Ramesh Sippy Birthday: ಶೋಲೆ ಸಿನಿಮಾ ಮಾಡಲು ತಂದೆಯಿಂದ ಸಾಲ ಪಡೆದ ನಿರ್ದೇಶಕ ರಮೇಶ್ ಸಿಪ್ಪಿ

First Published Jan 23, 2022, 6:00 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ ಇತಿಹಾಸ ಸೃಷ್ಟಿಸಿದ ಶೋಲೆ (Sholay) ಸಿನಿಮಾ ನಿರ್ದೇಶಕ ರಮೇಶ್ ಸಿಪ್ಪಿ (Ramesh Sippy) 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 23 ಜನವರಿ 1947 ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. ರಮೇಶ್ ಸಿಪ್ಪಿ ಅವರು ತಮ್ಮ ಕೆಲಸದ ಜೊತೆ ಪರ್ಸನಲ್‌ ಲೈಫ್‌ ಕಾರಣದಿಂದ ಸಹ ಸುದ್ದಿಯಾದರು. ಅವರು ಜೀವನದಲ್ಲಿ ಎರಡು ಬಾರಿ  ಮದುವೆಯಾದರು. ಅವರ ಎರಡನೇ ಪತ್ನಿ ಕಿರಣ್ ಜುನೇಜಾ ಅವರಿಗಿಂತ ಸುಮಾರು 23 ವರ್ಷ ಚಿಕ್ಕವರು. ಶೋಲೆ ಚಿತ್ರದ ಮೂಲಕ ಸಿಪ್ಪಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಆದರೆ ಈ ಚಿತ್ರವನ್ನು ನಿರ್ಮಿಸಲು ಅವರ ಬಳಿ ಹಣವಿರಲಿಲ್ಲವಂತೆ. ಸಂದರ್ಶನವೊಂದರಲ್ಲಿ, ರಮೇಶ್ ಸಿಪ್ಪಿ ಅವರು ಶೋಲೆ ಮಾಡಲು ತಮ್ಮ ಬಳಿ ಬಜೆಟ್ ಇರಲಿಲ್ಲ. ಆದರೆ ಕೊನೆಗೆ ತಂದೆ ಜಿ.ಪಿ.ಸಿಪ್ಪಿ ಬಳಿ ಹಣದ ಬೇಡಿಕೆಯನ್ನಿಟ್ಟು ಹೇಗೋ ಸಿನಿಮಾ ಮುಗಿಸಿದರು ಎಂದು ಹೇಳಿದ್ದರು. ರಮೇಶ್ ಸಿಪ್ಪಿ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕೆಳಗೆ ಓದಿ

ತಮ್ಮ ತಂದೆ ತನಗೆ ಸಹಾಯ ಮಾಡಿದರು ಮತ್ತು ಶೋಲೆ ಮಾಡಲು ಸುಮಾರು 3 ಕೋಟಿ ರೂಪಾಯಿ ನೀಡಿದ್ದರು. ಆದರೆ ಸ್ಟಾರ್‌ಕಾಸ್ಟ್ ಕೇವಲ 20 ಲಕ್ಷ ಆಗಿತ್ತು ಎಂದು ರಮೇಶ್‌ ಸಿಪ್ಪಿ ಹೇಳಿದ್ದರು. ಗಬ್ಬರ್ ಸಿಂಗ್ ಪಾತ್ರವನ್ನು ಮೊದಲು ಡ್ಯಾನಿ ಡೆನ್ಜಾಂಗ್ಪಾಗೆ ನೀಡಲಾಯಿತು. ಆದರೆ ದಿನಾಂಕ ಸಿಗದ ಕಾರಣ, ನಂತರ ಅಮ್ಜದ್ ಖಾನ್ ಆ ಪಾತ್ರವನ್ನು ವಹಿಸಲಾಯಿತು.
 

ರಮೇಶ್ ಸಿಪ್ಪಿ ಅವರನ್ನು ದೊಡ್ಡ ನಿರ್ದೇಶಕರನ್ನಾಗಿ ಮಾಡಿದ ಇಂತಹ ಅನೇಕ ಚಿತ್ರಗಳಿವೆ. ಈ ಸಿನಿಮಾಗಳಲ್ಲಿ ಅಂದಾಜ್, ಸೀತಾ ಮತ್ತು ಗೀತಾ, ಶಾನ್ ಮತ್ತು ಶಕ್ತಿ ಸೇರಿವೆ. ಅವರ ಸಿನಿಮಾ ಶಿಮ್ಲಾ ಮಿರ್ಚ್ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ರಾಕುಲ್ ಪ್ರೀತ್ ಸಿಂಗ್ ಮತ್ತು ಹೇಮಾ ಮಾಲಿನಿ ಮುಖ್ಯ ಭೂಮಿಕೆಯಲ್ಲಿದ್ದರು. 

ರಮೇಶ್ ಸಿಪ್ಪಿಯ ಜನನದ ಸಮಯದಲ್ಲಿ, ಅವರ ಕುಟುಂಬವು ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿತ್ತು,  ವಿಭಜನೆಯ ನಂತರ ಮುಂಬೈನಲ್ಲಿ ನೆಲೆಸಿದ್ದರು. ಅವರು ಮುಂಬೈನಲ್ಲಿ ತಮ್ಮ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ಅವರ ಸಿನಿಮಾ ಹಿನ್ನೆಲೆಯಿಂದಾಗಿ ಅವರು ಬಾಲಿವುಡ್‌ನಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದರು. 

