Ranbir Kapoor - Alia Bhatt ಮದುವೆ ಪೋಸ್ಟ್‌ಪೋನ್‌? ಅಚ್ಚರಿ ಮೂಡಿಸಿದ ನಟಿಯ ಸಹೋದರನ ಹೇಳಿಕೆ

First Published | Apr 12, 2022, 3:30 PM IST

ರಣಬೀರ್ (Ranbir Kapoor) ಮತ್ತು ಆಲಿಯಾ (Alia Bhatt) ಅವರ ವಿವಾಹವು ಈ ವರ್ಷದ ಬಹು ನಿರೀಕ್ಷಿತ ಮತ್ತು ಅತಿ ದೊಡ್ಡ ಬಾಲಿವುಡ್ ವಿವಾಹವಾಗಿದೆ. ಕಳೆದ ದಿನಗಳಲ್ಲಿ ಇವರ ಮದುವೆ ಸಂಬಂಧಿಸಿದಂತೆ ಸಾಕಷ್ಟು  ಅಪ್ಡೇಟ್ಸ್‌ ಹರಿದಾಡುತ್ತಿವೆ. ಆದರೆ  ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಈ ಜೋಡಿ ತಮ್ಮ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ

ರಣಬೀರ್ ಕಪೂರ್ ಅಥವಾ ಆಲಿಯಾ ಭಟ್ ಅವರ ಮದುವೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಆಲಿಯಾ ಅವರ ಚಿಕ್ಕಪ್ಪ ರಾಬಿನ್ ಭಟ್ ಅವರು ಮದುವೆಯ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದಿದ್ದರು
 

ಈ ಮೊದಲು ಅಲಿಯಾ-ರಣಬೀರ್ ಪ್ರೀ ವೆಡ್ಡಿಂಗ್‌ ಫಂಕ್ಷನ್‌ಗಳು ಏಪ್ರಿಲ್ 13 ರಂದು ಬುಧವಾರ ಪ್ರಾರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಆಲಿಯಾ, ರಣಬೀರ್‌ ತಮ್ಮ ಮದುವೆಯ ದಿನಾಂಕವನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂದು ಹೇಳಿರುವ ತಾಜಾ ವರದಿಗಳು ವೈರಲ್‌ ಆಗಿವೆ

Tap to resize

ಆಂಗ್ಲ ಮನರಂಜನಾ ಪೋರ್ಟಲ್‌ನಲ್ಲಿನ ವರದಿಯ ಪ್ರಕಾರ, ಆಲಿಯಾ ಮತ್ತು ರಣಬೀರ್ ಕಪೂರ್ ತಮ್ಮ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂದು ಆಲಿಯಾ ಭಟ್ ಅವರ ಸಹೋದರ ರಾಹುಲ್ ಭಟ್ ಹೇಳಿದ್ದಾರೆ. 

ರಣಬೀರ್‌ ಮತ್ತು ಆಲಿಯಾರ ಮದುವೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವುದು ಮುಂದೂಡಿಕೆಗೆ ಮುಖ್ಯ ಕಾರಣ ಎಂದು ರಾಹುಲ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಹೆಚ್ಚು ಒತ್ತಡ ಇರುವುದರಿಂದ ಎಲ್ಲವನ್ನೂ ಬದಲಾಯಿಸಲಾಗಿದೆ' ಎಂದು ಆಲಿಯಾ ಭಟ್ ಅವರ ಸಹೋದರ ರಾಹುಲ್ ಭಟ್ ಮದುವೆ ದಿನಾಂಕಗಳ ಬದಲಾವಣೆಯ ಬಗ್ಗೆ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಅದೇ ಸಮಯದಲ್ಲಿ, ಆಲಿಯಾ ಮತ್ತು ರಣಬೀರ್ ದಿನಾಂಕಗಳನ್ನು ಪೋಸ್ಟ್‌ ಪೋನ್‌ ಮಾಡಲು  ನಿರ್ಧರಿಸಿದ್ದಾರೆ ಎಂದು ಹೇಳಿರುವ ರಾಹುಲ್ ಭಟ್, ತಾಜಾ ದಿನಾಂಕಗಳನ್ನು ಬಹಿರಂಗಪಡಿಸಲಿಲ್ಲ. ಆದರೆ ಮೂಲಗಳ ಪ್ರಕಾರ ಏಪ್ರಿಲ್ 20ರಂದು ಇಬ್ಬರು ಹಸೆಮಣೆ ಏರತ್ತಿದ್ದಾರೆ ಎನ್ನಲಾಗಿದೆ.

'ಮದುವೆ ನಡೆಯುತ್ತಿದೆ, ಅದು ಎಲ್ಲರಿಗೂ ತಿಳಿದಿದೆ. ಆದ್ರೆ ಏಪ್ರಿಲ್ 13 ಅಥವಾ 14ಕ್ಕೆ ಮದುವೆ ಇಲ್ಲ ಅನ್ನೋದು ಖಚಿತ. ವಾಸ್ತವವಾಗಿ, ಹಿಂದಿನ ದಿನಾಂಕಗಳು ಇದೇ ಆಗಿದ್ದವು. ಆದರೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾದ ನಂತರ, ದಿನಾಂಕಗಳನ್ನು ಬದಲಾಯಿಸಲಾಯಿತು. ಒತ್ತಡ ಹೆಚ್ಚಿರುವ ಕಾರಣ ಎಲ್ಲವನ್ನೂ ಬದಲಾಯಿಸಲಾಗಿದೆ. ಏಪ್ರಿಲ್ 13 ಅಥವಾ 14 ರಂದು ಯಾವುದೇ ಮದುವೆ ಇಲ್ಲ ಎಂದು ನಾನು ಮಾತನ್ನು ನೀಡುತ್ತೇನೆ. ನನಗೆ ತಿಳಿದಿರುವಂತೆ, ಶೀಘ್ರದಲ್ಲೇ ದಿನಾಂಕದ ಬಗ್ಗೆ ಪ್ರಕಟಣೆ ಇರುತ್ತದೆ' ಎಂದು  ರಾಹುಲ್ ಭಟ್ ಆಜ್‌ತಕ್‌ಗೆ ಹೇಳಿದರು. 
 

ಸೋಮವಾರ, ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಅವರು ಮದುವೆಯ ಬಗ್ಗೆ ಕೇಳಿದಾಗ ಪಾಪರಾಜಿಗಳ ಮೇಲೆ  ಸ್ವಲ್ಪ ಅಸಮಾಧಾನಗೊಂಡಿದ್ದಾರೆ. ಒಂದು ಸೆಟ್‌ನಲ್ಲಿದ್ದ  ನೀತು ತನ್ನ ವ್ಯಾನಿಟಿಗೆ ಹೋಗುವಾಗ ಒಬ್ಬ ಪಾಪರಾಜಿ  ಮದುವೆ ಯಾವಾಗ ಎಂದು ಅವರನ್ನು ಕೇಳಿದರು

'ಮುಂದೆ ಹೋಗಿ.. ನಿಮಗೇನು? ಯಾವಾಗಾದರೂ ಆಗಲಿ ನಾನು ನಿಮಗೆ ಏಕೆ ಹೇಳಬೇಕು?' ಎಂದು ರಣಬೀರ್‌ ತಾಯಿ ನೀತು ಕಪೂರ್‌ ಸಿಟ್ಟಿನಲ್ಲಿ ಉತ್ತರಿಸಿದ್ದರು.

Latest Videos

click me!