ಅಪ್ಪನ ಗುಟ್ಟು ಹೇಳುತ್ತಲೇ ರಕ್ತ ಪರೀಕ್ಷೆ ಮಾಡಿ ಎಂದ Rakhi Sawant​: ಅಮೆರಿಕದಲ್ಲಿ ಕೋಲಾಹಲ!

Published : Oct 28, 2025, 12:51 PM IST

ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್, ಪತಿ ಆದಿಲ್ ಖಾನ್ ಜೊತೆಗಿನ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಇದೀಗ ದುಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ತನ್ನ ತಂದೆ ಎಂದು ಹೇಳಿಕೆ ನೀಡಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

PREV
16
ವಿವಾದಗಳ ರಾಣಿ

ವಿವಾದಗಳ ರಾಣಿ ರಾಖಿ ಸಾವಂತ್ (Rakhi Sawant) ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ ಫಾತಿಮಾ ಆಗಿ ಸೈಲೆಂಟ್​ ಆಗಿದ್ದವರು ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದ್ದಾರೆ.

26
ಪ್ಲಾಸ್ಟಿಕ್​ ಸರ್ಜರಿ

ಕೆಲ ದಿನಗಳ ಹಿಂದೆ ತಮ್ಮ ಪ್ಲಾಸ್ಟಿಕ್​ ಸರ್ಜರಿ ದೇಹವನ್ನು ಪ್ರದರ್ಶಿಸುತ್ತಾ ಮಿನಿ ಸ್ಕರ್ಟ್​ ಧರಿಸಿ ರೀಲ್ಸ್​ ಮಾಡಿರುವ ರಾಖಿ ಅವರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಸಕತ್​ ಟ್ರೋಲ್​ ಮಾಡಿದ್ದರು. ಇದು ಫಾತೀಮಾ ಅವತಾರವೋ, ರಾಖಿಯ ಅವತಾರವೋ ಎಂದು ಪ್ರಶ್ನಿಸಿದ್ದರು. ಇಷ್ಟು ಬಟ್ಟೆ ಹಾಕುವ ಬದಲು ಅದನ್ನೂ ತೆಗೆದುಬಿಡು, ಏನಂತೆ ಎಂದು ಕೆಲವರು ಪ್ರಶ್ನಿಸಿದ್ದರೆ, ಫಾತೀಮಾ, ಏನು ನಿನ್ನೀ ಅವತಾರವಮ್ಮಾ ಎಂದು ಮತ್ತೆ ಕೆಲವರು ನಟಿಯ ಕಾಲೆಳೆದಿದ್ದರು.

36
ಕೇಸ್​ ವಾಪಸ್​

ರಾಖಿ ಅವರು, ತಮ್ಮ ಪತಿ ಆದಿಲ್ ದುರಾನಿ (Adil Durrani) ವಿರುದ್ಧ ಕ್ರಿಮಿನಲ್ ಕೇಸ್​​ ದಾಖಲಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ. ಜೊತೆಗೆ, ಆದಿಲ್ ಕೂಡ ರಾಖಿ ವಿರುದ್ಧ ನೀಡಿದ್ದ ದೂರನ್ನೂ ವಜಾಗೊಳಿಸಲಾಗಿದೆ. ಇಬ್ಬರೂ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರೋ ಹಿನ್ನೆಲೆಯಲ್ಲಿ ಕೇಸ್ ವಜಾ ಆಗಿದೆ.

46
ದುಬೈನಲ್ಲಿ ನಟಿ

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ರಾಖಿ ಸಾವಂತ್​. ದುಬೈನಲ್ಲಿ “ಜರೂರತ್” ಹಾಡಿನ ಬಿಡುಗಡೆಯ ಸಮಾರಂಭದಲ್ಲಿ ಶಹಬಾಜ್ ಖಾನ್ ಜೊತೆ ಪ್ರೆಸ್​ಮೀಟ್​ ಮಾಡುವ ಸಂದರ್ಭದಲ್ಲಿ ತನ್ನ ಅಪ್ಪ ಯಾರೆಂದು ತಿಳಿಸಿದ್ದಾರೆ.

56
ಅಮ್ಮನ ನಿಧನದ ಬಳಿಕ ರಹಸ್ಯ ಬಹಿರಂಗ

ನನ್ನ ಅಮ್ಮ ಕೆಲ ತಿಂಗಳ ಹಿಂದೆ ತೀರಿಕೊಂಡರು. ಅಮ್ಮ ನಿಧನರಾದ ಬಳಿಕ ಅಪ್ಪ ಯಾರೆಂದು ತಿಳಿದಿದೆ. ನನ್ನ ರಕ್ತ ಪರೀಕ್ಷೆ ಬೇಕಿದ್ದರೆ ಮಾಡಿ. ಅದು ಟ್ರಂಪ್​ ಟ್ರಂಪ್​ ಎನ್ನುತ್ತಿದೆ. ನನ್ನ ಅಪ್ಪ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ (Donald Trump) ಎಂದಿದ್ದಾರೆ ರಾಖಿ ಸಾವಂತ್​!

66
ವೀಸಾ ಬೇಕಿದ್ರೆ ಹೇಳಿ

ನಿಮಗೆ ಅಮೆರಿಕದ ವೀಸಾ ಬೇಕಿದ್ದರೆ ಹೇಳಿ, ಶೀಘ್ರದಲ್ಲಿಯೇ ಕೊಡಿಸುತ್ತೇನೆ. ನನಗೆ ನನ್ನ ಅಪ್ಪ ಟ್ರಂಪ್​ ನೆರವಾಗ್ತಾರೆ ಎಂದು ತಮಾಷೆ ಮಾಡುವ ಮೂಲಕ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ ನಟಿ!

ರಾಖಿಯ ವಿಡಿಯೋ ಈ ಲಿಂಕ್​ನಲ್ಲಿದೆ ನೋಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories