ಕನ್ನಡನಾಡಿನ ಸೊಸೆಯಾಗಿದ್ದ ಈ ಬಾಲಿವುಡ್ ನಟಿಗೆ, ಪಾಕಿಸ್ತಾನ ಸೊಸೆಯಾಗೋ ಆಸೆಯಂತೆ!

Published : Jan 21, 2026, 06:35 PM IST

ರಾಖಿ ಸಾವಂತ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ರಿತೇಶ್ ಸಿಂಗ್, ಮೈಸೂರಿನ ಆದಿಲ್ ಖಾನ್ ಜೊತೆಗಿನ ರಾಖಿ ಮದುವೆಗಳು, ಇಸ್ಲಾಂ ಮತಾಂತರ ಹಾಗೂ ವಿಚ್ಛೇದನಗಳು ಭಾರೀ ದೊಡ್ಡ ವಿವಾದ ಸೃಷ್ಟಿಸಿವೆ. ಇದೀಗ  ಪಾಕಿಸ್ತಾನಿ ನಟನ ಮೇಲೆ ಈಕೆಯ ಕಣ್ಣು ಬಿದ್ದಿದೆ. ಮುಂದೆ?

PREV
17

ಕನ್ನಡಿಗ, ಮೈಸೂರು ಹುಡುಗನ ಮದುವೆ ಆಗಿದ್ದರು ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawanth) ಎಂಬುದು ಬಹಳಷ್ಟು ಜನರಿಗೆ ನೆನಪಿರಬಹುದು. ಆದಿಲ್ ಖಾನ್ ಎಂಬ ಮೈಸೂರು ಹುಡುಗನ ಜೊತೆ ವಿವಾಹವಾಗಿದ್ದ ನಟಿ ರಾಖಿ ಸಾವಂತ್, ಆ ಬಳಿಕ ಉಲ್ಟಾ ಹೊಡೆದರು. ಈ ಮದುವೆ ಒಂದು ವರ್ಷ ಕೂಡ ಬಾಳಲಿಲ್ಲ. ಹಿಂದಿಯ ಬಿಗ್ ಬಾಸ್ ಸೇರಿದಂತೆ ಹಲವು ಬಾರಿ ನಟಿ ರಾಖಿ ಸಾವಂತ್ ಸಾಕಷ್ಟು ಸುದ್ದಿಯಲ್ಲಿದ್ದರು.

27

ರಾಖಿ ಸಾವಂತ್‌ಗೆ ಪಾಕ್ ಪ್ರಜೆಯನ್ನು ಮದುವೆ ಆಗೋ ಆಸೆಯಂತೆ!

ರಾಖಿ ಸಾವಂತ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ರಿತೇಶ್ ಸಿಂಗ್, ಮೈಸೂರಿನ ಆದಿಲ್ ಖಾನ್ ಜೊತೆಗಿನ ರಾಖಿ ಮದುವೆಗಳು, ಇಸ್ಲಾಂ ಮತಾಂತರ ಹಾಗೂ ವಿಚ್ಛೇದನಗಳು ಭಾರೀ ದೊಡ್ಡ ವಿವಾದ ಸೃಷ್ಟಿಸಿವೆ. ಪಾಕಿಸ್ತಾನಿ ನಟ ದೋಡಿ ಖಾನ್ ಜೊತೆ ಮದುವೆಯಾಗುವ ಆಸೆ ವ್ಯಕ್ತಪಡಿಸಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಅವರ ಪ್ರತಿಯೊಂದು ಸಂಬಂಧವೂ ಸಾರ್ವಜನಿಕರ ಗಮನ ಸೆಳೆಯುತ್ತಲೇ ಇರುತ್ತವೆ.

37

ರಾಖಿ ಸಾವಂತ್ ಅವರು ಬಾಲಿವುಡ್ ಮಂದಿಗೆ ಮಾತ್ರವಲ್ಲ ಉಳಿದ ಚಿತ್ರರಂಗದವರಿಗೂ ಸಾಕಷ್ಟು ಪರಿಚಿತರು. ಅವರು ಸುದ್ದಿಯಲ್ಲಿರಲು ಸದಾ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ, ಅದರಲ್ಲಿ ಯಶಸ್ವಿಯೂ ಆಗಿರುತ್ತಾರೆ. ಅವರು ವಿವಾಹ ಮಾತ್ರವಲ್ಲದೇ ವಿವಾಹೇತರ ಸಂಬಂಧಗಳಿಗೂ ಸದಾ ಸುದ್ದಿ ಆಗುತ್ತಲೇ ಇದ್ದಾರೆ. ರಾಖಿ ಮೈಸೂರಿನ ಆದಿಲ್‌ ಮದುವೆ ಆಗಿದ್ದು, ಬಳಿಕ ಇಬ್ಬರೂ ಬೇರೆಬೇರೆ ಆಗಿದ್ದೂ ಎಲ್ಲವೂ ವೈರಲ್ ಆಗಿರೋ ಸುದ್ದಿಗಳೇ ಆಗಿವೆ.

