಚು ಮಾಡಿ ಎಂದು ಇದರಲ್ಲಿ ಬರೆಯಲಾಗಿದೆ.
ಮುಖ್ಯವಾಗಿ, ಅವಳನ್ನು ಮದುವೆಗೆ ಸಿದ್ಧಪಡಿಸುವ ಬದಲು, ಅವಳನ್ನು ಆಕೆಗಾಗಿ ಬೆಳೆಸಿ, ಸಿದ್ಧಪಡಿಸಿ. ಅವಳಿಗೆ ತನ್ನನ್ನು ತಾನು ಪ್ರೀತಿಸುವುದಕ್ಕೂ, ಆತ್ಮವಿಶ್ವಾಸವನ್ನು ಕಲಿಸಿ. ಅವಳಿಗೆ ಅಗತ್ಯವಿದ್ದರೆ ಅವಳು ಯಾರಿಗಾದರೂ ಹೊಡೆಯಬಹುದು ಎನ್ನುವಷ್ಟು ಸ್ಟ್ರಾಂಗ್ ಆಗಿ ಬೆಳೆಸಿ ಎಂದು ಸ್ಪೂರ್ತಿದಾಯಕ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಮಾಜಿ ಪತಿ, ನಟ ನಾಗ ಚೈತನ್ಯ ಅವರಿಂದ ಬೇರ್ಪಡುವುದಾಗಿ ಘೋಷಿಸಿದ ನಂತರ ಸಮಂತಾ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಇಬ್ಬರೂ ಅ.2ರಂದು ಬೇರೆಯಾಗುತ್ತಿರುವುದಾಗಿ ಎನೌನ್ಸ್ ಮಾಡಿದ್ದರು.
ಇದು ನಮ್ಮ ಎಲ್ಲಾ ಹಿತೈಷಿಗಳಿಗೆ. ಸಾಕಷ್ಟು ಚರ್ಚೆ ಮತ್ತು ಆಲೋಚನೆ ನಂತರ ಸ್ಯಾಮ್ ಮತ್ತು ನಾನು ನಮ್ಮದೇ ಹಾದಿಯನ್ನು ಅನುಸರಿಸಲು ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹ ಹೊಂದಲು ನಾವು ಅದೃಷ್ಟವಂತರು. ಅದು ನಮ್ಮ ಸಂಬಂಧದ ಮೂಲವಾಗಿತ್ತು ಎಂದಿದ್ದಾರೆ.
ಅದು ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ನಮಗೆ ಅಗತ್ಯವಿರುವ ಖಾಸಗಿತನ ನೀಡುವಂತೆ ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಪೋಸ್ಟ್ ಮಾಡಲಾಗಿತ್ತು.