New Mom Priyanka Chopra: ಪ್ರಿಯಾಂಕಾ-ನಿಕ್‌ ಸರೋಗಸಿ ಅಯ್ಕೆ ಮಾಡಿದ್ದೇಕೆ? ಇಲ್ಲಿದೆ ಕಾರಣ

Published : Jan 23, 2022, 05:18 PM IST

ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas) ದಂಪತಿಗಳು ತಮ್ಮ ಮೊದಲ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದ್ದಾರೆ. ವರದಿಗಳ ಪ್ರಕಾರ ಇದು ಪ್ರಿಮೆಚ್ಯೂರ್‌ ಹೆಣ್ಣು ಮಗು. ಆದಾರೂ ದಂಪತಿಗಳಿಂದ ಇನ್ನೂ ಯಾವುದೇ ದೃಢೀಕರಣ ಬಂದಿಲ್ಲ. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಬಾಡಿಗೆ ತಾಯ್ತನವನ್ನು ಏಕೆ ಆರಿಸಿಕೊಂಡರು? ಇಲ್ಲಿದೆ ಉತ್ತರ. 

PREV
18
New Mom Priyanka Chopra: ಪ್ರಿಯಾಂಕಾ-ನಿಕ್‌ ಸರೋಗಸಿ ಅಯ್ಕೆ ಮಾಡಿದ್ದೇಕೆ? ಇಲ್ಲಿದೆ ಕಾರಣ

ಎರಡು ದಿನದ ಹಿಂದೆ ಅಂದರೆ ಜನವರಿ 21 ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ತಮ್ಮ ಮೊದಲ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿರುವುದಾಗಿ ಘೋಷಿಸಿ ಅವರ ಅಭಿಮಾನಿಗಳಿಗೆ ಸರ್ಪೈಸ್ ನೀಡಿದರು. ದಂಪತಿಗಳ  ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ತಮ್ಮ ಮಗುವಿನ ಆಗಮನವನ್ನು ಪ್ರಕಟಿಸುವ ಪೋಸ್ಟ್ ಅನ್ನು ಶೇರ್‌ ಮಾಡಿಕೊಂಡಿದ್ದರು.

28

'ನಾವು ಬಾಡಿಗೆ ತಾಯ್ತನದ ಮೂಲಕ ಒಂದು ಮಗುವನ್ನು ಸ್ವಾಗತಿಸಿದ್ದೇವೆ ಎಂದು ಖಚಿತಪಡಿಸಲು ನಮಗೆ ತುಂಬಾ ಸಂತೋಷವಾಗಿದೆ. ಈ ವಿಶೇಷ ಸಮಯದಲ್ಲಿ ನಾವು ಗೌಪ್ಯತೆಯನ್ನು ಬಯಸುತ್ತೇವೆ. ನಾವು ನಮ್ಮ ಕುಟುಂಬದತ್ತ ಗಮನ ಹರಿಸಬೇಕು. ತುಂಬ ಧನ್ಯವಾದಗಳು' ಎಂದು ಪ್ರಿಯಾಂಕಾ ಮತ್ತು ನಿಕ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. 
 

38

ಡೈಲಿಮೇಲ್ ವರದಿಯ ಪ್ರಕಾರ, ಪ್ರಿಯಾಂಕಾ-ನಿಕ್ ಅವರ ಮಗು ಹೆರಿಗೆ ದಿನಾಂಕಕ್ಕಿಂತ 12 ವಾರಗಳ ಮೊದಲು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ ಜನಿಸಿದೆ. ನವಜಾತ ಶಿಶು ಆರೋಗ್ಯವಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರಿಸಲಾಗುತ್ತದೆ. ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ದಂಪತಿಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ.  

48

ವಾಸ್ತವಾಗಿ ಏಪ್ರಿಲ್‌ನಲ್ಲಿ ಹೆರಿಗೆ ದಿನಾಂಕವಾಗಿತ್ತು ಎಂದು ಹೇಳಲಾಗುತ್ತಿದೆ. ಮಗುವಾದ ನಂತರ ತಾಯ್ತನವನ್ನು ಆನಂದಿಸಲು ಬಯಸಿದ್ದರು ಮತ್ತು  ಈ ಕಾರಣದಿಂದಾಗಿ, ಪ್ರಿಯಾಂಕಾ ತನ್ನ ಎಲ್ಲಾ ಕೆಲಸದ ಬದ್ಧತೆಗಳನ್ನು ಪೂರೈಸಿದ್ದರು 

58

ದಂಪತಿಗಳು ಬಾಡಿಗೆ ತಾಯ್ತನದ ಏಜೆನ್ಸಿಯನ್ನು ಸಂಪರ್ಕಿಸಿದರು ಮತ್ತು ಸರೋಗೆಸಿ ಅನುಭವ ಹೊಂದಿರುವ ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದರು. ಇದು ಆಕೆಯ 5ನೇ ಬಾಡಿಗೆ ತಾಯ್ತನ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

68

ಪ್ರಿಯಾಂಕಾ ಚೋಪ್ರಾಗೆ ಯಾವುದೇ ಫಲವತ್ತತೆಯ ಸಮಸ್ಯೆಗಳಿಲ್ಲ ಎಂದು ದಂಪತಿಗೆ ಹತ್ತಿರದ ಮೂಲಗಳು ತಿಳಿಸಿವೆ. ಆದರೆ ಆಕೆಗೆ ಈಗ ಕೇವಲ 39 ವರ್ಷ ಮತ್ತು ಅದು ಅವರಿಗೆ ಸುಲಭವಲ್ಲ. ಈ ಕಾರಣದಿಂದ  ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಬಾಡಿಗೆ ತಾಯ್ತನವನ್ನು ಆರಿಸಿಕೊಂಡರು ಎಂದು ಮೂಲ ಹೇಳಿದೆ.

78

ಅದೇ ಸಮಯದಲ್ಲಿ, ಅವರ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದಾಗಿ ಇದು ಹೆಚ್ಚು ಕಷ್ಟಕರವಾಗುತ್ತಿತ್ತು, ಇಬ್ಬರೂ ಒಟ್ಟಿಗೆ ಇರುವ ಸಮಯವೂ ತುಂಬಾ ಕಡಿಮೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳು ಬಾಡಿಗೆ ತಾಯ್ತನದ ಮಾರ್ಗವನ್ನು ಆರಿಸಿಕೊಂಡರು ಎಂದು ವರದಿ ಹೇಳುತ್ತದೆ.

88

2018 ರಲ್ಲಿ ಜುಲೈ ನಿಕ್ ಪ್ಯಾರಿಸ್‌ನಲ್ಲಿ ಟಿಫಾನಿ ಉಂಗುರದೊಂದಿಗೆ ಪ್ರಿಯಾಂಕಾಗೆ ಪ್ರಪೋಸ್ ಮಾಡಿದರು. ಪ್ರಿಯಾಂಕಾ ಮತ್ತು ನಿಕ್ 2018 ರಲ್ಲಿ  ರಾಜಸ್ಥಾನದ ಉದಯಪುರದ ಉಮೈದ್ ಭವನ್ ಅರಮನೆಯಲ್ಲಿ ಭಾರತೀಯ ಸಾಂಪ್ರದಾಯಿಕ ವಿವಾಹ ಹಾಗೂ ಕ್ರಿಶ್ಚನ್‌ ಮ್ಯಾರೇಜ್‌ ಪ್ರಕಾರ ಇಬ್ಬರೂ ವಿವಾಹವಾದರು.

Read more Photos on
click me!

Recommended Stories