47

ಆದರೆ, ಈಗ ನಟಿ ರಾಖಿ ಸಾವಂತ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈಗ ಅವರಿಗೆ ಪಾಕ್ ಹುಡುಗನನ್ನು ಮದುವೆ ಆಗೋ ಆಸೆ ಮೂಡಿದೆಯಂತೆ. ರಾಖಿ ಸಾವಂತ್ ಅವರು 2019ರಲ್ಲಿ ಭಾರತ ಮೂಲದ ವಿದೇಶಿ ಪ್ರಜೆ ರಿತೇಶ್ ರಾಜ್ ಸಿಂಗ್‌ ಅವರನ್ನು ಮದುವೆ ಆದರು. 2022ರಲ್ಲಿ ಇವರು ಡಿವೋರ್ಸ್ ಪಡೆದರು. 'ಮದುವೆ ಅಗಿ ತಪ್ಪು ಮಾಡಿದೆ' ಎಂದು ಅವರು ಆಗ ಹೇಳಿದ್ದರು. ನಂತರ 2022ರಲ್ಲಿ ಅವರು ಮತ್ತೆ ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹ ಆಗಿ ಮತ್ತೆ ಸುದ್ದಿಯಾದರು.

57

ಮೈಸೂರು ಹುಡುಗನನ್ನು ರಾಖಿ ಸಾವಂತ್ ಮುಸ್ಲಿಂ ಧರ್ಮದ ಪ್ರಕಾರವೇ ವಿವಾಹ ಆದರು. ಆಗ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಇಷ್ಟೆಲ್ಲ ಮಾಡಿಯೂ ಇವರ ಸಂಬಂಧ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. 'ಆದಿಲ್ ನನಗೆ ಮೋಸ ಮಾಡಿದ, ಆತನಿಗೆ ಅನೈತಿಕ ಸಂಬಂಧ ಇದೆ' ಎಂದು ರಾಖಿ ಆರೋಪಿಸಿದರು. ಅವರು ನೀಡಿದ ದೂರಿನ ಮೇಲೆ ಆದಿಲ್‌ನ ಮೈಸೂರಿನಲ್ಲಿ ಬಂಧನ ಕೂಡ ಮಾಡಲಾಯಿತು.

67

2025ರಲ್ಲಿ ರಾಖಿ ಪಾಕ್ ನಟನ ಮೇಲೆ ಆಸಕ್ತಿ ತೋರಿಸಿದ್ದರು. ರಾಖಿ ಅವರು ಪಾಕಿಸ್ತಾನದ ನಟ ಹಾಗೂ ಪೊಲೀಸ್ ಅಧಿಕಾರಿ ದೋಡಿ ಖಾನ್ ಜೊತೆ ಮದುವೆ ಆಗುವ ಇಚ್ಛೆ ತೋರಿದರು. 'ನನಗೆ ಹಲವು ಪ್ರಪೋಸಲ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಹೇಗೆ ಕಿರುಕುಳ ನೀಡಲಾಗಿದೆ ಎಂಬುದನ್ನು ನೋಡಿ, ವಿವರಿಸಿದ್ದರು' ಎಂದಿದ್ದರು ಈ ರಾಖಿ.

77

ರಾಖಿ ಮನದಾಸೆಯ ಬಳಿಕ ದೋಡಿ ಖಾನ್ ಈ ಬಗ್ಗೆ ಸ್ಪಷ್ಟನೆ ನೀಡಿದರು. 'ನಾನು ರಾಖಿಗೆ ಪ್ರಪೋಸ್‌ ಮಾಡಿದ್ದು ನಿಜ. ಆದರೆ, ಮದುವೆ ಆಗುತ್ತೇನೆ ಎಂದಿಲ್ಲ' ಎಂದಿದ್ದರು. ಈ ವಿಷಯ ಚರ್ಚೆಗೆ ಕಾರಣ ಆಗಿತ್ತು. ಈಗ ರಾಖಿ ಸೈಲೆಂಟ್ ಆಗಿದ್ದಾರೆ. ಆದರೆ, ಯಾವಾಗ ಮತ್ತೆ ವೈಲೆಂಟ್ ಆಗ್ತಾರೋ, ಮತ್ಯಾವಾಗ ಮತ್ತೆ ಯಾರಿಗೆ ಗಾಳ ಬೀಸ್ತಾರೋ ಹೇಳೋಕೆ ಆಗಲ್ಲ.. ಯಾಕೆಂದರೆ ಆಕೆ ರಾಖಿ ಸಾವಂತ್..!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories