ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬ್ರೈಟ್ ರೆಡ್ ಸ್ಕಿನ್ ಫಿಟ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ದೀಪಿಕಾರ ಅಭಿಮಾನಿಗಳ ಎದೆಬಡಿತ ಹೆಚ್ಚಿದೆ. (ಕೃಪೆ:ದೀಪಿಕಾ ಪಡುಕೋಣೆ/ Instagram)
ದೀಪಿಕಾ ಕೆಂಪು ಬಣ್ಣದ ಹೈ ಹೀಲ್ಸ್ ಸ್ಯಾಂಡಲ್ ಜೊತೆಗೆ ರೆಡ್ ಡ್ರೆಸ್ ಹಾಕಿಕೊಂಡಿದ್ದಾರೆ. ಇದರೊಂದಿಗೆ, ಅವರು ಡಾರ್ಕ್ ಶೇಡ್ ಲಿಪ್ಸ್ಟಿಕ್ ಅನ್ನು ಪೇರ್ ಮಾಡಿ ಕೊಂಡಿದ್ದಾರೆ. ತೆರೆದ ಕೂದಲಿನಲ್ಲಿ ಅವರು ಬಾರೀ ಕಿಲ್ಲರ್ ಲುಕ್ ನೀಡುತ್ತಿದ್ದಾರೆ.
ಈ ಫೋಟೋಗಳನ್ನು ಹಂಚಿಕೊಳ್ಳುವಾಗ, ದೀಪಿಕಾ ಕೆಂಪು ಮೆಣಸಿನಕಾಯಿ ಎಮೋಜಿಯನ್ನು ಬಳಸಿದ್ದಾರೆ. ದೀಪಿಕಾರ ಈ ಹಾಟ್ ಫೋಟೋ ಸಖತ್ ವೈರಲ್ ಆಗಿದೆ. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಜಾನ್ವಿ ಕಪೂರ್ ಫೋಟೋಗೆ ಬೆಂಕಿಯ ಐಕಾನ್ ಅನ್ನು ಕಾಮೆಂಟ್ ಮಾಡಿದ್ದಾರೆ.
ಅದೇ ಸಮಯದಲ್ಲಿ ಅಭಿಮಾನಿಗಳು ದೀಪಿಕಾರನ್ನು ಹಾಟ್ ಮಿರ್ಚಿ ಎಂದು ಕರೆಯುತ್ತಿದ್ದಾರೆ. ಅದೇ ರೀತಿ ಕೆಲವರು ನಟಿಯ ಫೋಟೋದಲ್ಲಿ ತುಂಬಾ ಸೆಕ್ಸಿಯಾಗಿ ಕಾಣುತ್ತಿದ್ದಾರೆ ಎಂದರೆ ಫೋಟೋ ನೋಡಿ ಉಸಿರು ನಿಂತಿದೆ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ.
ಶಕುನ್ ಬಾತ್ರಾ ಅವರ ಮುಂದಿನ ಸಿನಿಮಾ 'ಗೆಹ್ರಾಯನ್' ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿ ಅವರು ತುಂಬಾ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾವು ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ದೀಪಿಕಾ ಜೊತೆಗೆ ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವಾ ಜೊತೆಗೆ ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ '83' ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾರ ಅಭಿನಯ ಮೆಚ್ಚುಗೆ ಗಳಿಸಿದೆ. ಈ ಸಿನಿಮಾವು 1983 ಕ್ರಿಕೆಟ್ ವಿಶ್ವಕಪ್‌ನಲ್ಲಿನ ಕಪಿಲ್‌ದೇವ್ ಅವರ ಕುರಿತಾಗಿದೆ.