ಇತ್ತೀಚೆಗೆ, ರಾಜ್ ಕುಂದ್ರಾ ಅವರನ್ನು ವಿಮಾನ ನಿಲ್ದಾಣದಲ್ಲಿ ಕ್ಲಿಕ್ ಮಾಡಲಾಯಿತು. ರಾಜ್ ಕುಂದ್ರಾ ಮತ್ತೊಮ್ಮೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಅವರು ಸ್ಕ್ವಿಡ್ ಗೇಮ್ ತರಹದ ಮಸ್ಕ್ ಧರಿಸಿ ಕಾಣಿಸಿಕೊಂಡರು.
ಪಾಪರಾಜಿಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡ ವೀಡಿಯೊ ಕ್ಲಿಪ್‌ನಲ್ಲಿ, ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮುಂಬೈ ವಿಮಾನ ನಿಲ್ದಾಣದಿಂದ ಬಿಳಿ ಹೂಡಿ ಮತ್ತು ನೀಲಿ ಜೀನ್ಸ್‌ನಲ್ಲಿ ಹೊರಬರುತ್ತಿರುವುದನ್ನು ಕಾಣಬಹುದು.
ಇವರನ್ನು ಉರ್ಫಿಯ ಜೊತೆ ಕೊಲಾಬ್ ಮಾಡಬೇಕು' ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟಿಜನ್, 'ಪಾಪ ಮುಖ ತೋರಿಸಲು ಯೋಗ್ಯನಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬರು 'ಮುಂದಿನ ಪೀಳಿಗೆ ಸ್ಪೈಡರ್‌ಮ್ಯಾನ್ ಲೋಡಿಂಗ್' ಎಂದು ಕಾಮೆಂಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಒಬ್ಬ ವ್ಯಕ್ತಿ ಹೀಗೆ ಕಾಮೆಂಟ್ ಮಾಡಿದ್ದಾರೆ -' ಅವನಿಗೆ ಈಗ ಕೋವಿಡ್ ಬಂದರೆ. ನಾನು ನಂಬಿಕೆಯನ್ನು ಕಳೆದುಕೊಳ್ಳುತ್ತೇನೆ' ಸುರಕ್ಷತಾ ಕಾರಣಗಳಿಗಾಗಿ ಈ ರೀತಿಯ ಮಾಸ್ಕ್‌ಗಳನ್ನು ಅನುಮತಿಸಬಾರದು' ಎಂದು ಇನ್ನೊಬ್ಬರು ಬರೆದಿದ್ದಾರೆ,
'ಕೊರೋನಾ ಸಂಪೂರ್ಣವಾಗಿ ಹೋದ ನಂತರ ರಾಜ್ ಏನು ಧರಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೇನೆ' ಎಂದು ಮತ್ತೊಬ್ಬ ವ್ಯಕ್ತಿ ಕೇಳಿದ್ದಾರೆ,'ನಾನು ಆಶ್ಚರ್ಯ ಪಡುತ್ತೇನೆ, ಮುಂಬೈನ ಹ್ಯೂಮಿಡ್‌ನಲ್ಲಿ ಅವನು ಅದನ್ನು ಹೇಗೆ ಧರಿಸುತ್ತಾನೆ. ನನಗೆ ಸಾಮಾನ್ಯ ಮಾಸ್ಕ್ ಧರಿಸುವುದು ಕಷ್ಟ' ಎಂದಿದ್ದಾರೆ ಇನ್ನೊಬ್ಬರು.
ಕಳೆದ ತಿಂಗಳು, ರಾಜ್ ಹೀಗೆ ಮೊದಲ ಬಾರಿಗೆ ಪಾರದರ್ಶಕ ಮುಖವಾಡವನ್ನು ಧರಿಸಿದ್ದರು ಮತ್ತು ಅವರ ಸಂಪೂರ್ಣ ಮುಖವನ್ನು ಮುಚ್ಚಿದ್ದರು ಅವರು ತಮ್ಮ ತಾಯಿ ಉಷಾ ರಾಣಿ ಕುಂದ್ರಾ, ಶಿಲ್ಪಾ ಅವರ ತಾಯಿ ಸುನಂದಾ ಶೆಟ್ಟಿ ಮತ್ತು ಅವರ ಸಹೋದರಿ ಶಮಿತಾ ಅವರ ಕಾರಿನಲ್ಲಿ ಕಾಣಿಸಿಕೊಂಡಿದ್ದರು
ಕಳೆದ ವರ್ಷ ಜುಲೈನಲ್ಲಿ ಪೋರ್ನ್ ದಂಧೆಗೆ ಸಂಬಂಧಿಸಿದಂತೆ ರಾಜ್ ಅವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು. ಎಎನ್‌ಐ ವರದಿಯ ಪ್ರಕಾರ, ರಾಜ್ ಹಾಟ್‌ಶಾಟ್ಸ್ ಎಂಬ ಚಂದಾದಾರರಿಂದ ಚಾಲಿತ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಪೋರ್ನ್ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ವಿತರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ ಮತ್ತು ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.
ಸಬ್ಬೀರ್ ಖಾನ್ ಅವರ ರೋಮ್-ಕಾಮ್ ಡ್ರಾಮಾ ನಿಕಮ್ಮದಲ್ಲಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಅವರ ಪುತ್ರ ಅಭಿಮನ್ಯು ದಸ್ಸಾನಿ, ಗಾಯಕ ಶೆರ್ಲಿ ಸೆಟಿಯಾ ಮತ್ತು ಹಾಸ್ಯನಟ ಸುನಿಲ್ ಗ್ರೋವರ್ ಕೂಡ ನಟಿಸಲಿದ್ದಾರೆ ಮತ್ತು ಜೂನ್ 17, 2022 ರಂದು ಶಿಲ್ಪಾ ಅವರು ಸೋನಾಲ್ ಜೋಶಿಯವರ ಸುಖೀ ಚಿತ್ರವನ್ನೂ ಸಹ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.