ರಮೇಶ್ ಸಿಪ್ಪಿ 6 ವರ್ಷದವನಿದ್ದಾಗ ಮೊದಲ ಬಾರಿಗೆ ಸಜಾ ಸಿನಿಮಾದ ಸೆಟ್‌ಗೆ ಹೋಗಿದ್ದರು. ಅವರು ಸುಮಾರು 9 ನೇ ವಯಸ್ಸಿನಲ್ಲಿ ಚಲನಚಿತ್ರದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದರು. ಈ ಚಿತ್ರದ ಹೆಸರು ಶಾಹೆನ್‌ಶಾ.  

ಅವರು 1971 ರ ಅಂದಾಜ್ ಚಿತ್ರದೊಂದಿಗೆ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡಿದರು. ಮೊದಲು, ಅವರು 7 ವರ್ಷಗಳ ಕಾಲ ಸಹಾಯಕರಾಗಿ ಕೆಲಸ ಮಾಡಿದರು. ಅವರ ಎರಡನೇ ಚಿತ್ರ ಸೀತಾ ಔರ್ ಗೀತಾ, ಇದರಲ್ಲಿ ಹೇಮಾ ಮಾಲಿನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ರಮೇಶ್ ಸಿಪ್ಪಿ ಜನಮನ್ನಣೆ ಪಡೆದರು. 

ರಮೇಶ್ ಸಿಪ್ಪಿ 1975ರಲ್ಲಿ ಶೋಲೆ ಸಿನಿಮಾ ಮಾಡಿ ಹೊಸ ದಾಖಲೆ ನಿರ್ಮಿಸಿದ್ದರು. ಈ ಚಿತ್ರದ ನಂತರ, ರಮೇಶ್ ಸಿಪ್ಪಿ ಅವರ ಹೆಸರು ಎಲ್ಲಾ ಕಡೆ ಕೇಳಿ ಬರಲು ಪ್ರಾರಂಭಿಸಿತು ಮತ್ತು ನಂತರ ಅವರನ್ನು ಬಾಲಿವುಡ್‌ನ ದೊಡ್ಡ ನಿರ್ದೇಶಕರ ಪಟ್ಟಿಗೆ ಸೇರಿಸಲಾಯಿತು, ಆದರೆ ನಂತರ ಅವರು ಅನೇಕ ಉತ್ತಮ ಸಿನಿಮಾಗಳನ್ನು ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರು ಚಲನಚಿತ್ರ ಪ್ರಪಂಚದಿಂದ ದೂರವಾದರು.

ರಮೇಶ್ ಸಿಪ್ಪಿ ಎರಡು ಮದುವೆ ಮಾಡಿಕೊಂಡಿದ್ದಾರೆ. ಅವರ ಮೊದಲ ಹೆಂಡತಿಯ ಹೆಸರು ಗೀತಾ. ನಂತರ ಅವರು ಕಿರಣ್ ಜುನೇಜಾ ಅವರಿಗೆ ಮನಸೋತರು ಮತ್ತು ತಮ್ಮ ಮೊದಲ ಹೆಂಡತಿಯನ್ನು ವಿಚ್ಛೇದನ ಮಾಡಿ ಎರಡನೇ ಬಾರಿಗೆ ವಿವಾಹವಾದರು.

ಕಿರಣ್ ಜುನೇಜಾ ರಮೇಶ್ ಸಿಪ್ಪಿ ಅವರಿಗೆ ರೋಹನ್ ಕಪೂರ್ ಮತ್ತು ಶೀನಾ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಶೀನಾ ಕಪೂರ್ ಶಶಿ ಕಪೂರ್ ಅವರ ಮಗ ಕುನಾಲ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ ಮತ್ತು ರೋಹನ್ ಕಪೂರ್ ಚಲನಚಿತ್ರ ನಿರ್ದೇಶಕರಾಗಿದ್ದಾರೆ.

ಸಿನಿಮಾದಿಂದ ಕೊಂಚ ಬಿಡುವು ಮಾಡಿಕೊಂಡಿದ್ದ ಅವರು ಮತ್ತೆ ಆ್ಯಕ್ಟೀವ್ ಆದರು. 1989 ರಲ್ಲಿ, ಮಿಥುನ್ ಚಕ್ರವರ್ತಿ ಅವರೊಂದಿಗೆ ಭ್ರಷ್ಟಾಚಾರ್‌, 1991 ರಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ಅಕೇಲಾ ಮತ್ತು 1995 ರಲ್ಲಿ ಶಾರುಖ್ ಖಾನ್ ಅವರೊಂದಿಗೆ ಜಮಾನಾ ದೀವಾನಾ ಚಲನಚಿತ್ರವನ್ನು ಮಾಡಿದರು, ಆದರೆ ಈ ಯಾವುದೇ ಸಿನಿಮಾಗಳು ಅಷ್ಷು ಯಶಸ್ಸಾಗಿಲ್ಲ.

click me!