ಮುಂದಿನ ಸಿನಿಮಾ ಕುರಿತು ಪೋಸ್ಟ್ ಮಾಡಿ ದುರಂತ ಅಂತ್ಯಕಂಡ ಜಮ್ತಾರಾ ಸೀಸನ್ 2 ಖ್ಯಾತಿಯ ನಟ, ಕೇವಲ 25ರ ಹರೆಯದ ಯುವ ನಟ ಸಚಿನ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್. ಕೆಲಸ, ಸಿನಿಮಾ ಎರಡಲ್ಲೂ ಸೈ ಎನಿಸಿಕೊಂಡಿದ್ದ ನಟ ಬದುಕು ಅಂತ್ಯಗೊಳಿಸಿದ್ದೇಕೆ?
ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕೆಲಸ ಮಾಡುತ್ತಾ, ಸಿನಿಮಾದಲ್ಲೂ ಭಾರಿ ಜನಪ್ರಿಯತೆ ಗಳಿಸಿರುವ ಯುವನಟ ಸಚಿನ್ ಚಾಂದ್ವಾಡೆ ದುರಂತ ಅಂತ್ಯಕಂಡಿದ್ದಾರೆ. ಕಳೆದ ವಾರ ತನ್ನ ಮುಂದಿನ ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ನಟ ಸಚಿನ್ ಇದೀಗ ಬುದುಕು ಅಂತ್ಯಗೊಳಿಸಿದ್ದಾರೆ. ಕೇವಲ 25ರ ಹರೆಯದ ಸಚಿನ್, ಜಮ್ತಾರಾ ಸೀರಿಸ್‌ನಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದರು. ಇದೀಗ ದಿಢೀರ್ ಸಾವಿನ ಕದ ತಟ್ಟಿದ್ದೇಕೆ ಅನ್ನೋ ಅನುಮಾನಗಳು ಹುಟ್ಟಿದೆ.
26
ಯಾರು ಈ ಸಚಿವನ್ ಚಾಂದ್ವಾಡೆ?
ಸಚಿನ್ ಚಾಂದ್ವಾಡೆ ಮರಾಠಿ ನಟ. ಜಮ್ತಾರಾ 2 ಸೀಸನ್‌ನಲ್ಲಿ ಪಾಲ್ಗೊಂಡಿದ್ದ ಸಚಿನ್ ಭಾರಿ ಜನಪ್ರಿಯತೆ ಪಡೆದಿದ್ದರು. ಅಸುರ್ವನ ಸೇರಿದಂತೆ ಹಲವು ಸೀರಿಸ್‌ನಲ್ಲಿ ಸಚಿನ್ ಶೂಟಿಂಗ್‌ನಲ್ಲೂ ತೊಡಗಿಸಿಕೊಂಡಿದ್ದರು. ಸಚಿನ್, ಮರಾಠಿ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಾ ಭಾರಿ ಜನಪ್ರತೆಯ ಪಡೆದಿದ್ದಾರೆ. ಇದೀಗ ಮುಂದಿ ಸಿನಿಮಾದಲ್ಲಿ ನಾಯಕನ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೂ ಮೊದಲೇ ಸಚಿನ್ ಬದುಕು ಅಂತ್ಯಗೊಳಿಸಿದ್ದಾರೆ.
36
ಬದುಕುಳಿಯಲಿಲ್ಲ ಸಚಿನ್
ಜಲಗಾಂವ್ ಜಿಲ್ಲೆಯ ಪರೋಲಾ ತಾಲೂಕಿನ ಉಂದ್ರಿಖೆಡೆಯಲ್ಲಿ ದುರಂತ ನಡೆದಿದೆ. ಸರಿಸುಮಾರು ಮಧ್ಯಾಹ್ನ 1.30ಕ್ಕೆ ಸಚಿನ್ ಸಾವು ಕಂಡಿದ್ದಾರೆ. ಮನೆಯ ಮೇಲ್ಚಾವಣಿಯಲ್ಲಿ ಬದುಕು ಅಂತ್ಯಗೊಳಿಸಲು ಯತ್ನಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಕುಟುಂಬಸ್ಥರು ಸಚಿನ್ ದೇಹ ಅಸ್ವಸ್ಥವಾಗಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಆರೋಗ್ಯ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕತ್ಸೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಸಚಿನ್ ಬದುಕಿ ಉಳಿಯಲಿಲ್ಲ.
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ಜಮ್ತಾರಾ ಸೀಸನ್ 2 ಸೀರಿಸ್‌ನಲ್ಲಿ ಸಣ್ಣ ಪಾತ್ರ ಮಾಡಿದ್ದ ಸಚಿನ್ ಅಭಿಮಾನಿಗಳ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದರು. ಸಚಿನ್ ಮುಂದಿನ ಸಿನಿಮಾ ಅಸುರವನ. ಮುಂದಿನ ಪ್ರಾಜೆಕ್ಟ್ ಕುರಿತು ಸಚಿನ್ ಕಳೆದವಾರ ಪೋಸ್ಟ್ ಮಾಡಿದ್ದರು.
56
ಸೋಮಾ ಪಾತ್ರದಲ್ಲಿ ಸಚಿನ್
ಸೋಮಾ ಪಾತ್ರದಲ್ಲಿ ಸಚಿನ್
ಅಸುರವನ ಸಿನಿಮಾದಲ್ಲಿ ಸೋಮಾ ಎಂಬ ಪಾತ್ರ ನಿಭಾಯಿಸುತ್ತಿರುವುದಾಗಿ ಸಚಿನ್ ಹೇಳಿಕೊಂಡಿದ್ದರು.ಸಚಿನ್ ರಾಮಚಂದ್ರ ಮಾಂಗೋ ನಿರ್ದೇಶನದ ಈ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿಲ್ಲ, ಎಲ್ಲರೂ ಬೆಂಬಲಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಪೋಸ್ಟ್ ಮಾಡಿದ 5ದಿನಕ್ಕೆ ದುರಂತ ಅಂತ್ಯಕಂಡಿದ್ದಾರೆ.
66
ಪುಣೆಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್
ಪುಣೆಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್
ಸಿನಿಮಾದಲ್ಲಿ ಆಸಕ್ತಿ, ಆದರೆ ವೃತ್ತಿಯಲ್ಲಿ ಸಚಿನ್ ಸಾಫ್ಟ್‌ವೇರ್ ಎಂಜಿನೀಯರ್. ಪುಣೆ ಐಟಿ ಪಾರ್ಕ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಸಚಿನ್, ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಕೆಲಸಕ್ಕೆ ಹಾಜರಾಗುತ್ತಾರೆ. ಆದರೆ ದಿಢೀರ್ ಸಾವು ಸಿನಿಮ ಲೋಕದಲ್ಲಿ ಕೋಲಾಹಲ ಸೃಷ್ಟಿಸಿದೆ.