ನಟ ಅಕ್ಷಯ್ ಕುಮಾರ್ ಪ್ರಯಾಣದ ವೇಳೆ ಬೆಂಗಾವಲು ಕಾರು ಭೀಕರ ಅಪಘಾತ, ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಆಟೋ ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ನಟ ಅಕ್ಷಯ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾಗೆ ಏನಾಗಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಪತ್ನಿ ಟ್ವಿಂಕಲ್ ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಅಕ್ಷಯ್ ಕುಮಾರ್ ಜುಹು ಮನೆ ಬಳಿ ಅಪಘಾತವಾಗಿದೆ. ಅಕ್ಷಯ್ ಕುಮಾರ್ ಕಾರು ವೇಗವಾಗಿ ಸಾಗುತ್ತಿದ್ದರೆ, ಅದಕ್ಕೂ ಮೊದಲು ಬೆಂಗಾವಲು ವಾಹನ ಸಾಗಿತ್ತು. ದಿಢೀರ್ ಅಫಘಾತವಾಗಿದೆ. ಅಪಘಾತದಲ್ಲಿ ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ.
25
ಆಟೋ ಚಾಲಕ ಸೇರಿ ಇಬ್ಬರಿಗೆ ಗಾಯ
ಭೀಕರ ಅಪಘಾತದಲ್ಲಿ ನಟ ಅಕ್ಷಯ್ ಕುಮಾರ್ ಬೆಂಗಾವಲು ವಾಹನ ಪಲ್ಟಿಯಾಗಿದೆ. ಇತ್ತ ಡಿಕ್ಕಿಯಾದ ರಭಸಕ್ಕೆ ಆಟೋ ರಕ್ಷಾ ನಜ್ಜು ಗುಜ್ಜಾಗಿದೆ. ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
35
ಸ್ಥಳೀಯರು, ಪೊಲೀಸರ ನೆರವಿನಿಂದ ಗಾಯಾಳುಗಳ ರಕ್ಷಣೆ
ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದಾರೆ. ಅಕ್ಷಯ್ ಕುಮಾರ್ ಬೆಂಗಾವಲು ವಾಹನ ಆಟೋ ರಿಕ್ಷಾದ ಮೇಲೆ ಬಿದ್ದಿದೆ. ಹೀಗಾಗಿ ನಜ್ಜು ಗುಜ್ಜಾದ ಆಟೋದಲ್ಲಿದ್ದ ಗಾಯಾಳುಗಳನ್ನು ಭಾರಿ ಪ್ರಯತ್ನದ ಬಳಿಕ ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದಾರೆ.
ನಟ ಅಕ್ಷಯ್ ಕುಮಾರ್ ಹಾಗೂ ಪತ್ನಿ ಟ್ವಿಂಕಲ್ ಖನ್ನ ಬೇರೊಂದು ಕಾರಿನಲ್ಲಿದ್ದರೆ, ಇವರಿಗೆ ಬೆಂಗಾವಲಾಗಿದ್ದ ಕಾರು ಅಪಘಾತಗೊಂಡಿದೆ. ಹೀಗಾಗಿ ಅಕ್ಷಯ್ ಹಾಗೂ ಟ್ವಿಂಕಲ್ ಇಬ್ಬರು ಸುರಕ್ಷಿತವಾಗಿದ್ದಾರೆ. ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಕೆಲ ಕಾಲ ಅಕ್ಷಯ್ ಹಾಗೂ ಟ್ವಿಂಕಲ್ ಆತಂಕಗೊಂಡಿದ್ದರು
55
ಅತೀ ವೇಗದದಿಂದ ಅಪಘಾತ
ಅಕ್ಷಯ್ ಕಮಾರ್ ಬೆಂಗಾವಲು ವಾಹನ ಕಾರು ಅತೀ ವೇಗದಿಂದ ಸಾಗುತ್ತಿದ್ದ ವೇಳೆ ಆಟೋ ರಿಕ್ಷಾಗೆ ಡಿಕ್ಕಿಯಾಗಿದೆ. ಇತ್ತ ಇತರ ಕಾರುಗಳಿಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಸ್ಥಳೀಯರ ಪ್ರಕಾರ ಅತೀ ವೇಗದ ಕಾರಣದಿಂದ ಅಪಘಾತವಾಗಿದೆ ಎಂದಿದ್ದಾರೆ. ಕಾರು, ರಿಕ್ಷಾಗೆ ಡಿಕ್ಕಿಯಾಗಿದೆ ಎಂದಿದ್ದಾರೆ.
ಅತೀ ವೇಗದದಿಂದ ಅಪಘಾತ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.