ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ದಂಪತಿಗಳು!

First Published Oct 28, 2022, 3:20 PM IST

ಅತ್ಯಂತ ಜನಪ್ರಿಯ ಚಿತ್ರ ಬಾಹುಬಲಿಯಲ್ಲಿ ಭಲ್ಲಾಲ್‌ದೇವ್ ಪಾತ್ರದಲ್ಲಿ ನಟಿಸಿರುವ ರಾಣಾ ದಗ್ಗುಬಾಟಿ ( Rana Daggubati) ಬಗ್ಗೆ ಸಂತಸದ ಸುದ್ದಿ ಹೊರಬೀಳುತ್ತಿದೆ. ವರದಿಗಳ ಪ್ರಕಾರ ರಾಣಾ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಅವರ ಪತ್ನಿ ಮಿಹೀಕಾ ಬಜಾಜ್ (Miheeka Bajaj) ಗರ್ಭಿಣಿ ಎಂದು ವರದಿಗಳು ಹೇಳುತ್ತಿವೆ. ಆದರೆ, ಗರ್ಭಿಣಿಯಾಗಿರುವ ಬಗ್ಗೆ ದಂಪತಿಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. 

ವಾಸ್ತವವಾಗಿ, ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾ ಕರ್ವಾ ಚೌತ್‌ ದಿನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಅವರು ಗರ್ಭಿಣಿಯಾಗಿದ್ದಾರೆ ಎಂಬ ಎಲ್ಲಾ ಊಹಾಪೋಹಗಳು ನಡೆಯುತ್ತಿವೆ.

'2 ಆತ್ಮಗಳು, 2 ಜನರು, 2 ಕೈಗಳು, 1 ಭರವಸೆ. ಶಾಶ್ವತತೆಗಾಗಿ ಒಟ್ಟಿಗೆ ಇಂದು ಮತ್ತು ಪ್ರತಿದಿನ ಪ್ರೀತಿಯನ್ನು ಆಚರಿಸುವುದು.ನೀನು ನನ್ನನ್ನು ಸಂಪೂರ್ಣ ಮಾಡಿರುವೆ' ಎಂದು ಮಿಹಿಕಾ ಪೋಸ್ಟ್‌ನಲ್ಲಿ  ಬರೆದಿದ್ದಾರೆ.

ಮನರಂಜನಾ ಪೋರ್ಟಲ್‌ನ ಮೂಲಗಳು ರಾಣಾ ಮತ್ತು ಮಿಹೀಕಾ ತುಂಬಾ ವೈಯಕ್ತಿಕ ಮತ್ತು ಅವರ ನಿಜ ಜೀವನದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಅವರು ಶೀಘ್ರದಲ್ಲೇ ಪ್ರೆಗ್ನೆಂಸಿ  ಘೋಷಿಸುತ್ತಾರೆ ಎಂದು ಹೇಳುತ್ತವೆ,.

ರಾಣಾ ದಗ್ಗುಬಾಟಿ  ಮತ್ತು ಮಿಹಿಕಾ ಆಗಸ್ಟ್ 2020 ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾದರು. ಇದರಲ್ಲಿ ಕುಟುಂಬ ಮತ್ತು ಕೆಲವು ವಿಶೇಷ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.

ಅದೇ ಸಮಯದಲ್ಲಿ, ದಕ್ಷಿಣ ಇಂಡಸ್ಟ್ರಿಗೆ ಸಂಬಂಧಿಸಿದ ಕೆಲವು ಸೆಲೆಬ್ರಿಟಿಗಳು ಮದುವೆಗೆ ಹಾಜರಾಗಿದ್ದರು ಮತ್ತು ಈಗ  ವರದಿಗಳ ಪ್ರಕಾರ ರಾಣಾ ದಗ್ಗುಬಾಟಿ ಮತ್ತು ಪತ್ನಿ ಮಿಹೀಕಾ ಬಜಾಜ್ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ರಾಣಾ ಅವರು ಇಂಡಸ್ಟ್ರಿಗೆ ಪ್ರವೇಶಿಸಿ12ನೇ ವರ್ಷ ಪೂರೈಸಿದ್ದಾರೆ. ಈ ಸಂದರ್ಭವನ್ನು ರಾಣಾ  ತಮ್ಮ ಪತ್ನಿಯೊಂದಿಗೆ ಆಚರಿಸಿಕೊಂಡಿದ್ದಾರೆ ಮತ್ತು ಬೆಂಬಲ ನೀಡಿದ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ.

ಶೇಖರ್ ಕಮ್ಮುಲ ನಿರ್ದೇಶನದ ಲೀಡರ್ ಚಿತ್ರದ ಮೂಲಕ ರಾಣಾ ದಗ್ಗುಬಾಟಿ  ಅವರು ದಕ್ಷಿಣ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಅವರು  ಕೆಲವು ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ದಮ್ ಮಾರೋ ದಮ್, ಯೇ ಜವಾನಿ ಹೈ ದೀವಾನಿ, ದಿ ಘಾಜಿ ಅಟ್ಯಾಕ್, ಬೇಬಿ, ವೆಲ್‌ಕಮ್ ಟು ನ್ಯೂಯಾರ್ಕ್, ಹೌಸ್‌ಫುಲ್ 4, ಹಾಥಿ ಮೇರೆ ಸಾಥಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು.

ಪ್ರಸ್ತುತ  ರಾಣಾ ದಗ್ಗುಬಾಟಿ ದಿ ಜರ್ನಿ ಆಫ್ ಇಂಡಿಯಾ ಸಾಕ್ಷ್ಯಚಿತ್ರ-ಸರಣಿಯ ಎರಡನೇ ಸಂಚಿಕೆಯನ್ನು ಹೋಸ್ಟ್ ಮಾಡಲಿದ್ದಾರೆ. ವರದಿಗಳ ಪ್ರಕಾರ ಅವರು ಮೂರು ನಿರ್ಮಾಪಕರೊಂದಿಗೆ ಎರಡು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ತೆಲುಗು ಇಂಡಸ್ಟ್ರಿಯ ಡಿ.ಸುರೇಶ್ ಬಾಬು, ರಾಣಾ ದಗ್ಗುಬಾಟಿ, ಸುನೀಲ್ ನಾರಂಗ್ ಮತ್ತು ಪುಷ್ಕುರ್ ರಾಮ್ ಮೋಹನ್ ರಾವ್ ಒಟ್ಟಾಗಿ ದಸರಾದಂದು ಚಲನಚಿತ್ರಗಳನ್ನು ಘೋಷಿಸಿದರು. ಅವರ ಮೂರು ಚಿತ್ರಗಳು 1945, ಭೀಮ ನಾಯಕ್ ಮತ್ತು ವೀರತ ಪ್ರಾಣನ್ ಈ ವರ್ಷ ಬಿಡುಗಡೆಯಾದವು.

click me!